Monthly Archive: April 2016
ಊರ ಹಳ್ಳಿ, ಕೆರೆ, ನಾಲೆಗಳೆಲ್ಲಾ ಬತ್ತಿ ಬರಿದಾಗಿವೆ ಎಂಬ ರೈತನ ಗೋಳಿಗೆ ಕೆಲವರ ಬೇಜವಾಬ್ದಾರಿ ಪ್ರತಿಕ್ರಿಯೆ ನಿಮ್ಮಂತ ರೈತರು ಹೊಳೆ, ಕೆರೆಗೆ ಪಂಪ್‌ಸೆಟ್ಟು ಇಟ್ಟಿದ್ದೇ ಇದಕ್ಕೆಲ್ಲಾ ಕಾರಣ ಎಂದು. ಸಾಲವೆಂಬ ಶೂಲ ಅಲ್ಲಲ್ಲಿ ಕೆಲ ರೈತರನ್ನ ಬಲಿ ತೆಗೆದುಕೊಳ್ಳತ್ತಿದ್ದರೆ, ಇಂತಹ ಘೋರ ಅಪವಾದ ಇಡೀ ರೈತಾಪಿ ವರ್ಗವನ್ನೇ...
ಶ್ರೀಮತಿ ರುಕ್ಮಿಣಿಮಾಲಾ ಅವರ ಲಘು ನಗೆ ಬರಹಗಳ ಸಂಕಲನ ‘ಮಂದಹಾಸ’ ವನ್ನು ಒಂದು ಬಾರಿ ಓದಿದೆ. ಒಂದು ಬಾರಿ ಎಂದು ಯಾಕೆ ಹೇಳಿದೆನೆಂದರೆ, ಹಾಸ್ಯ ಬರಹಗಳ ಶೈಲಿಯೇ ಹಾಗೆ. ಹಲವು ಬಾರಿ ಓದಿಸುತ್ತದೆ ಮತ್ತು ಪ್ರತಿ ಬಾರಿಯೂ ಹೊಸ ದೃಷ್ಟಿಕೋನದಲ್ಲಿ ಹಾಸ್ಯದ ಸೆಲೆ ಗೋಚರಿಸಿ ನಗೆಯುಕ್ಕಿಸುತ್ತದೆ. ನಮ್ಮ...
ಇದು ಮನಃ ಸತ್ವಗಳ ಮಾತು ಪಕ್ವಾಪಕ್ವ ಪ್ರಬುದ್ದ ಬಾಲಿಶ ನಡುವಳಿಕೆ ವ್ಯಕ್ತಿತ್ವದ ವ್ಯವಹಾರದಲುಂಟಂತೆ ಮೊತ್ತ ನಾವಾಡುವ ನಡೆನುಡಿ ಸಂಹಿತೆ ಸಮಸ್ತ.. ಏಯ್ ! ನೋಡಲ್ಲವನ ಕೀಟಲೆ ? ಕೂರು ಬಾರೋ ತೆಪ್ಪಗೆ ಸುಮ್ಮನೆ ಮೂಲೆ ಕೇಳಪ್ಪ ಹೇಳಿದ ಮಾತು ನಿನಗುತ್ತಮ ಮಂದೆ ದಿನವೆಲ್ಲ ನುಡಿದಾ ಪೋಷಕ ಶಾಲೆ.....
ಅಮ್ಮ ಎಂದರೆ ಎಂತ ಆನಂದ ಮನದಲ್ಲಿ, ಆತಂಕ ಕೇ ಕೇ ಹಾಕುವ ನೋವುಗಳಲ್ಲಿ. ನನ್ನ ಮೊದಲ ಅರಿವಿನ ಸಿರಿ ಅವಳು, ಅವಳಿಂದ ಕಲಿತದ್ದು ಎಂದು ಮರೆಯಲಾಗದು. ಎಲ್ಲರನ್ನೂ ಕಾಯುವ ಆ ಶಿವನು, ಅವಳ ಮಮತೆಯನ್ನು ಕಂಡು ಶರಣಾದನು. ಭೂಮಿಯ ಮೇಲೆ ತ್ಯಾಗ ಪ್ರತೀಕ ಅವಳು, ಅವಳಿಗೆ ಸಮಾನರು...
ಇತ್ತೀಚೆಗೆ ಚೆನ್ನೈಗೆ ಪ್ರವಾಸ ಹೋಗಿದ್ದೆವು. ಪ್ರವಾಸವೆನ್ನುವುದು ನಮ್ಮ ಮನಸ್ಸಿನ ಜಡತೆಯನ್ನು ಹೊಡೆದೋಡಿಸಿ ಪ್ರಫ಼ುಲ್ಲಗೊಳಿಸುವುದು ಸತ್ಯ. ಹಾಗೆ ನೋಡಿದರೆ ಮಂಗಳೂರಿನ ಸುಡು ಬಿಸಿಲಿಗೂ ಚೆನ್ನೈಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹಾಗಿದ್ದರೂ ಚೆನ್ನೈ ಮಹಾನಗರ ತನ್ನದೇ ಆದ ವೈಶಿಷ್ಟ್ಯತೆಯಿಂದ ಮನ ಸೆಳೆಯುತ್ತದೆ. ಮೊದಲನೆಯದಾಗಿ ಈಗ ಚೆನ್ನೈ ಆಗಿರುವ ಮದ್ರಾಸ್, ದಕ್ಷಿಣ ಭಾರತದ...
ರಾಮಾ ಹುಲ್ಲು ಸಾಕಕ್ಕೇನೋ ಅಲ್ದಾ… ಅಮ್ಮ ಮನೆಯೊಳಗಿಂದಲೇ ಕೇಳಿದಳು. ನಾಳೆ ಯುಗಾದಿ ಮನೆಗೆ ಹೊಸ ಮಚ್ಚು ( ಹುಲ್ಲು ಮುಚ್ಚುವಿಕೆ) ಮಾಡಲು ತಂದ ಒಣ ಹುಲ್ಲಿನ ಬಗ್ಗೆ ಕೇಳಿದ್ದಳು ಅಮ್ಮ ರಾಮನನ್ನು. ಸಾಕಮ್ಮ ಅಲ್ದೇ ನಿಮ್ಮ ಹಟ್ಟಿಗೆ ( ಕೊಟ್ಟಿಗೆ- ದನ ಕರು ಎಮ್ಮೆಗಳಂತಹ ಜಾನುವಾರುಗಳನ್ನು ಕಟ್ತಲೋಸುಗ...
ಬೆಳದಿಂಗಳು ಚಲಿಸುತಿದೆ ರೈಲು ಜೊತೆಗೆ ಚಂದಿರನು ಎಲ್ಲೆಡೆಯೂ ಇದೆ ಬೆಳದಿಂಗಳು ತೊಟ್ಟಿಲು ಹುಣ್ಣಿಮೆಯ ಚಂದಿರ ಬೆಳದಿಂಗಳ ಇಳೆಯ ಮಡಿಲಿಗಿಟ್ಟು ಲಾಲಿ ಹಾಡುತ್ತಿದ್ದಾನೆ ನಾನು ನಿನ್ನ ಕನಸುಗಳಿಗೆ ತೊಟ್ಟಿಲು ಕಟ್ಟುತ್ತಿರುವೆ ಇರುವೆ ಸಿಹಿಯ ಹಾದಿ ಹುಡುಕಿ ಬಂದ ಇರುವೆ ಬಿಸಿ ಕಾಫಿ ಕಪ್ ನೊಳಗೆ ಶವವಾಗಿ ತೇಲುವುದ ಕಂಡೆ...
ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ- ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ.ಚೈತ್ರಮಾಸದ ಶುಕ್ಲ ಪ್ರತಿಪದೆ[ಪಾಡ್ಯ]ಯ...
ಟಿ.ವಿ. ರಿಪೋರ್ಟರ್ ಆ ಮನೆಯ ದೊಡ್ಡ ಗೇಟ್ ದಾಟಿ ಮನೆಯೊಳಗೆ ಬಂದ. ಸೋಫ಼ಾದ ಮೇಲೆ ಪ್ರೇರಣಾ ಆಸ್ಪತ್ರೆಯ ಸಂಸ್ಥಾಪಕರಾದ ಮಧುಕರ್ ಜೋಶಿ ಕುಳಿತಿದ್ದರು. ಸಂದರ್ಶನಕ್ಕಾಗಿಯೇ ಕ್ಲಪ್ತ ಸಮಯಕ್ಕೆ ತಯಾರಾಗಿದ್ದರು. “ಸರ್, ಪ್ರೇರಣಾ ಆಸ್ಪತ್ರೆಯ ಬಗ್ಗೆ ಏನೇನೋ ವದಂತಿ ಕೇಳಿ ಬರ್ತಿದೆ ಅದ್ಕೆ ನಿಮ್ಮತ್ರಾನೇ ಕೇಳೋನಾಂತ” ನೇರವಾದ...
ನಾನು ಸರಿ, ನೀನು ಸರಿ ಇಬ್ಬರು ಸರಿ ಸರಾಸರಿ ಇರದಿದ್ದರೆ ದೂರ ದುಬಾರಿ ದೂರ ಸರಿವುದೆ ಸರಿ ದಾರಿ ! || ನೀನಿಲ್ಲ ಸರಿ, ನಾನಿಲ್ಲ ಸರಿ ಸರಿ..ಸರಿ ಆಕ್ರಂದನ ಭಾರಿ ಕಂದನ ಅಸಹಾಯಕತೆ ಪರಿ ಹುಟ್ಟಿದ ಗಳಿಗೆಯ ಸವಾರಿ.. || ನಾನಿಲ್ಲ ಸರಿ, ನೀವೆಲ್ಲ...
ನಿಮ್ಮ ಅನಿಸಿಕೆಗಳು…