Monthly Archive: January 2017
ಮಾರ್ಜಾಲದ ಸ್ವಾಮಿಭಕ್ತಿ….. ಅನಾದಿ ಕಾಲದಿಂದಲೇ ತನ್ನ ವ್ಯವಸಾಯದ ಅನುಕೂಲಕ್ಕಾಗಿ ಮತ್ತು ಹೈನುಗಾರಿಕೆಗಾಗಿ ಜಾನುವಾರುಗಳನ್ನೂ, ಸ್ವರಕ್ಷಣೆಗಾಗಿ, ಆಹಾರಕ್ಕಾಗಿ ಅಥವಾ ಹವ್ಯಾಸವಾಗಿ ನಾಯಿ, ಮೊಲ, ಗಿಳಿ, ಪಾರಿವಾಳ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಸಾಕುವ ಪದ್ಧತಿಯನ್ನು ಮನುಷ್ಯರು ರೂಢಿಸಿಕೊಂಡಿದ್ದಾರೆ. ಸಾಕುಪ್ರಾಣಿಗಳ ಬಳಗಕ್ಕೆ ಬೆಕ್ಕು ಯಾವ ಕಾಲದಲ್ಲೆ ಸೇರ್ಪಡೆಯಾಯಿತೋ ತಿಳಿಯದು. ಶ್ರೀ ಪುರಂದರ ದಾಸರು...
ತನೋಟ್ ಮಾತಾ ಮಂದಿರ್ – ಲೊಂಗ್ ವಾಲ್ ರಾಜಸ್ಥಾನದ ಜೈಸಲ್ಮೆರ್ ನಿಂದ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಥಾರ್ ಮರುಭೂಮಿ ಸಿಗುತ್ತದೆ. ಅಲ್ಲಿನ ಹಲವಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ‘ತನೋಟ್ ಮಾತಾ ಮಂದಿರ್’ ಕೂಡ ಒಂದು. ರಸ್ತೆ ಮೂಲಕ ತಲಪಲು ಸುಮಾರು ಎರಡು ಗಂಟೆ ಬೇಕು. ಈ ರಸ್ತೆಯ ಪ್ರಯಾಣ...
ಇಂದು ಗಣರಾಜ್ಯೋತ್ಸವ ದಿನ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವ “..ಮಿಲೇ ಸುರ್ ಮೇರಾ ತುಮಾರಾ ತೊ ಸುರ್ ಬನೇ ಹಮಾರಾ…” ಎಂಬ ದೂರದರ್ಶನದಲ್ಲಿ ಬಹಳ ಪ್ರಸಿದ್ಧವಾದ ಹಾಡು-ದೃಶ್ಯಗಳ ಸಂಯೋಜನೆ ನೆನಪಾಗುತ್ತಿದೆ. 1988 ರಲ್ಲಿ ಲೋಕ ಸೇವಾ ಸಂಚಾರ್ ಪರಿಷದ್ ನವರು ಪ್ರಸ್ತುತಿಪಡಿಸಿದ ಈ ಹಾಡು ಬಹಳಷ್ಟು...
ಮನುಷ್ಯನ ಬದುಕಿಗೆ ಪೂರಕವಾದದ್ದು ಕೃಷಿ ಮೂಲ ಎಂಬುದನ್ನು ನಾವು ಯಾರೂ ಅಲ್ಲಗಳೆಯುವ ಹಾಗಿಲ್ಲ.ಆದರೂ ಕೃಷಿ ಎಂದರೆ ಎಲ್ಲರಿಗೂ ನಗಣ್ಯವೇ. ಎಲ್ಲರೂ ಸಾಪ್ಟ್ವೇರ್,ಡಾಕ್ಟರ್..ಹೀಗೇ ಉನ್ನತ ಉದ್ಯೋಗಗಳ ಬೆನ್ನು ಹತ್ತಿ, ಆ ಪದವಿ ಪಡೆಯಲೋಸುಗ ಜೀವನವನ್ನಿಡೀ ಅದಕ್ಕೆ ಮುಡಿಪಾಗಿಟ್ಟುತೇಯುತ್ತಿರುವಾಗ,ಎಷ್ಟುದುಡಿದರೂ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ.ಬಟ್ಟೆಗಿದ್ದರೆ ಹೊಟ್ಟೆಗಿಲ್ಲದಂತಹ ಪರಿಸ್ಥಿತಿಯಲ್ಲಿ ಯಾರೂತಮ್ಮ ಮಕ್ಕಳನ್ನು ಮಣ್ಣಿನ ಮಗನನ್ನಾಗಿ...
ಹಿಮಾಚ್ಛಾದಿತ ಕಾಶ್ಮೀರವನ್ನು ಜನವಸತಿಗೆ ಯೋಗ್ಯವಾಗಿ ರೂಪಗೊಳಿಸಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ, ಪ್ರಜೆಗಳಿಗಾಗಿಯೇ ತನ್ನ ಸಮಯ, ಧನ-ಕನಕ ಅಷ್ಟೇಕೆ ಜೀವನವನ್ನೆಲ್ಲ ಅರ್ಪಿಸಿದ ಪ್ರಜಾನುರಾಗಿ ರಾಜದ೦ಪತಿಗಳು ರಾಜಾ ತು೦ಜೀನ ಮತ್ತು ಅವನ ಅರಸಿ ವಾಕ್ ಪುಷ್ಪಾ. ನಗರಗಳು, ಕಣಿವೆಗಳು, ನೀರಾವರಿ ವ್ಯವಸ್ಥೆಗಳು, ಸಾಲುಮರಗಳನ್ನು ನೆಡಿಸುವುದು, ಅರವಟ್ಟಿಗೆಗಳ ನಿರ್ಮಾಣ ಇವೆಲ್ಲದರ...
ಉದರಪೋಷಣೆ ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು...
ಅಪ್ಪನೆಂಬ ಅದ್ಭುತವ ಏನೆಂದು ಹಾಡಲಿ ಅದು ಎಂದೂ ಮರೆಯದ ಪಾತ್ರ ನನ್ನ ಬಾಳಲಿ ಅಮ್ಮನ ಕರುಳ ಬಂಧ ಅಪ್ಪನ ನೆರಳ ಅನುಬಂಧ ಆ ಎರಡು ತೀರದ ನಡುವೆ ನಾ ಹರಿವ ನೀರ ನಿನಾದ ಅಪ್ಪ ಎನ್ನಲು ಏನೋ ಬಲ ಅಪ್ಪನಿಂದಲೇ ಬದುಕೋ ಛಲ ಅಪ್ಪ ಎಂಬ ನಂಬಿಕೆಯ...
ಸಂಕ್ರಾಂತಿಯ ಶುಭದಿನವಾದ 14 ಜನವರಿ 2017 ರಂದು, ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಾಹಿತ್ಯಸದನದಲ್ಲೊಂದು ಚಿಕ್ಕ ಕಾರ್ಯಕ್ರಮವನ್ನು ಬಹಳ ಚೊಕ್ಕವಾಗಿ ಆಯೋಜಿಸಿದ್ದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾದ ಜಯಶ್ರೀ ಬಿ. ಕದ್ರಿ ಅವರ ಚೊಚ್ಚಲ ಕೃತಿ “ತೆರೆದಂತೆ ಹಾದಿ” ಎಂಬ ವೈಚಾರಿಕ ಬರಹಗಳ ಸಂಕಲನವನ್ನು ಸಂಘದ...
‘ಜೋಳಿಗೆಯಿಂದ ಹೋಳಿಗೆ’ ಮಂಗಳೂರಿನ ರೂಪಕಲಾ ಆಳ್ವ ಅವರ ಎರಡನೇ ಕೃತಿ. ಇದೀಗಾಗಲೇ ‘ನಾಟಿ’ ಎಂಬ ಜಾನಪದ ಸಂಬಂಧಿತ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿರುವ ರೂಪಕಲಾ ಅವರ ಲಲಿತ ಪ್ರಬಂಧಗಳ ಸಂಕಲನ ಇದು. ತಮ್ಮ ಪ್ರಾಸ್ತಾವಿಕ ಮುನ್ನುಡಿಯಲ್ಲಿ ಬಿ.ಎಮ್. ರೋಹಿಣಿ ಅವರು ಬರೆದಿರುವಂತೆ ‘ ಒಂದು ಸೂಕ್ಷ್ಮ ಕುಸುರಿತನ,...
ಉಂಡಾಡಿಗುಂಡನಂತೆ ತಿರುಗಿಕೊಂಡು ಬೆಳ್ಳಂಬೆಳಗ್ಗೆ ಚಳಿ ಕಾಯುತ್ತಾ ಒಲೆ ಮುಂದೆ ಕುಳಿತರೆ ಮುಗಿಯಿತು, ಒಂದು ಕಡ್ಡಿಯನ್ನೂ ಎತ್ತಿಡುವ ಹಾಗಿಲ್ಲ. ಆ ತೋಡು ಕರೆಯಿಂದ ಕೆಸದೆಲೆ ತರಲು ಎಷ್ಟು ಸಲ ಹೇಳಿದರೂ ಏನು ಪ್ರಯೋಜನ? ಬೇಯಿಸಿದರೆ ಪೂರ್ತಿ ಒಬ್ಬನಿಗೆ ಬೇಕು. ಅಜ್ಜಿಯ ನಿಯತ ತಪ್ಪದೆ ಅಜ್ಜನ ಮೇಲಿನ ಅಸಹನೆಗಳೆಲ್ಲಾ...
ನಿಮ್ಮ ಅನಿಸಿಕೆಗಳು…