Daily Archive: April 14, 2022
ಬುಲೆಟನ್ನು ಕೊಂಡು ಎರಡು ಮೂರು ವರ್ಷಗಳೇ ಕಳೆದಿದ್ದರೂ ಮನೆ ಸಾಮಾನು ತರುವ ಕೈಂಕರ್ಯದಲ್ಲಿ ಅದನ್ನು ತೊಡಗಿಸಿದ್ದು ಬಿಟ್ಟರೆ ದೂರದ ಬೈಕ್ ಪಯಣದ ಕನಸು ಇನ್ನೂ ಕನಸಾಗಿಯೇ ಇತ್ತು. ದೂರ ಪಯಣದ ಹಂಬಲ, ಅಂಜಿಕೆಗಳೊಂದಿಗೆ ಎಲ್ಲಿಗೆ ಹೋಗುವುದು , ಹೇಗೆ ಹೋಗುವುದು , ಯಾರು ಜೊತೆ ಹೋಗುವುದು ಎಂಬೆಲ್ಲಾ...
1.”ಗೀಚಿ ಬಿಡಬಾರದೇ ಒಂದೆರಡು ಸಾಲುಮನವನ್ನಾಗಿಸಿ ಖಾಲಿ ಹಾಳೆ,ತನ್ಮಯ ಈ ಕವಿ ಹೃದಯಮನದಾಗಸದಲ್ಲಿ ಕವಿತೆಯ ರಂಗುಆವರಿಸುವ ವೇಳೆ “. 2.”ಒಮ್ಮೆ ನಸುನಕ್ಕುನೋವಿಗೇ ಒಡ್ಡಿ ಬಿಡುಸವಾಲು,ಕಲಿಯಬೇಕಿದೆ ಇಲ್ಲಿಚಿಂತೆಗಳ ಸಂತೆಯಲ್ಲೂ ನಗಲು “. 3.”ಮಾತಿನ ಗಾಳ, ಕಣ್ಣಿನ ಜಾಲಸೋತು ಹೋಯಿತು ಮನಸು,ಮಿಂಚು ಕಣ್ಣುಗಳೇ ದೀವಟಿಗೆಮನಸು ಸಾಗುವ ಹಾದಿಗೆಚಿಗುರೊಡೆಯಿತು ಕನಸು”. 4. ”...
ಕಳೆದವಾರ ತರಗತಿಯಲಿ ಕಿರುಪರೀಕ್ಷೆ ನಡೆದಿತ್ತುಜಂಗಮವಾಣಿಯಲ್ಲಿ ಬಂದ ಅಂಕಗಳ ಸಂದೇಶವಿಂದು ಮನೆಯಲಿ ಬಿರುಗಾಳಿ ಸೃಷ್ಟಿಸಿತ್ತು ಮುನಿದ ಅಮ್ಮ ತಟ್ಟೆ ಪಾತ್ರೆಗಳ ಸಾಂಕೇತಿಕ ಭಾಷೆಯಲಿ ಮಾತನಾಡಿದರುನನ್ನ ಮೇಲಿನ ಆಕ್ರೋಶವ ಬರೀ ಉಪ್ಪಿಟ್ಟು ಮಾಡಿ ತೀರಿಸಿಕೊಂಡರು ಸದಾ ಓದಿನಲಿ ಮುಂದಿರುವ ತಂಗಿ ಮುಸಿ ಮುಸಿ ನಗುತಾತಾನು ಗಳಿಸಿದ ಅಂಕಗಳ ಮೂರು ಬಾರಿ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಎಲ್ಲಾ ವಿಷಯಗಳನ್ನು ಚುಟುಕಾಗಿ ತಿಳಿಸಿದ ಲಕ್ಷ್ಮಿ “ಆ ದಿನ ಉಡಲು ನಿನ್ನ ಹತ್ತಿರ ಹೊಸ ಸೀರೆ ಇದೆಯಾ? ಇಲ್ಲಾ ಅವರುಗಳನ್ನೆಲ್ಲ ಆಹ್ವಾನಿಸಿ ಹಿಂದಕ್ಕೆ ಬರುವಾಗ ಒಂದು ಸೀರೆ ತಂದುಕೊಟ್ಟರೆ ಅದನ್ನು ರೆಡಿಮಾಡಲು, ಅಂದರೆ ಅಂಚು ಹೊಲಿದು, ಬ್ಲೌಸ್ ಸಿದ್ಧಪಡಿಕೊಳ್ಳಲು ಆಗುತ್ತಾ ಭಾಗ್ಯ?” ಎಂದು...
ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ನಮ್ಮ ನಡೆ, ನುಡಿ ಹಾಗೂ ವ್ಯಕ್ತಿತ್ವನ್ನು ನಮ್ಮ ಮಾತು ಹೇಳುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ನುಡಿವಾಣಿಯಂತೆ ನಮ್ಮ ನಡತೆ ಇರಬೇಕು. ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ನುಡಿಯಂತೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೊಬ್ಬರ...
ಯೂಸೆಮಿಟಿ ಒಳಹೊಕ್ಕು…. ಅದ್ಭುತ ಯೂಸೆಮಿಟಿಗೆ ತಲಪಿದ ಸಂಭ್ರಮ. ಪಾರ್ಕಿನ ಒಳ ಭಾಗದ ರಸ್ತೆಯು ನಿಬಿಡವಾದ ಚೂಪು ಮೊನೆ ವೃಕ್ಷಗಳ ಕಾಡಿನ ಮಧ್ಯೆ ಸಾಗುತ್ತಿತ್ತು…ಕಾರೊಳಗಿದ್ದ ನಮ್ಮ, ಕೂಗುತ್ತಿದ್ದ ಉದರವನ್ನು ಸಮಾಧಾನಗೊಳಿಸಲು ಅನುಕೂಲಕರವಾದ ನೀರಿನ ಆಸರೆಯ ಯೋಗ್ಯ ಸ್ಥಳಕ್ಕಾಗಿ ಕಣ್ಣುಗಳು ಹುಡುಕುತ್ತಿದ್ದವು. ಅದೋ… ರಸ್ತೆ ಪಕ್ಕದಲ್ಲಿಯೇ ಹರಿಯುವ ಹೊಳೆಯು ನಮ್ಮನ್ನು...
ಅಪ್ಪನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿ ಬಂದ ಮೇಲೆ ಈ ಮನೆ ನನ್ನ ಮನೆಯೆಂದೆ ಅನಿಸುತ್ತಿಲ್ಲ. ಎಲ್ಲಿ ನೋಡಿದರೂ ಅಪ್ಪನ ಮುಖವೇ ಕಾಣುತ್ತಿದೆ. ಅಪ್ಪನ ಚಾಳೀಸು, ಬಿಳಿ ಪಂಚೆ, ಶರ್ಟ್, ಅರ್ಘೆ ಪಾತ್ರೆ, ಜಪ ಮಣಿ, ಕುಳಿತುಕೊಳ್ಳುತ್ತಿದ್ದ ಕುರ್ಚಿ, ತಟ್ಟೆ, ಲೋಟ ಹೀಗೆ ಸಾಕಷ್ಟು ನಿರ್ಜೀವ ವಸ್ತುಗಳು...
ಯೋಗ ತರಗತಿಯಿಂದ ಹಿಂತಿರುಗಿ ಬಂದವಳು, ಚಹಾ ತಯಾರಿಸಿ, ಒಂದು ಕೈಲಿ ಅಂದಿನ ಪೇಪರ್ ಹಿಡಿದು, ಮತ್ತೊಂದು ಕೈಲಿ ಚಹಾ ಕಪ್ಪನ್ನು ಹಿಡಿದು ನಿಧಾನವಾಗಿ ಚಹಾ ಗುಟುಕರಿಸುತ್ತಾ ಇದ್ದೆ. ಏಕೋ ಏನೋ, ಕೈಲಿದ್ದ ಬಿಸಿ ಬಿಸಿ ಚಹಾ ಲೋಟ ಥಟ್ಟನೆ ಕೆಳಗೆ ಬಿತ್ತು. ನೆಲದ ಮೇಲೆಲ್ಲಾ ಚೆಲ್ಲಾಡಿದ್ದ ಚಹಾ...
ನಿಮ್ಮ ಅನಿಸಿಕೆಗಳು…