Daily Archive: November 15, 2018
ನಡೆಯುತ್ತಲೇ ಇದ್ದೇನೆ ಬೆಳಗಿನಿಂದ ನಡು ಹಗಲು ದಾಟಿದೆ ಸೂರ್ಯ ಕೊಂಚ ವಾಲಿದ್ದಾನೆ ಈಗ. ದಾಟುತ್ತ ಬಂದಿರುವೆ ಹೂವಿನ ದಾರಿಗಳನ್ನು ಬೆಂಕಿಯ ಬೆಟ್ಟಗಳನ್ನು ಏರನ್ನು ಇಳಿಜಾರನ್ನು ಮುಂದಿನ ದಾರಿಯಲ್ಲಿ ಇದ್ದೀತು ಏನು ಇರಬಹುದೇ ಬಣ್ಣದ ಹಬ್ಬ – ಗಂಧದದೌತಣಗಳು (ಸದ್ಯ! ಕನಸಿಗಿಲ್ಲ ಸುಂಕ !) ನಡೆಯುವೆ- ಮುಗಿಲೋಳಿಯಲ್ಲಿ ಕಣ್ಣ ನೆಟ್ಟು ಖಾತ್ರಿ- ಈ ಪಯಣ ಮುಗಿಯುತ್ತದೆ ಸಂಜೆಯಲ್ಲಿ, ಪಡುವಣದಲ್ಲಿ ಕಾಯುವೆ ಮತ್ತೆ – ಇನ್ನೊಂದು ಮುಗಿಲಿಗೆ ತೆರೆಯುವ ಹಗಲಿಗೆ. . -ಗೋವಿಂದ ಹೆಗಡೆ +14
ಜಮ್ಮು ಕಾಶ್ಮೀರ ರಾಜ್ಯದ ಲಡಾಕ್ ಜಿಲ್ಲೆಯ ಮುಖ್ಯ ನಗರಿಯಾದ ಲೇಹ್ ನಿಂದ ರಸ್ತೆ ಮಾರ್ಗವಾಗಿ ಸುಮಾರು 160 ಕಿ.ಮೀ ಪ್ರಯಾಣಿಸಿದಾಗ ನುಬ್ರಾ ಕಣಿವೆಯ ‘ಹುಂಡರ್’ ಹಳ್ಳಿ ಸಿಗುತ್ತದೆ. ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಬೆನ್ನಿನ ಮೇಲೆ ಒಂದು ಡುಬ್ಬ ಇರುವ ಒಂಟೆಗಳನ್ನು ಕಾಣುತ್ತೇವೆ. ಆದರೆ, ಇಲ್ಲಿ...
ದೀಪಾವಳಿ ಎಂದರೆ ಬೆಳಕಿನ ಹಬ್ಬ.ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತರುವ ಹಬ್ಬ. ನಮ್ಮಹಿರಿಯರು ಈಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ. ಎಂದರೆ ಅದಕ್ಕೊಂದು ವೈಜ್ಞಾನಿಕ ಕಾರಣ ಇದೆಯಲ್ಲವೇ? ನಾನು ಚಿಕ್ಕವಳಿದ್ದಾಗ ಈ ಹಬ್ಬವನ್ನು ಮನೆ ಮಂದಿಯೆಲ್ಲ ಎಷ್ಟು ಸಂಭ್ರಮ ಸಡಗರದಿಂದ ಆಚರಣೆ ಮಾಡುವರು. ಆ ಕಾಲವನ್ನು ನೆನಪಿಸುತ್ತಾ ಈಗ ದೀಪಾವಳಿಯನ್ನು ಆಚರಿಸಿದ್ದೇವೆ. ನಾನು ಚಿಕ್ಕವಳಿದ್ದಾಗ ...
ಎಲ್ಲೋ ಚದುರಿವೆ ಮೋಡಗಳೆಲ್ಲಾ…! ಸುರಿಸಲೆ ಇಲ್ಲಾ ಮಳೆಹನಿಯಾ…!! ಏಕೋ ಏನೋ ತಣಿಸಲೆ ಇಲ್ಲಾ….! ಬಾಯಾರಿದಯೀ ಭುವಿ ತೃಷೆಯಾ… !! ದಿನವಿಡಿ ರವಿ ತಾ ಉರಿಯುತಲಿರುವಾ,.. ತನ್ನಯ ಪ್ರಖರತೆ ಭುವಿಗಿತ್ತು …! ಬಾಡಿತು ಗಿಡಮರ ತರುಲತೆ ಎಲ್ಲಾ… ಬಳಲಿದೆ ಹಸಿದಿದೆ ಹಸುರೆಲ್ಲಾ….!! . ರವಿ ತಾನುರಿದು ಬೆಳಕನು ಇತ್ತರು,...
ನಾನು ಬತ್ತಿ ನನ್ನವಳು ಪಣತೆ ಪ್ರೀತಿ ತುಂಬಿದ ಎಣ್ಣೆ ನಿರಂತರ ಸುಖ ಸಂತೋಷದ ಬೆಳಕು ಬೀರುವ ನಂದಾದೀಪ!! ನಮಗೆ ನಿತ್ಯವು * ದೀಪಾವಳಿ * – ಎಂ ಸತ್ಯನಾರಾಯಣ.ಸಾಗರ +3
ಪ್ರತಿ ಕ್ಷಣ ಜೇನು ತುಪ್ಪದಲ್ಲಿ ಮುಳುಗಿಸಿ ಮಾತನ್ನು ಚಪ್ಪರಿಸಬೇಕು ಜೀವನವನ್ನು ನಿರಂತರ ಓಂಕಾರ ಶಬ್ದದಿಂದ ತಣಿಸಬೇಕು ಪ್ರತಿ ಒಬ್ಬರೂ ನಿನ್ನನ್ನು ನಿನ್ನ ಮಾತನ್ನು ಮೆಚ್ಚಬೇಕು ನೋವು ದುಃಖವನ್ನು ಕೂಡಲೇ ಮರೆಯಬೇಕು ಯಾವಾಗ ಯಾವ ಕೆಲಸ ಪಡೆಯಬೇಕೋ….. ಅದನ್ನು ಕಾಲಕ್ಕೆ ಬಿಡಬೇಕು ಸಮಯವನ್ನು ಲೋಕವನ್ನು ಹೆಚ್ಚು ದೀಕ್ಷೆ ಆಸಕ್ತಿಯಿಂದ...
ನಿಮ್ಮ ಅನಿಸಿಕೆಗಳು…