Monthly Archive: October 2017
ನಮ್ಮಲ್ಲಿ ಒಂದು ಮಾತಿದೆ- “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”. ಇದು ಅಕ್ಷರಶಃ ಸತ್ಯ. ಇತ್ತೀಚಿನ ವೈದ್ಯಕೀಯ ವಿದ್ಯಾಮಾನಗಳನ್ನು ಮತ್ತು ವೈದ್ಯರ ಅನುಭವಗಳನ್ನುಗಮನಿಸಿದರೆ ಈ ಗಾದೆಯ ಮೊದಲಾರ್ಧಕ್ಕೆ ಹೆಚ್ಚು ತಾಳೆಯಾಗುತ್ತದೆ. ಇಂದಿನ ಪೀಳಿಗೆಯವರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಬರಲು ಕಾರಣ ಬದಲಾದ ಜೀವನ ಶೈಲಿ ಮತ್ತು...
ನೆತ್ತಿಯ ಬಿಳಿಯನ ಕಡುನೋಟಕೆ ನೆತ್ತರಿನ ಬೆವರೇ ಮೈತಂಪಿಟ್ಟಿದೆ ಹೊತ್ತ ಜಂಬಿಟ್ಟಿಗೆಯ ತಲೆ ಭೂ ಸುತ್ತಿದೆ ನಡುಗಿ ನಲುಗಿದೆ ಬಡಗಾಲ ನಡಿಗೆ. ಈ ಗುಡುಗಲೂ ಜಗವರಿಯದ ಕೂಸು ಜಲ್ಲಿ ಸೋಪಾನದಿ ನಿಶ್ಚಿಂತ ನಿದ್ದೆ..! ಬಿಸಿಲ ಹೊದ್ದಿಹ ತೇಪೆಯಲಿ ಬೆಚ್ಚನೆ ನೊಸಲರಳಿಸಿ ಸವಾಲು ‘ಕೆಂಪಂಗೆ..!’ ರಾವುಗಣ್ಗಳಿಗೆ ಕಾವಿಡುವ ರೆಪ್ಪೆಗಳು ಉಸುಕ...
ಹೆಚ್ಚಾಗಿ ಪಾಯಸ ತಯಾರಿಕೆಯಲ್ಲಿ ಬಳಕೆಯಾಗುವ ಬಿಳಿ ಬಣ್ಣದ ಮುತ್ತುಗಳಂತಿರುವ ಸಾಗು ಅಥವಾ Sago ಎಲ್ಲರಿಗೂ ಪರಿಚಿತ. ಇದನ್ನು ಸಬ್ಬಕ್ಕಿ, ಸೀಮೆ ಅಕ್ಕಿ, ಸಾಗಕ್ಕಿ, ಸಾಬುದಾನಿ, ಸಾಬಕ್ಕಿ, ಜವ್ವರಿಶಿ ಇತ್ಯಾದಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಿಳಿಬಣ್ಣದ ಕಾಳಿನಂತೆ ಇದ್ದರೂ ಬೆಂದ ಮೇಲೆ ಪಾರದರ್ಶಕವಾದ ಗೋಳಗಳಂತೆ ಕಾಣುವುದು ಸಬ್ಬಕ್ಕಿಯ ವಿಶೇಷತೆ....
ಉತ್ಥಾನದ್ವಾದಶಿಯಲ್ಲಿ ತುಳಸಿಪೂಜೆ ಸಂಭ್ರಮ ಚೆನ್ನಾಗಿಯೇ ಇದ್ದಿರಬೇಕಲ್ಲವೇ..? ನಿಜ..ಆದರೆ ಇಂದಿನ ಗಡಿಬಿಡಿಯ ನಾಗಾಲೋಟದ ಜೀವನ ಕ್ರಮದಿಂದಾಗಿ ಈ ತರಹದ ಹಬ್ಬಗಳ ಸಂಭ್ರಮವನ್ನು ಅನುಭವಿಸಲು..ಆಸ್ವಾದಿಸಲು ಸಮಯವೇ ಇಲ್ಲದಂತಾಗಿದೆ ಅನಿಸುತ್ತದೆ ನನಗೆ. ಈಗಂತೂ ಹೆಚ್ಚಿನ ಮನೆಗಳಲ್ಲಿ ಹಬ್ಬಗಳ ಆಚರಣೆಯೇ ಇಲ್ಲವಾಗಿದೆ..! ಇರಲಿ…ಕಾಲಾಯ ತಸ್ಮೈನಮ:…ಇದನ್ನೆಲ್ಲಾ ಯೋಚಿಸುವಾಗ ನನ್ನ ಮನಸ್ಸು ಬಾಲ್ಯದಲ್ಲಿನ ತುಳಸಿಪೂಜೆಯ ಗಮ್ಮತ್ತನ್ನು...
ಕೃಷ್ಣಮೂರ್ತಿ ಬಿಳಿಗೆರೆ ಹಲವಾರು ಸೃಜನ ಶೀಲ ಆಸಕ್ತಿಗಳನ್ನು ತನ್ನ ವ್ಯಕ್ತಿತ್ವದೊಂದಿಗೆ ಬೆರೆಸಿಕೊಂಡಿರುವ ಕುತೂಹಲದ ವ್ಯಕ್ತಿ. ತತ್ವ ಪದ ಗಾಯನ, ಕಾವ್ಯ, ನಾಟಕ ರಚನೆ ಇವುಗಳ ಜೊತೆಗೆ ಸಾವಯವ ಕೃಷಿ, ನಾಟಿ ಬೀಜ, ಮಳೆ ನೀರು ಸಂಗ್ರಹದ ಬಗೆಗೆ ಅತೀವ ಕಾಳಜಿಯುಳ್ಳವರು. ಆಧುನಿಕೋತ್ತರ ಸಮಾಜ ಮರೆತಿರುವ ನಮ್ಮ ಪರಂಪರೆಯ...
ಹಾಂ.. ದೀಪಾವಳಿ ಹಬ್ಬ ಮತ್ತೆ ಬಂದೇ ಬಂತು..! ದೀಪಗಳ ಮಾಲೆಯಿಂದ ಝಗಝಗಿಸುವ, ಸಿಹಿತಿಂಡಿಗಳನ್ನು ಮನ:ಪೂರ್ತಿ ಹೊಟ್ಟೆಗಿಳಿಸಬಲ್ಲ ಹಬ್ಬ ಯಾರಿಗೆ ಇಷ್ಟವಿಲ್ಲ ಹೇಳಿ ? ಎಲ್ಲಾ ಹಬ್ಬಗಳಿಗಿಂತ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನ!. ಯಾಕೆಂದರೆ ಇದು ಅತೀ ಸಂಭ್ರಮದ ಹಬ್ಬ. ಹಿಂದುಗಳು ಮಾತ್ರವಲ್ಲದೆ ಸಿಖ್, ಜೈನ ಮತ್ತು ಬೌಧ್ಧ...
ಗರಿಕೆ, ಗರಿಕೆ ಹುಲ್ಲು ಎಂದು ಕನ್ನಡದಲ್ಲಿಯೂ ದೂರ್ವಾ,ಅನಂತ ಎಂದು ಸಂಸ್ಕೃತದಲ್ಲಿಯೂ ಈ ಹುಲ್ಲು ಅರಿಯಲ್ಪಡುತ್ತದೆ. ವಿಘ್ನ ನಿವಾರಕನಾದ ಗಣಪತಿಗೆ ಇದು ಅತ್ಯಂತ ಪ್ರಿಯವಾಗಿದ್ದು ಅವನ ಎಲ್ಲಾ ಪೂಜಾಕಾರ್ಯಗಳಲ್ಲೂ ಪ್ರಾಶಸ್ತ್ಯವನ್ನು ಪಡೆಯುತ್ತದೆ. ಮಾತ್ರವಲ್ಲದೆ ಇದರಲ್ಲಿ ಹಲವಾರು ಔಷಧೀಯ ಗುಣಗಳು ಅಡಕವಾಗಿವೆ. ಇದರ ವೈಜ್ಞಾನಿಕ ಹೆಸರು Cynodon dactylon ಎಂದಾಗಿದ್ದು...
ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ನಶ್ವರದಿಂದ ಐಶ್ವರ್ಯದೆಡೆಗೆ ಕೊಂಡೊಯ್ಯುವ ಸಂಕೇತವೇ ದೀಪಾವಳಿ. ದೀಪ ಎಂದರೆ ಬೆಳಕು, ಜ್ಯೋತಿ. ದೀವಿಗೆ, ಹೀಗೆ ಬೆಳಕಿಗೆ ಹಲವಾರು ಪರ್ಯಾಯ ಪದಗಳಿದ್ದರೂ ಅಂತರಾರ್ಥ ನಮ್ಮ ಬಾಳು ಬೆಳಗ ಬೇಕು, ಪ್ರಜ್ವಲಿಸಬೇಕೆಂಬುದು. “ಎಣ್ಣೆ ಹೊಯ್ಯಮ್ಮ ದೀಪಕೆ” ಸೇಡಿಯಾಪು ಕೃಷ್ಣ ಭಟ್ಟರ ಕವನದ ಸಾಲು ಇಲ್ಲಿ...
ನಿನ್ನ ಬಗ್ಗೆ ಹೇಳಹೊರಡುವುದು ಶರಧಿಗೆ ಕೊಡುವ ಷಟ್ಪದಿಯ ದೀಕ್ಷೆಯಾದೀತೆಂಬ ಅಳುಕು ಕೃಷೀವಲ ನೀನು ಶ್ರದ್ಧೆಯಿಂದ ಮಾಡುತ್ತಲೇ ಹೋದೆ ನಾಡಿಗರೆದೆಯ ಉತ್ತುವ ಬಿತ್ತುವ ಕಾಯಕ ಹತ್ತೇ ಹದಿನೆಂಟೇ ಮುಖ ಮೊಳಕೆ ಎಲ್ಲಕ್ಕೂ ಬೆಳೆವ ಬೆಳೆಸುವ ಬದುಕ ಹಿರಿದಾಗಿಸುವ ತವಕ ಆನೆಯಂತೆ ನಡೆದೆ ಬಿಚ್ಚುತ್ತ ನಿನ್ನದೇ ದಾರಿ ;ಇಲ್ಲ ರಾಜಿ...
ಮಲೇಶ್ಯಾದ ಕೌಲಾಲಂಪುರ್ ನಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿದೆ ‘ಭಟು ಕೇವ್ಸ್’ ಎಂದು ಕರೆಯಲ್ಪಡುವ ಅದ್ಭುತ ಪ್ರಾಕೃತಿಕ ವಿಸ್ಮಯ. ಇದು ‘ಲೈಮ್ ಸ್ಟೋನ್’ ನಿಂದ (ಸುಣ್ಣದ ಕಲ್ಲು) ರಚನೆಯಾದ ಗುಹೆಯಾಗಿದ್ದು,ಸುಮಾರು 400 ಮಿಲಿಯನ್ ವರುಷಗಳ ಹಿಂದೆ ರೂಪುಗೊಂಡಿತೆಂದು ನಂಬಿಕೆ. ನಮ್ಮ ಗೈಡ್ ವಿವರಿಸಿದ ಪ್ರಕಾರ, ತುಂಬಾ ಹಿಂದೆಯೇ ಇದರ ಅಸ್ತಿತ್ವವಿದ್ದರೂ,...
ನಿಮ್ಮ ಅನಿಸಿಕೆಗಳು…