ವಸಂತ

Share Button

ವಸಂತನೆಂದರೆ ಗೋಧೂಳಿ ಕಾಲದ
ಇನಿಯ ತರುವ ಒಂದು ಸುತ್ತು,
ಮೂರು ಸುತ್ತು, ಏಳು ಸುತ್ತಿನ
ನಾಲ್ಕು ಮೊಳ ಮಲ್ಲಿಗೆಯ ಘಮಲು,
.
ಮದುವಣಗಿತ್ತಿಯ ತುರುಬನು ಸುತ್ತಿರುವ
ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ
ಮಲ್ಲಿಗೆ, ಮಂಗಳೂರು ಮಲ್ಲಿಗೆಗಳು,
ಮಲ್ಲಿಗೆಯಿಲ್ಲದೆ ಅಲಂಕಾರ ಮುಗಿಸದ ಹೆಂಗಳೆಯರು
.
ಮುಂಬರುವ ಇನಿಯನ ಕಾಯುವ
ಭಾವನೆಗಳಿಗೆ ಯುಗಾದಿಯ ಗಡುವು,
ಮದುವೆ ಮನೆಯ ಮಾವಿನ ತಳಿರು
ತೋರಣದ ಸಾಲುಗಳು
,
ಕಹಿ ಬೇವ ಚಿಗುರ ಜೊತೆಗಿನ ಬೆಲ್ಲದ ಸವಿ,
ರಾಮಭಜನೆ,ರಾಮರಸದ ಅಮಲು, ಮಜ್ಜಿಗೆಯ ತಂಪು
ಪಾನಕದ ಕಂಪು,ಕೋಸಂಬರಿಯ ಸ್ವಾದ,
ಮಾವಿನ ಮಿಡಿಯ ಮೃಷ್ಟಾನ್ನ ಭೋಜನ
.
ಮಾವಿನ ತೋರಣ, ಮಾವಿನ ಕಾಯಿಗಳು
ಅಲಂಕರಿಸಿರುವ ಎಳೆಯ ಎಳನೀರುಗಳು
ಬಣ್ಣ ಬಣ್ಣದ ಬಾವುಟಗಳೊಂದಿಗಿನ ದೇವರ
ಹೊತ್ತ ರಥಗಳು ಚಲಿಸುವ ತೇರು ಬೀದಿಗಳು
.
ಅಮ್ಮನ ಜೊತೆ ಹಪ್ಪಳ,ಸಂಡಿಗೆಗಳ
ಮಾಡುವ ಅಕ್ಕ-ತಂಗಿಯರು, ಅದನು
ಕಾಯುವಾ ಮೊಮ್ಮಕ್ಕಳು,ಲಟ್ಟಿಸಲು
ರಜೆಗೆ ಊರಿಗೆ ಬಂದಾ ಗೆಳತಿಯರು
.
ಮಣ್ಣಿಗೆ ಮೊದಲ ಮಳೆಯ ಆಲಿಂಗನ,
ಆಲಿಕಲ್ಲ ಪಟಪಟ ತನನ, ಗುಡುಗು, ಸಿಡಿಲು,
ಮಿಂಚುಗಳ ಮಿಶ್ರಣ, ಹೊಂಗೆಯ ಚಿಗುರು,
ಗಂಗೆ, ತುಂಗೆ,ಕಾವೇರಿಯರ ಕೇಳದ ನಿಟ್ಟುಸಿರು
.

-ಸುಮಿ

 

3 Responses

  1. Hema says:

    ಮಲ್ಲಿಗೆಯ ಘಮಲು ನಾಸಿಕಕ್ಕೆ ತಲಪಿತು..ಚೆಂದದ ಕವನ

  2. Nayana Bajakudlu says:

    ವಸಂತನಾಗಮನದ ಕವನ ಮನವನ್ನೂ ಹಸಿರಾಗಿಸಿತು

  3. Shankari Sharma says:

    ಮಲ್ಲಿಗೆಯ ಪರಿಮಳ ಸುತ್ತೆಲ್ಲ ಹರಡಿತು…ಸುಂದರ ಕವನ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: