ಏನು ಮಾಯೆಯೀ ಜಗದೊಳಗೆ
ಎಲ್ಲೋ ಚದುರಿವೆ ಮೋಡಗಳೆಲ್ಲಾ…!
ಸುರಿಸಲೆ ಇಲ್ಲಾ ಮಳೆಹನಿಯಾ…!!
ಏಕೋ ಏನೋ ತಣಿಸಲೆ ಇಲ್ಲಾ….!
ಬಾಯಾರಿದಯೀ ಭುವಿ ತೃಷೆಯಾ… !!
ದಿನವಿಡಿ ರವಿ ತಾ ಉರಿಯುತಲಿರುವಾ,..
ತನ್ನಯ ಪ್ರಖರತೆ ಭುವಿಗಿತ್ತು …!
ಬಾಡಿತು ಗಿಡಮರ ತರುಲತೆ ಎಲ್ಲಾ…
ಬಳಲಿದೆ ಹಸಿದಿದೆ ಹಸುರೆಲ್ಲಾ….!!
.
ರವಿ ತಾನುರಿದು ಬೆಳಕನು ಇತ್ತರು,
ಸುಡು ಬಿಸಿಲನು ಸಹಿಸದು ಭುವಿ ತಾನು…..!
ಬಾಯಾರಿದೆ ಬಳಲಿದೆ ಉಸಿರದು ನಿಲ್ಲದು,
ಜೀವರಾಶಿಯದು ಭುವಿಯೊಳಗೇ…..!!
ಕಣ್ಣಂಚಲು ಹನಿ ನೀರೂ ಒಸರದು ,
ಉರಿಯುತಲಿರುವಾ ಮನುಜರಲೂ…..!
ಕಾಯುವ ದೇವಗು ರಕ್ಷಣೆಯಿಲ್ಲಾ.. ..
ಏನಿದು ಮಾಯೆಯೋ ಅರಿತವರಿಲ್ಲಾ….
ಬಗೆ ಬಗೆ ಆಟವ ಆಡುವರೆಲ್ಲಾ .. ..
ಆಸೆಗೆ ಎಂದೂ.. ಕೊನೆಯಿಲ್ಲಾ….!!
– ಪ್ರಮೀಳ ಚುಳ್ಳಿಕಾನ.
ಕವನ ಸಂಕಲನ ಸೊಗಸಾಗಿ ದೆ