ಹನಿ ಇಬ್ಬನಿ – ಅಂತರಂಗದ ಇನಿದನಿ
1.”ಗೀಚಿ ಬಿಡಬಾರದೇ ಒಂದೆರಡು ಸಾಲು
ಮನವನ್ನಾಗಿಸಿ ಖಾಲಿ ಹಾಳೆ,
ತನ್ಮಯ ಈ ಕವಿ ಹೃದಯ
ಮನದಾಗಸದಲ್ಲಿ ಕವಿತೆಯ ರಂಗು
ಆವರಿಸುವ ವೇಳೆ “.
2.”ಒಮ್ಮೆ ನಸುನಕ್ಕು
ನೋವಿಗೇ ಒಡ್ಡಿ ಬಿಡು
ಸವಾಲು,
ಕಲಿಯಬೇಕಿದೆ ಇಲ್ಲಿ
ಚಿಂತೆಗಳ ಸಂತೆಯಲ್ಲೂ ನಗಲು “.
3.”ಮಾತಿನ ಗಾಳ, ಕಣ್ಣಿನ ಜಾಲ
ಸೋತು ಹೋಯಿತು ಮನಸು,
ಮಿಂಚು ಕಣ್ಣುಗಳೇ ದೀವಟಿಗೆ
ಮನಸು ಸಾಗುವ ಹಾದಿಗೆ
ಚಿಗುರೊಡೆಯಿತು ಕನಸು”.
4. ” ಭುವಿಯ ಮೇಲೆ ಮುಂಗಾರಿನ ಸೋನೆ ಮಳೆ,
ಹೃದಯದಂಗಳದ ತುಂಬಾ
ನಿನ್ನ ನೆನಪಿನ ಸುರಿಮಳೆ,
ಬಣ್ಣದಿಂದಾವೃತ ಬದುಕೆಂಬ ಪುಸ್ತಕದ
ಒಂದೊಂದೂ ಹಾಳೆ,
ನೀ ಬಳಿ ಬಂದು ಕೈಯ್ಯೊಳಗೆ ಕೈ ಸೇರಿಸಿ
ತುಸು ದೂರ ಹೆಜ್ಜೆ ಹಾಕೋ ವೇಳೆ “.
5.”ನಿನಗೆಲ್ಲಿದೆ ಕವಿತೆಯೇ ಕೊನೆ?,
ನೀ ತುಂಬಿದ ಪೈರಿನ ತೆನೆ,
ಮೀಟುವ ಹೃದಯ ವೀಣೆ,
ನನ್ನಂತರಂಗದ ತುಂಬಾ ನೀನೆ “.
–ನಯನ ಬಜಕೂಡ್ಲು
ಚಂದದ ಕವನ
ಧನ್ಯವಾದಗಳು ಮೇಡಂ
ಅರ್ಥಪೂರ್ಣ ಹನಿಗವನಗಳು ಮೇಡಂ
ಧನ್ಯವಾದಗಳು
ಅರ್ಥಗರ್ಭಿತ ಹನಿಗವನಗಳು ಸುಂದರ ಪದ ವಿನ್ಯಾಸದಿಂದ
ಗಮನಾರ್ಹವಾಗಿ ಸೆಳೆಯುತ್ತವೆ.
ಧನ್ಯವಾದಗಳು ಸರ್
ಚಂದದ ಹನಿಗಕವಿತೆ ಗವಿತೆಗಳು ಬರೆಯುವಹಂಬಲ,ಬದುಕಿನ ನೋವಿನಲ್ಲೂ ನಗುತ ಸಾಗುವ ಹಂಬಲ, ಬರಹದ ಕಲ್ಪನೆ ಕೊನೆಯಿಲ್ಲದ ಮೌನ ಅಂತರಂಗ ದ ತರಂಗ.. ಆರ್ಥಪುರ್ಣವಾಗಿವೆ ಧನ್ಯವಾದಗಳು ಮೇಡಂ
ಒಮ್ಮೆ ನಸುನಕ್ಕು ನೋವಿಗೆ ಒಡ್ಡಿ ಬಿಡು ಸವಾಲು
ಮಿಂಚುಕಣ್ಣುಗಳೇ ದೀವಟಿಗೆ ಮನಸು ಸಾಗುವ ಹಾದಿಗೆ
ಸಾಲುಗಳು ಬಹಳ ಇಷ್ಟವಾಯಿತು
ತುಂಬಾ ಚೆನ್ನಾಗಿದೆ ಮೇಡಮ್
ಬಿರುಬೇಸಗೆಯಲ್ಲಿ ಮನೆಯ ಹೊರಗೆ ಸೋನೆ ಮಳೆ ಬೀಳುತ್ತಿರುವಾಗ, ಸುರಹೊನ್ನೆಯಲ್ಲಿಯೂ ಸೊಗಸಾದ , ನವಿರಾದ ‘ಹನಿಗವನಗಳನ್ನು’ ಓದಲು ಖುಷಿಯಾಯಿತು.
Very nice
ಸೊಗಸಾದ ಅರ್ಥಪೂರ್ಣ ಹನಿಗವನಗಳು.
ತುಂಬಾ ಒಳ್ಳೆಯ ಹನಿಗವನಗಳು. ಹೀಗೇ ಗೀಚುತ್ತಿರಿ…