Monthly Archive: November 2022
ಲಡಾಕ್ ಪ್ರವಾಸ ಕಥನ ಪ್ರಯಾಣ, ಪ್ರವಾಸದ ವಿಚಾರ ಬಂದಾಗ ಸದಾ ಆಸಕ್ತಳಾಗಿದ್ದು, ಸಮಯ ,ಸಂದರ್ಭ ಅನುಕೂಲವಾಗಿದ್ದರೆ ಜೈ ಎಂದು ಹೊರಡುವ ಜಾಯಮಾನದವಳಾದ ನನಗೆ, ತೀರಾ ಅನಿರೀಕ್ಷಿತವಾಗಿ, 2018 ರ ಜೂನ್ ತಿಂಗಳಿನ ಮಧ್ಯಭಾಗದಲ್ಲಿ ಪುನ: ಹಿಮಾಲಯದತ್ತ ಹೋಗುವ ಅವಕಾಶ ಒದಗಿ ಬಂತು. ಮೈಸೂರಿನಲ್ಲಿರುವ ಸ್ನೇಹಿತೆ ಭಾರತಿ ಅವರು...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಜುಲೈ 24 ರಂದು ಬೆಳಗಿನ ಜಾವ ಐದು ಗಂಟೆಗೇ ಹೆಲಿಕಾಪ್ಟರ್ ಬೋರ್ಡಿಂಗ್ ಪಾಸ್ ಪಡೆಯಲು ಕ್ಯೂ ನಿಲ್ಲಬೇಕಾಯಿತು. ನಮ್ಮ ನಮ್ಮ ಯಾತ್ರಾ ಪರ್ಮಿಟ್‌ಗಳನ್ನು ರಿಜಿಸ್ಟರ್ ಮಾಡಿಕೊಂಡು, ನಮ್ಮ ತೂಕ ನೋಡಿ, ನಂತರ ಬೋರ್ಡಿಂಗ್ ಪಾಸ್ ನೀಡಿದರು. ಹೆಲಿಕಾಪ್ಟರ್‌ನಲ್ಲಿ ಪಯಣಿಸಲು, ನಮ್ಮ ಸರದಿಗಾಗಿ ಕಾಯುತ್ತಾ ಕುಳಿತೆವು....
ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಿದ್ದೇವೆ. ಕಳೆದ ಎರಡು ವರ್ಷ ಕೋವಿಡ್ 19 ನಿಂದಾಗಿ ರಾಜ್ಯೋತ್ಸವ ಸರಳವಾಗಿ ಆಚರಣೆಗೊಂಡಿತ್ತು. ಮೊದಲಿಗೆ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಳಿಗೆಗಾಗಿ ದುಡಿದ/ದುಡಿಯುತ್ತಿರುವ ಮಡಿದ/ ಅಮರರಾದ ಎಲ್ಲರನ್ನು ನೆನೆದು, ಅವರಿಗೆಲ್ಲ ನನ್ನ ಧನ್ಯವಾದಗಳುಸಮರ್ಪಿಸುತ್ತೇನೆ. ನನಗೆ ಕನ್ನಡ...
ಕನ್ನಡವೆಂದರೆ ಬರೀ ನುಡಿಯಲ್ಲನಮ್ಮೀ ಬದುಕಿನ ಮಿಡಿತಮೊದಲ ತೊದಲು ನಿನ್ನದೆಅಮ್ಮನಂತೆ ಹತ್ತಿರ, ಆರ್ದತೆನೋವು ನಲಿವಿಗೆ ಧ್ವನಿನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವನಿನ್ನಿಂದಲೆ ಬಾಳ್ವೆ-ಬೆಳಕುರಕ್ತಗತವಾಗಿದೆ ಪುಣ್ಯಕೋಟಿಯ ಕಥನಅಂತರ್ಗತವಾಗಿದೆ ವಚನಗಳ ಕಾಣ್ಕೆಅನ್ನಕೊಡುವ ಭಾಷೆಯಲ್ಲವೆಂಬ ದೂರುಆದರೂ ಅಂತರಾಳಕ್ಕಿಳಿದ ಮೂಲಬೇರುನಿನಗಿಲ್ಲ ನಿನ್ನ ಮನೆಯಲ್ಲೆ ಆದರಸಿಕ್ಕಿದ್ದು ಬರೀ ಸದರ!ಬದುಕಲು ಬೇಕು ನಿನ್ನ ನೆಲ ಜಲನೀನು ಮಾತ್ರ ಕೇವಲಮಾತಿನ...
ಕಾರ್ತೀಕ ಮಾಸ ಕಳೆದು ಮಾರ್ಗಶಿರ ಮಾಸ ಆರಂಭವಾಯಿತೆಂದರೆ ಮೊದಲ ಆರನೆಯದಿನ ಆಚರಿಸುವ ಹಬ್ಬವೇ ಚಂಪಾ ಷಷ್ಠಿ. “ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//”. ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ….ಹಾಗೇ ತಾರಕಾಸುರನನ್ನು ಸಂಹಾರ...
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ।ಗುರುಸಾಕ್ಷಾತ್ ಪರಮಬ್ರಹ್ಮ ತಸ್ಯೆ ಶ್ರೀ ಗುರುವೇ ನಮಃ ಗುರುಗಳನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿ ಆ ರೀತಿ ಕಲ್ಪಿಸಿ ಪೂಜೆ ಮಾಡಿ ಆಶೀರ್ವಾದ ಬೇಡಿಕೊಳ್ಳುವ ಪರಂಪರೆ ನಮ್ಮದು. ‘ಗುರುನೆಲೆ ಇಲ್ಲದೆ ಒರು ನೆಲೆ ಇಲ್ಲ’ ಎಂದು ಮಲೆಯಾಳದಲ್ಲಿ ಒಂದು ಸೂಕ್ತಿಯೂ ಇದೆ....
ಕವಿ ಶ್ರೀ ರಾಘವೇಂದ್ರ ಡಿ. ತಳವಾರರ ಆತ್ಮಾನುಬಂಧದ ಸಖಿ ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ...
2014 ರಲ್ಲಿ ಜನ್ಮತಳೆದ ‘ಸುರಹೊನ್ನೆ‘ ಅಂತರ್ಜಾಲ ಪತ್ರಿಕೆ ಪ್ರಶಾಂತವಾದ ನದಿಯಂತೆ ಪ್ರವಹಿಸುತ್ತಾ ಮುಂದುವರೆದಿದೆ. ಈ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಹೇಮಮಾಲಾರವರು ನನಗೆ ಪರಿಚಯವಾದದ್ದು ಮೂರು ವರ್ಷಗಳ ಹಿಂದೆ. ಮೊದಲು ನಾನು ಅವರ ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಓದುತ್ತಾ ಅನಿಸಿಕೆಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ದಾಖಲಿಸುತ್ತಿದ್ದೆ. ನಂತರ ಆಗೊಮ್ಮೆ ಈಗೊಮ್ಮೆ...
ಧಿಡೀರನೆ ಎನ್ನುವಂತೆ ಬರೆವಣಿಗೆಯ ಲೋಕಕ್ಕೆ ಕಾಲಿಟ್ಟವರು ಮಾಲತಿ ಹೆಗಡೆ. ಕೃಷಿ ಲೇಖಕರ ತರಬೇತಿ ಶಿಬಿರದ ಶಿಬಿರಾರ್ಥಿಯಾದ ಅವರು ತರಬೇತಿಯ ಅಂಗವಾಗಿ ಹತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವುದು ಅನಿವಾರ್ಯವಾಗಿತ್ತು. ಅದನ್ನು ಸ್ವ-ಅಭಿಲಾಷೆಯಾಗಿಸಿಕೊಂಡ ಮಾಲತಿ ಹೆಗಡೆ ತಮ್ಮ ಮೊದಲ ಲೇಖನಕ್ಕೆ ದೊರೆತ ಮೆಚ್ಚಿಗೆಯಿಂದ ಸ್ಫೂರ್ತಿ ಪಡೆದು ಇಪ್ಪತ್ತೊಂದು ಲೇಖನಗಳನ್ನು ಬರೆದರು....
ಕುಮಾರವ್ಯಾಸನಿಂದ ನಾಗರಸನವರೆಗೆ ಆಗಿಹೋದ ಭಾಗವತ ಕವಿಗಳು ಭಾರತ,ರಾಮಾಯಣ, ಭಾಗವತ ಹಾಗೂಭಗವದ್ಗೀತೆ ಇವನ್ನು ಕನ್ನಡಿಸಿ,ದೇಶಿಯ ಛಂದಸ್ಸಿನಲ್ಲಿ ವೈದಿಕ ಪರಂಪರೆಯ ವಾಙ್ಮಯವನ್ನು ಕನ್ನಡ ನುಡಿಯಲ್ಲಿ ನೀಡಿದ್ದರು.ಇನ್ನು ಇದೇ ಯುಗದಲ್ಲಿ ಅದೇ ಪರಂಪರೆಯ ದಾಸವಾಙ್ಮಯವು ಹಾಡಿನ ರೂಪ ತಾಳಿ ಬಳಕೆ ಮಾತಿಗೆ ಹತ್ತಿರ ಬಂದು,ರಾಶಿರಾಶಿಯಾಗಿ ಬೆಳೆಯಿತು. ಬಸವಯುಗದ ಕೊನೆಯಲ್ಲಿ ನರಹರಿ ತೀರ್ಥರು...
ನಿಮ್ಮ ಅನಿಸಿಕೆಗಳು…