Author: Vijaya Subrahmanya
ತಾನೇ ಮೇಲು, ತನ್ನಿಂದ ಮಿಕ್ಕಿ ಯಾರೂ ಇಲ್ಲ, ತಾನು ಹೇಳಿದಂತೆ ಮನೆ ಮಂದಿ ಕೇಳಬೇಕು, ತನ್ನಿಂದ ಮತ್ತೆಯೇ ಇನ್ನುಳಿದವರೆಲ್ಲಾ ಎಂಬ ಗರ್ವಭಾವ ಸಂಸಾರವಂದಿಗರಾದ ಹೆಂಗಳೆಯರಲ್ಲಿ ಸರ್ವೇ ಸಾಮಾನ್ಯ. ಅದೂ ವಾರಗಿತ್ತಿಯರಲ್ಲಿ ಈ ಕುತ್ಸಿತ ಬುದ್ಧಿ ಅಧಿಕವೆಂದೇ ಹೇಳಬೇಕು. ಆದರೆ ಇಂತಹ ಸಣ್ಣಬುದ್ಧಿಯನ್ನು ಅರಿತುಕೊಂಡು ತಿದ್ದುವವರು ಮಾತ್ರ ವಿರಳ.ಸ್ವತಃ...
ನಮ್ಮ ಪುರಾಣದ ಮಹಾ ಪುನೀತೆಯರಲ್ಲಿ ದೇವಾಂಗನೆಯರು, ರಾಜರಾಣಿಯರು, ಋಷಿಪತ್ನಿಯರು ಶರಣೆಯರು ಮೊದಲಾದ ಮಹಾಮಾತೆಯರು ಬೆಳಗಿ ಹೋಗಿದ್ದಾರೆ.ಅಂತಹವರ ಬದುಕಿನಿಂದ ನಮಗೆ ತತ್ವಾದರ್ಶಗಳು,ನೀತಿಪಾಠಗಳಾಗಿ ದೊರಕುತ್ತವೆ. ಅಂತಹ ಆದರ್ಶ ನಾರಿಯರ ಜೀವನವನ್ನು ಅಧ್ಯಯನ ಮಾಡಿದಾಗ ಬ್ರಾಹ್ಮಣ ಸ್ತ್ರೀಯರೂ ಪೂಜನೀಯ ಸ್ಥಾನದಲ್ಲಿ ಬರುತ್ತಾರೆ.ಅಂತಹವರಲ್ಲಿ ಗುಣವತಿ ಯು ಶ್ರೇಷ್ಠಳಾಗಿ ಶೋಭಿಸುತ್ತಾಳೆ. ‘ಹೆಣ್ಣಿಗೆ ಗುಣವೇ ಭೂಷಣ.ಹೆಂಗಳೆಯರ...
” ನೋಡು ರವೀ ನಾನು ಮದುವೆಗೆಲ್ಲ ಒಪ್ಪಿದ್ದೇನೋ ನಿಜ.ಆದ್ರೆ ಈಗ್ಲೇ ಮಕ್ಕಳಾಗಬೇಕು ಎಂಬ ವರಸೆ ನಿನ್ನ ಅಪ್ಪ+ಅಮ್ಮಂದಾದರೆ ಅದಕ್ಕೆಲ್ಲ ನಾನು ರೆಡಿ ಇಲ್ಲ.” ಮೊಬೈಲ್ ಕಿವಿಗಾನಿಸಿ ತುಸು ಗಟ್ಟಿ ದನಿಯಲ್ಲೇ ಹೇಳುತ್ತಿದ್ದಳು ಚಿನ್ಮಯಿ. “ಈಗ್ಲೇ ಇಷ್ಟ ಇಲ್ಲಾಂದ್ರೆ ಬೇಡ ಬಿಡು, ಒಂದು ವರ್ಷ, ಎರಡು ವರ್ಷ ಹೋದಮೇಲಾದ್ರೂ...
ದುಷ್ಟರ ಶಿಕ್ಷೆಹಾಗೂ ಶಿಷ್ಟರ ರಕ್ಷಣೆಗಾಗಿ ಮಹಾವಿಷ್ಣುವು ದಶಾವತಾರವೆತ್ತಿದನು. ರಾಮಾವತಾರ, ಕೃಷ್ಣಾವತಾರ ಎರಡರಲ್ಲೂ ವಿಷ್ಣುವಿನೊಂದಿಗೆ ಮಹಾಶೇಷನೂ ಸೋದರ ರೂಪದಿಂದ ಅವತಾರವೆತ್ತಿದ್ದನ್ನು ಕಾಣುತ್ತೇವೆ. ರಾಮನ ಅನುಜನಾಗಿ ಲಕ್ಷ್ಮಣ ಬಂದ, ಮಹಾಶೇಷನ ಅಂಶದಿಂದ ಈತ; ಇಲ್ಲಿ ಜನಿಸಿದರೆ, ಕೃಷ್ಣನ ಅಗ್ರಜನಾಗಿ ಬಲರಾಮ ಜನಿಸುತ್ತಾನೆ. ಲಕ್ಷ್ಮಣನ ಮಾಹಿತಿ ಈ ಹಿಂದೆ ಇದೇ ಅಂಕಣದಲ್ಲಿ...
ಯಾವನಾದರೂ ಒಬ್ಬ ಯಾವುದಾದರೊಂದು ವಿಷಯದಲ್ಲಿ ಸಾಧನೆ, ಬುದ್ಧಿ, ತಪಸ್ಸುಗೈದು ಆತನ ಪ್ರತಿಭೆ ಬೆಳಕಿಗೆ ಬಂದರೆ ಸಮಾಜದಲ್ಲಿ ತಾನೇ ಗಣ್ಯವ್ಯಕ್ತಿ, ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂದು ಬೀಗುತ್ತಾ ದುರಹಂಕಾರ ಪಡುವವರನ್ನು ಎಲ್ಲೆಡೆ ಕಾಣುತ್ತೇವೆ. ಜಗತ್ತಿನಲ್ಲಿ ಅವರನ್ನು ಮೀರಿಸುವವರು ಇದ್ದಾರೆ ಎಂಬುದು ಅವರ ಗಮನಕ್ಕದು ಬರುವುದೇ ಇಲ್ಲ. ಆದರೆ...
ಹಿರಿಯರು ತಮ್ಮ ಮಕ್ಕಳ ಹೆಸರನ್ನು ಉಲ್ಲೇಖಿಸುವಾಗ ಅಥವಾ ಬರೆಯುವಾಗ ಹೆಸರಿನ ಹಿಂದೆ ಚಿ| ಅಂದರೆ ಚಿರಂಜೀವಿ ಎಂದು ಸೇರಿಸಿ ಬರೆಯುವುದು ಸರ್ವತ್ರ ವಾಡಿಕೆ. ತಮ್ಮ ಮಕ್ಕಳು ಚಿರಾಯುಗಳಾಗಬೇಕು ಎಂಬುದೇ ಇಲ್ಲಿ ಮಾತಾ-ಪಿತರ ಮನೋಭೂಮಿಕೆ, ಆದರೆ ಅವರೆಲ್ಲಾ ಚಿರಾಯುಗಳಾಗುವುದಿಲ್ಲವಲ್ಲ ಹುಟ್ಟಿದ ಮನುಷ್ಯ ಸಾಯಲೇಬೇಕಲ್ಲವೇ? ಜನ್ಮವೆತ್ತಿ ಬಂದ ಮಾನವರು ಈ...
‘‘ಕೈಯಲ್ಲಿ ಕಾಸಿಲ್ಲಿ ಕಡಕೆ ನಂಬುವರಿಲ್ಲೆ| ಹರಹರ್ ಶಿವನೆ ಬಡತನ| ಈ ಒಂದು ಬರದಿರಲಿ ನಮ್ಮ ಬಳಗಕ್ಕೆ|” ಎಂಬುದು ಜಾನಪದ ಸೊಲ್ಲು. ಹೌದು ಬಡತನವನ್ನು ಎಲ್ಲರೂ ದ್ವೇಷಿಸುತ್ತಾರೆ. ಆದರೆ ಯಾರೂ ಇಂದು ಇದ್ದಂತೆ ನಾಳೆ ಇರಲಾರ! ಬಡವ ಬಲ್ಲಿದನಾಗಬಹುದು, ಬಲ್ಲಿದ ಬಡವನಾಗಲೂಬಹುದು. ‘ಮಿಡಿ ಹಣ್ಣಾಗದೇ ದೈವದೊಲ್ಮೆಯಿರಲ್ ಕಾಲಾನುಕಾಲಕ್ಕೆ ತಾಂ...
ಪರೋಪಕಾರಾಯ ಫಲಂತಿ ವೃಕ್ಷಾ!! ಪರೋಪಕಾರಾಯ ವಹಂತಿ ನದ್ಯಃ।ಪರೋಪಕಾರಾಯ ದುವಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥ ಅನ್ಯರಿಗೆ ಅಸಂತೋಷ, ದುಃಖ, ಕಷ್ಟ ಕೊಡುವುದು ಸರ್ವಥಾ ಸಲ್ಲದು. ಅನ್ಯರಿಗೆ ನಮ್ಮಿಂದಾದಷ್ಟು ಉಪಕಾರಗಳನ್ನು ಮಾಡಬೇಕು. ಒಂದು ವೇಳೆ ಅದು ಕೈಲಾಗದಿದ್ದರೆ ಉಪದ್ರವಾದಿಗಳನ್ನು ಮಾಡದೆ ತಮ್ಮಷ್ಟಕ್ಕೆ ತಾವಿರಬೇಕೇ ವಿನಹ ಅಪಕಾರ ಬಯಸಬಾರದು. ನಮ್ಮೆಲ್ಲ ಶರೀರವು...
‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ...
ಸವತಿಯ ಮತ್ಸರವು ಸಾವಿರಾರು ಬಗೆಯಂತೆ. ಮಲತಾಯಿಯ ಕಷ್ಟಕ್ಕೆ ಗುರಿಯಾದರೂ ತನ್ನ ಪ್ರಾಮಾಣಿಕತೆಯಿಂದ, ದೈವ ಸಾನ್ನಿಧ್ಯತೆಯಿಂದ ಮೆರೆದ ಮಣಿಕಂಠ ಆ ಚಂದ್ರಾರ್ಕ ಪೂಜನೀಯ ಸ್ಥಾನ ಪಡೆದ ವಿಚಾರ ಹಿಂದಿನ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ಮಲತಾಯಿಯ ಕುತ್ತಿತ ದೃಷ್ಟಿಗೆ ಬಲಿಯಾಗಿ ನೊಂದು, ಬೆಂದು ಕೊನೆಗೆ ದೇವರನೊಲಿಸಿಕೊಳ್ಳುವುದಕ್ಕಾಗಿ ತಪಸ್ಸು ಕುಳಿತು ಸಾಕ್ಷಾತ್ಕಾರವಾಗಿ,...
ನಿಮ್ಮ ಅನಿಸಿಕೆಗಳು…