Monthly Archive: July 2014
ಮೈಸೂರಿನ ಕೃಷ್ಣಮೂರ್ತಿಪುರದಲ್ಲಿರುವ ಭಗಿನಿ ಸೇವಾ ಸಮಾಜ ಶಾಲೆಯಲ್ಲಿ 29.7.2014 ರಂದು ಬೆಳಗ್ಗೆ 10 ಗಂಟೆಗೆ ಹೆಂಗೆಳೆಯರ, ಮಕ್ಕಳ, ಗಂಡಸರ, ಪತ್ರಕರ್ತರ ದಂಡೇ ನೆರೆದಿತ್ತು. ಅಲ್ಲಿ ದೇಶೀ ಆಟಗಳ ಸ್ಪರ್ಧೆ ಏರ್ಪಡಿಸಿದ್ದರು. ‘ ಡಾ. ಧರಣೀದೇವಿ ಮಾಲಗತ್ತಿ, (ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು) ಕುಂಟಬಿಲ್ಲೆ ಆಟದ ಬಿಲ್ಲೆ ಹಾಕುವ...
ಊರು ಕೇರಿ ದಾಟಿ ಬಂತು ನೋಡಿ ಸಿಟಿ! ನೀರು ತುಂಬಿ ಕೊಳೆತ ನಾತ ಕಸದ ರಾಶಿ ಸುತ್ತ ಮುತ್ತ! ಕಣ್ಣು ಮೂಗು ಎರಡೂ ಘಾಸಿ ಹಳ್ಳಿಯದುವೆ ಎಷ್ಟೋ ವಾಸಿ!!! ಸುಳಿಯಿತೆನ್ನ ಚಿತ್ತ, ತುಂಬಿದ ದವಾಖಾನೆಯತ್ತ! ಉಗುಳಿದರೂ ರೋಗ, ಕೆಮ್ಮಿದರೂ ರೋಗ! ಸಿರಿವಂತರ ವೇಗ, ದವಾಖಾನೆಗಿಲ್ಲ ಬೀಗ!!! ಬಂದವಳೊಬ್ಬ...
ಅವನ ಒಂದು ಕಣ್ಣ ಬೆಳಕು ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು ನೂರು ಭಾವ ಹೊಮ್ಮಿ ಫಲಿಸಿ ಅವನ-ಅವಳ ನಡುವಲಿ ಉದಿಸಿತೊಂದು ಪ್ರೇಮ ರಾಗ. ಬಾನಿನೊಲವು ಕೆಳಗೆ ಸುರಿದು ಇಳೆಯ ತುಂಬ ಜೀವ ಚೆಲುವು ಭುವಿಯ -ಬಾನ ನಡುವಲಿ ಹಾಗೇ ಸುಮ್ಮಗೊಂದು ಜೀವ ರಾಗ. ಕ್ಷಣದ...
ಕತ್ತಲೆ ತುಂಬಿದ ನಿರ್ಜನ ರಸ್ತೆ. ಬೀದಿ ದೀಪದ ಮಂದ ಬೆಳಕು.. ಮಗುವೊಂದು ರಸ್ತೆಗೋಡುತ್ತದೆ. ರಾಕ್ಷಸನಂತೆ ನುಗ್ಗಿದ ಲಾರಿಯೊಂದು ರಸ್ತೆಮಧ್ಯ ತಲುಪಿದ ಮಗುವಿಗೆ ಢಿಕ್ಕಿ ಹೊಡೆದು ನಿಲ್ಲುವುದು. ಮಗು ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಾ ಬಿದ್ದಿತ್ತು. ಲಾರಿ ಡ್ರೈವರ್ ಅತ್ತಿತ್ತ ನೋಡುತ್ತಾ ಯಾರೂ ಇಲ್ಲವೆನ್ನುವುದ ಖಾತ್ರಿ ಪಡಿಸಿಕೊಂಡು...
ತುರ್ತುಗಳ ನಡುವೆ ಸಂಯಮ ಅನಿವಾರ್ಯ ಸರಕು ದಿನತಪ್ಪಿದರೆ ಹದ ತಪ್ಪುವುದೀ ದೇಹ ವೈದ್ಯರ ಪರಾಕು ಇಲ್ಲಿ ಪದೇ ಪದೇ ಕಾಣುವ ಪೇಲವ ಮುಖದ ನಲುಗುವ ಪಾದಗಳು ನಿಲ್ಲಲಾರದೆ ಬಳಲುತ್ತಿದೆ ನೆರಳು ! ನಿಸ್ತೇಜದ ಜೋಡಿ ಕಂಗಳು ದಿಟ್ಟಿಸುವ ಛಾವಣಿಯು ಕರುಣೆ ತೋರದೆ ಅರೆ ಅಕ್ಷಿಯ...
ಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್! ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ “ಪಾಳೆಟು ಒಯ್ಪುನೆ…ಗೊಬ್ಬೆರೆ ಬಲ್ಲೆ” -ಸುರಗಿ +152
“ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು....
ಸತ್ಯಮೂರ್ತಿ ಕಾಲೇಜಿನಲ್ಲಿ ಉಪನ್ಯಾಸಕ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿಯ ಜಂಗಮವಾಣಿ (ಮೊಬೈಲು) ರಿಂಗಣಿಸಿತು. . ಅದನ್ನು ಕೇಳಿ ಸತ್ಯಮೂರ್ತಿಗೆ ಸಿಟ್ಟು ಬಂತು. ಮೊಬೈಲು ಇರಬೇಕು ಒಪ್ಪುತ್ತೇನೆ. ಅದರಿಂದ ಉಪಯೋಗ ಇದೆ. ಆದರೆ ಅದರಿಂದ ಅಷ್ಟೇ ಉಪದ್ರವೂ ಇದೆ. ನೀವು ತರಗತಿಯೊಳಗೆ ಬಂದಾಗ ಅದನ್ನು...
ಹಿಮಾಚಲ ಪ್ರದೇಶದ ‘ಕುಲು’ ವಿನಿಂದ ಸ್ವಲ್ಪ ದೂರದ ಕಸೋಲ್ ಎಂಬ ಊರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಕಾರಿನ ಡ್ರೈವರ್ ನ ಪುಟಾಣಿ ಗಿಡವೊಂದನ್ನು ತೋರಿಸುತ್ತ ‘ ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ, ಬಹುತ್...
ಅಂಡಮಾನ್ ದ್ವೀಪಗಳಿಗೆ ನಾವು ಹೋಗಲಿದ್ದೇವೆಂದು ತಿಳಿದಾಗ ಈ ಮೊದಲೇ ಅಲ್ಲಿ ಹೋಗಿ ಬಂದವರು ಸುಮಾರು ಸಲಹೆ,ಸೂಚನೆ ನೀಡಿದ್ದರು.ಜೊತೆಗೇ ಅಲ್ಲಿ ಮುತ್ತು,ಹವಳಗಳು ತುಂಬಾ ಅಗ್ಗವೆಂದೂ ತಿಳಿಸಿದ್ದರು.ಆಗಲೇ ಕಿವಿ ನೆಟ್ಟಗಾಗಿತ್ತು.ಅಲ್ಲಿನ ಏರ್ ಪೋರ್ಟ್ ತಲುಪಿ ಆಚೀಚೆ ಕಣ್ಣು ಹಾಯಿಸಿದರೆ ಅಲ್ಲಿನ ಅಧಿಕಾರಿಗಳ ತಲೆ ಹಿಂದೆ ಕಂಡೂ ಕಾಣದ ಜುಟ್ಟು,ಅಧಿಕಾರಿಣಿಯರ...
ನಿಮ್ಮ ಅನಿಸಿಕೆಗಳು…