Daily Archive: December 12, 2024

5

ಶೋಧ

Share Button

ಅರಿವಿರದ ಭಾವದಲಿಅರಿವಿನ ಶೋಧಖಾಲಿ ಹಾಳೆಯಲ್ಲಿಭಾವಗಳ ಕುಣಿತ ಹೊಸದಾರಿ ಹೊಸ ಕನಸುಹೊಸ ದಿನದ ಮೋಹಹೊಸ ಮಣ್ಣು ಹೊಸ ಕಣ್ಣುಜೀವನದ ಭಾರತರೇವಾರಿ ಬಣ್ಣ ಗರಿ ಗರಿಯ ಝರಿಹೊಸ ನಗುವಿನ ಪರಿಒಲವಲ್ಲಿ ಒಲವುಹರಿವಲ್ಲಿ ಹರಿವುಭೂ ಧರೆಯ ಮೇಲೆಲ್ಲಾನಗುತಾ ನಲಿವ ನಲಿವು ಹೂ ಎಳೆಯ ಗೆಲುವಲ್ಲಿಬೇರು ಹಂಚಿದ ಪ್ರೀತಿಮೂಲವದು ಮಣ್ಣಿನಪ್ರತಿಬಿಂಬದ ರೀತಿ -ನಾಗರಾಜ...

5

ಕಾದಂಬರಿ : ತಾಯಿ – ಪುಟ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.“ನೀವು ಗೌರಮ್ಮ ತಾನೆ?”“ಹೌದಮ್ಮ. ನೀವು ಕಾಫಿ ಕುಡಿಯಿರಿ. ನಾನು ಅರ್ಧಗಂಟೆಯಲ್ಲಿ ಬರ್ತೀನಿ. ವಾಕಿಂಗ್ ಹೋಗೋಣ.”“ವಾಕಿಂಗ್‌ಗೆ ಹೋಗಕ್ಕೆ ಪರ‍್ಮಿಶನ್ ಕೊಡ್ತಾರಾ?”“ಕೊಡದೆ ಏನ್ಮಾಡ್ತಾರೆ? ನೀವೇನು ೧೮ ವರ್ಷದ ಹುಡುಗೀನಾ ಪರ‍್ಮಿಶನ್...

11

ಶ್ರೀ ಗಣೇಶರ ಕಲಾಕೌತುಕ !

Share Button

ಕರ್ನಾಟಕವನ್ನು ಒಳಗೊಂಡಂತೆ, ಭಾರತದಾದ್ಯಂತ ಹೆಸರಾದ ಬಹುಶ್ರುತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್ ಗಣೇಶ್ ಅವರು ಬಹುಭಾಷಾವಿದ್ವಾಂಸರು ಕೂಡ. ಅವಧಾನ ಕಲೆಯ ಪುನರುಜ್ಜೀವನದ ಸಾರ್ಥಕ್ಯ ಅವರದು. ಈವರೆಗೂ ಅರುವತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟವರು. ರಂಜನ ಮತ್ತು ನಿರಂಜನ ಎರಡೂ ಮಾರ್ಗಗಳಲ್ಲೂ...

10

ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.

Share Button

ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ ಖುರ್ಚಿಯಲ್ಲಿ ಕುಳ್ಳಿರಿಸಿದ. ಗ್ರಾಹಕನಿಗೆ ಎಂತಹ ಚಪ್ಪಲಿಗಳು ಬೇಕು ಎಂಬುದನ್ನು ಕೇಳಿ ತಿಳಿದುಕೊಂಡ. ನಂತರ ಹಲವಾರು ನಮೂನೆಗಳ ಚಪ್ಪಲಿಗಳನ್ನು ಮುಂದೆ ಹರಡಿದ. ಪ್ರತಿಯೊಂದನ್ನೂ ಅಳತೆ ಮತ್ತು ಆಯ್ಕೆಯ...

6

ಕಿಟಕಿ

Share Button

ಅವರಿರವರ ಮಾತಿಗೆತಲೆಕೆಡಿಸಿ ಕೊಳ್ಳುವಿ ಯಾಕೆನಿನ್ನದಲ್ಲದ ತಪ್ಪಿಗೆಸುಮ್ಮನೆ ಕೊರಗುವಿ ಯಾಕೆ ಮಾತಿಗೆ ಮಾತು ಬೆಳೆಸಿಜಗಳ ಮಾಡುವಿ ಯಾಕೆಮೌನದಿ ಸಾಗುವುದನ್ನುಮರೆಯುವಿ ಯಾಕೆ ಊರು ಎಂದ ಮೇಲೆಕೇರಿ ಇರಲೇ ಬೇಕುಕೇರಿಯಲ್ಲಿಯ ಮೋರಿಗಬ್ಬು ನಾರುವುದು ಯಾಕೆ ಹೊಂದಾಣಿಕೆ ಇರದ ಮೇಲೆದೂರ ದೂರ ಸರಿಬೇಕು ಜೋಕೆಸುಮ್ಮನೆ ಗುದ್ದಾಟವ ಮಾಡಿಯಾತನೆ ಪಡೆಯುವುದು ಯಾಕೆ ಮನದೊಳಗಿನ ಕಿಡಿ...

5

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 7

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ತಾಂಗ್ ಲಾಂಗ್  ಥಿಯೇಟರ್  – ವಾಟರ್ ಪಪೆಟ್ ಶೋ ಸಂಜೆ 05 30  ಗಂಟೆಗೆ  ಮಾರ್ಗದರ್ಶಿ ಟೀನ್ ಜಾನ್  ‘ವಾಟರ್ ಪಪೆಟ್ ಶೋ’  ವೀಕ್ಷಿಸಲು ಟಿಕೆಟ್ ಸಮೇತವಾಗಿ ಬಂದಿದ್ದ.  ‘ತಾಂಗ್ ಲಾಂಗ್ ‘ಎಂಬಲ್ಲಿ ಸಂಜೆ ಆರುವರೆಗೆ ಶೋ ಆರಂಭವಾಗುವುದಿತ್ತು.  ನಾವು ಸುಸಜ್ಜಿತವಾದ ಹಾಲ್  ಥಿಯೇಟರ್...

4

ಮಣ್ಣಿನ ಮಹತ್ವ…..

Share Button

ದಾಸವಾರೇಣ್ಯ ಶ್ರೀ ಪುರಂದರ ದಾಸರು ಹೇಳಿದಂತೆ “ಮಣ್ಣಿಂದ ಕಾಯ ಮಣ್ಣಿಂದ”. “ಮಣ್ಣಿಂದಲೇ ಸಕಲ ಸಂಪತ್ತು”. ಇಂತಹ ಅದಿಷ್ಟೋ ಸಾಲುಗಳು ಇವೆ. ಮಣ್ಣಿನ ಕುರಿತಾಗಿ ನಮ್ಮ ಕವಿಗಳು, ಲೇಖಕರು ಬಹಳ ಮಹತ್ವಪೂರ್ಣವಾಗಿ ಬರೆದಿದ್ದಾರೆ. ಮೇಲ್ಕಂಡ ಸಾಲುಗಳು ಎಷ್ಟೊಂದು ಅರ್ಥಪೂರ್ಣ ಹಾಗೂ ಮೌಲಿಕ. “ಮಣ್ಣು” ಎಂಬ ಎರಡಕ್ಷರ ಕೇಳಿದೊಡನೆ ಮೈಮನಗಳಿಗೆ...

4

ಕಾವ್ಯ ಭಾಗವತ 21: ದೇವೇಂದ್ರ

Share Button

21.ಷಷ್ಠ ಸ್ಕಂದ, ಅಧ್ಯಾಯ -2ದೇವೇಂದ್ರ ದೇವ, ಮಾನವ, ದಾನವಕುಲಗಳೆಲ್ಲದರ ಜನಕನೊಬ್ಬನೆಎಂಬರಿವುದೇವ, ಮಾನವ, ದಾನವಕುಲಬಾಂಧವರಿಗೆಇದ್ದರೂ, ಇರದಿದ್ದರೂಈ ಜಗದಿ ಅವರವರ ಪಾತ್ರದನಿರ್ವಹಣೆಯ ಭಾರ, ಅವರವರದೇಅದನರಿತು ನಡೆಯದಿರೆ ಶಿಕ್ಷಿಸಿಸರಿಪಡಿಸಿ,ಈ ಜಗವ ಮುನ್ನಡೆಸುವ ಪರಿಈ ಜಗನ್ನಿಯಾಮಕನಿಗೆ ತಿಳಿಯದೆ ದೇವತೆಗಳೊಡೆಯದೇವೇಂದ್ರನದೊಂದು ಸಮಸ್ಯೆದೇವತೆಗಳೆಂದರೆಸಕಲಗುಣ ಸಂಪನ್ನರುರಾಗ, ದ್ವೇಷ, ಮದ, ಮಾತ್ಸರ್ಯಗಳೆಂಬರಾಕ್ಷಸೀ ಪ್ರವೃತ್ತಿಯದಾನವ ಕುಲ ನಿಯಮಗಳ ಸಂಹಾರಕರುಎಂಬುದ ಮರೆತುಗುರು,...

Follow

Get every new post on this blog delivered to your Inbox.

Join other followers: