Monthly Archive: March 2019
“ಅಬ್ಬಬ್ಬಾ, ಏನು ಸೆಕೆ! ಕೆರೆಯೋ, ನದಿಯೋ ಇದ್ದಿದ್ದರೆ ಹಾರಿ ಬಿಡಬಹುದಿತ್ತು ಅನಿಸ್ತದೆ.” ನನ್ನ ಬಾಯಿಂದ ಹೊರಬಂದ ಈ ಮಾತುಗಳು ಸುಮ್ಮನೇ ಅಲಂಕಾರಿಕವಾಗಿ ಹೇಳಿದ್ದಲ್ಲ. ಬೇಸಿಗೆಯಲ್ಲಿ ನೀರಾಟದಲ್ಲಿ ಕಾಲ ಕಳೆಯುವ ಬಾಲ್ಯ ನನಗಿತ್ತು. ಬಾಳೆದಿಂಡನ್ನು ಹಿಡಿದು ಈಜು ಕಲಿತು,ಮೊದಮೊದಲು ಸಾಕಷ್ಟು ನೀರು ಕುಡಿದು, ಮುಳುಗಿ ಎದ್ದು ತಕ್ಕಮಟ್ಟಿಗೆ ಈಜು...
ನಮ್ಮ ಈ ಸುಂದರ ಬದುಕು ಅನ್ನುವಂತದ್ದು ಮನುಷ್ಯನಿಗೆ ಸಿಕ್ಕಿದ ಬಹು ದೊಡ್ಡ ಕೊಡುಗೆ. ನಾವು ನಮ್ಮ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಗುರಿಯೆಡೆಗೆ ಧಾವಿಸುತ್ತಿರುತ್ತೇವೆ. ನಮ್ಮ ಎಲ್ಲಾ ಸಾಧನೆಯ, ಯಶಸ್ಸಿನ ಹಿಂದಿನ ಸ್ಫೂರ್ತಿಯ ಸೆಲೆ ಮತ್ತು ನೆಲೆ ಸುಖೀ ಸಂಸಾರದಲ್ಲಡಗಿದೆ. ನಾವು ಎಲ್ಲೇ ಇರಲಿ, ಹೇಗೇ ಇರಲಿ...
ಅಪ್ಪ.. ಬಾಳ ಜೋಳಿಗೆ ಹಿಡಿದು ನನ್ನೆದೆಯ ನಡುಮನೆಯ ಹೊಸ್ತಿಲಲಿ ನಿಂತಿರುವ ಜೋಗಪ್ಪ ಆ ಜೋಳಿಗೆ ತುಂಬ ಪ್ರೀತಿ ಎಂಬ ಆಸ್ತಿ ಹೊತ್ತುತಂದಿರುವ ಅರಸ ಆತ ನನ್ನಪ್ಪ.. ಅಪ್ಪ ಪದ ಚಿಕ್ಕದೆ ಆದ್ರೆ ಕೊಡೋ ಅರ್ಥ,ಭಾವನೆ,ನೆನಪಿಗೆ ಹೋಲಿಕೆ ಇಲ್ಲ.ಅಣ್ಣ ಅಪ್ಪನ ತರ ಅಂತಾರೆ ಇರಬೋದೇನೋ ಆದ್ರೆ ಅಣ್ಣನೇ ಅಪ್ಪ ಅಂತ...
ನಾನಾಗ ಪ್ರೈಮೆರಿ ಶಾಲೆ ಕಲಿಯುತ್ತಿದ ದಿನಗಳವು. ಈ ಹಿಂದೆ ಹೇಳಿದಂತೆ ನನ್ನ ಅಜ್ಜನಮನೆಯಿಂದ ಸೋದರಮಾವನ ಮಕ್ಕಳಾದ ಬಾವಂದಿರ ಜೊತೆಗೆ ಕುಂಬಳೆಸೀಮೆಯ ಇಚ್ಲಂಪಾಡಿ ಹಿರಿಯ ಬುನಾದಿ ಕಳತ್ತೂರು ಶಾಲೆಗೆ ಹೋಗುತ್ತಿದ್ದ ಕಾಲ. ಅಜ್ಜನಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ. ಮನೆಯಿಂದ ಶಾಲೆಗೆ ಐದುನಿಮಿಷದ ಹಾದಿ. ಈಗಿನಂತೆ ಆ ಕಾಲದಲ್ಲಿ...
ಮಾರ್ಚ್ 22, ವಿಶ್ವ ಜಲದಿನದ ಪ್ರಯುಕ್ತ ಈ ಚಿತ್ರ.. – ಭಾರತಿ ಪಿ.ಜಿ +18
ಉಕ್ಕೇರಿ ಹರಿಯುತಿದ್ದ ನದಿ , ಹಳ್ಳ , ತೊರೆ, ಎಲ್ಲಿಯಾಯಿತು ಮರೆ ?, ಬಾಳಲಾದೀತೇ ನೀರಿಲ್ಲದಿರೆ ?, ನೀರೇ ಸಕಲ ಚರಾಚರಗಳಿಗೂ ಆಸರೆ . ಅತ್ಯಮೂಲ್ಯ ನೀರು, ಬೇರೇನಿಲ್ಲದಿದ್ದರೂ ಇದರಿಂದ ಉಳಿಯಬಹುದು ಉಸಿರು, ಮರ ಗಿಡ ಬಳ್ಳಿಗಳಲ್ಲೂ ಕೊನರಲು ಚಿಗುರು, ಹುಡುಕುವುದು ನೀರನ್ನೇ ಬೇರು. ಹಿಂದೆ ತುಂಬಿ...
“ನೀನಿರಬೇಕಮ್ಮ ಬಾಗಿಲೊಳಗೆ ಶಾಲೆ ಜೈಲಿಂದ ಹೊರ ಬಂದ ಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನ ಎದೆಯೊಳಗೆ ಇಂಗಿಸಿಕೊಳ್ಳಲು ನೀನಿರಬೇಕಮ್ಮ ಬಾಗಿಲೊಳಗೆ ಮರೆತು ಹೋಗುವ ಸೂರ್ಯ ಚಂದ್ರ, ನಕ್ಷತ್ರ, ಮಿಂಚು ಹುಳುಗಳ ಕರೆದು ಮನೆಯ ಮೊಮ್ಮಗಳೊಡನೆ ಮಾತಾಡ ಹೇಳಲು” ಇದು ಅವ್ವನನ್ನು ಕುರಿತು ನಾನೇ ಬರೆದ ದೀರ್ಘ ಕವಿತೆಯ...
ಗೆಳತಿ ಹೇಳಿದಳು ಕವಿತೆ ಬರೆ ಎಂದು, ಬರೆಯ ಹೊರಟೆ… ಮಸ್ತಿಷ್ಕದಾಳದಲಿ ಭಾವನೆಗಳೇನೋ ತುಂಬಿ ತುಳುಕುತಿದೆ ಸಿಹಿಯೋ.. ಕಹಿಯೋ.. ತೊಳಲಾಟ, ಚಡಪಡಿಕೆ.. ಅತಿಯಾದ ಸ್ಪಂದನಕೂ ಇರಬಹುದೇನೋ.. ಒಳಮುಷ್ಟಿಯಂತಿರುವ ಕವಾಟದೊಳಗೆ ಬಚ್ಚಿಟ್ಟ ಯಂತ್ರಕೆ ಕೀಲ್ಬೆಣ್ಣೆ ಹೆಚ್ಚಾಯಿತೇನೋ.. ಒಂದೇ ಸಮನೆ ಸಡಿಲವಾಗಿ ಶಿವನ ಢಮರುಗವಾಗಿದೆ ಕವಿತೆ ಕೇಳುವರಾರು..? ಗೆಳತಿ ಹೇಳಿದಳು, ವಿಶ್ರಾಂತಿ...
ವಸಂತನೆಂದರೆ ಗೋಧೂಳಿ ಕಾಲದ ಇನಿಯ ತರುವ ಒಂದು ಸುತ್ತು, ಮೂರು ಸುತ್ತು, ಏಳು ಸುತ್ತಿನ ನಾಲ್ಕು ಮೊಳ ಮಲ್ಲಿಗೆಯ ಘಮಲು, . ಮದುವಣಗಿತ್ತಿಯ ತುರುಬನು ಸುತ್ತಿರುವ ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ, ಮಂಗಳೂರು ಮಲ್ಲಿಗೆಗಳು, ಮಲ್ಲಿಗೆಯಿಲ್ಲದೆ ಅಲಂಕಾರ ಮುಗಿಸದ ಹೆಂಗಳೆಯರು . ಮುಂಬರುವ ಇನಿಯನ...
ಕೆ ಜಿ ತರಗತಿಗಳು ನಮ್ಮ ಹಳ್ಳಿಗೆ ಬಂದು ಮಕ್ಕಳನ್ನೆಲ್ಲಾ ತಕ್ಕಡಿಯೊಳಗಿಟ್ಟು ತೂಗಿಕೊಳ್ಳುವ ಮೊದಲೇ ನಾವುಗಳು ನೇರವಾಗಿ ಒಂದನೇಯ ತರಗತಿಯ ಬೆಂಚಿನ ಮೇಲೆ ಸ್ಲೇಟು, ಬಳಪ ಹಿಡಿದು, ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತ್ತಿದ್ದೆವು. ಸಾಮಾನ್ಯವಾಗಿ ನಾವುಗಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚು ಕಡಿಮೆ 5 ವರ್ಷ ಕಳೆದಂತೆ ಶಾಲೆಗೆ ಸೇರಿಸುವುದು...
ನಿಮ್ಮ ಅನಿಸಿಕೆಗಳು…