Daily Archive: March 31, 2022

12

ನನ್ನ ಹೆಸರು ಏನು?

Share Button

ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು ಗುಲಾಬಿ, ಹಳದಿ ಚಂಡು ಹೂವುಗಳು, ಬಿಳಿಯ ಸೇವಂತಿಗೆ, ಕೇಸರಿ ಬಣ್ಣದ ಕಾಸ್ಮಾಸ್ ಈ ರೀತಿ ಅನೇಕ ಹೂವುಗಳಿದ್ದವು. ಅಲ್ಲಿ ಬಣ್ಣದ ಚಿಟ್ಟೆಗಳೂ, ದುಂಬಿಗಳೂ ಮತ್ತು ಜೇನುಗಳೂ...

8

ಕಾದಂಬರಿ: ನೆರಳು…ಕಿರಣ 11

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಭಾಗ್ಯಳ ಮದುವೆಗೆ ನಾವು ಕಾರಣಕರ್ತರಾಗಿಬಿಟ್ಟೆವು. ಹೇಗೋ ಏನೋ ಅನ್ನುವ ಆತಂಕ ನನ್ನನ್ನು ಕಾಡುತ್ತಿತ್ತು. ಇವತ್ತು ಜೋಯಿಸರ ಮನೆಗೆ ಹೋದಾಗ ಅಲ್ಲಿನ ವಾತಾವರಣ, ಮನೆ, ಮಗ, ಅವರ ಹೆಂಡತಿಯ ನೇರ ನಡೆನುಡಿ ಕಂಡಮೇಲೆ ನೆಮ್ಮದಿಯಾಯಿತು. ಹೇಗೋ ಮುಂದಾಳತ್ವ ವಹಿಸಿಕೊಂಡಿದ್ದೇವೆ. ಸುಸೂತ್ರವಾಗಿ ನಡೆದುಬಿಟ್ಟರೆ...

9

ಸುಖ ವಿಲ್ಲಾ

Share Button

ಇಲ್ಲಿರುವ ಎಲ್ಲಾ ಮನೆಗಳೇಆದರೆ ಹಾಗೆನ್ನುವ ಹಾಗಿಲ್ಲ , ಇದೆಲ್ಲ ವಿಲ್ಲಾ.ಹೊರಗಿನಿಂದ ಕಾಣುತಿವೆಒಂದೇ ಬಗೆಯ ಮುಖದವೆಲ್ಲಾಸಾಲಾಗಿ ನಿಂತಿವೆ ತಳೆದುಒಂದೇ ಬಣ್ಣದಲ್ಲೆಲ್ಲಾ ಸುತ್ತೆಲ್ಲಾ ತಡೆಗೋಡೆಮಧ್ಯೆ ಮುಖ್ಯದ್ವಾರಒಳಗೆ ಹೋಗುವ ಹಾಗಿಲ್ಲಹಾಗೆಯೇ ಎಲ್ಲಾ,ತಡೆಯುವನವ ಕಾವಲುಗಾರಮುಂಚಿತವಾಗಿ ತಿಳಿಸಬೇಕುಅಲ್ಲಿನ ಭೇಟಿಯ ಸಮಾಚಾರ ಒಳಗೇನಿಲ್ಲ ಹೇಳಿ ?ಆಟದ ಮೈದಾನ,ಈಜುಕೊಳ,ಮರ, ಗಿಡಗಳಿಂದ ತುಂಬಿದ ಉದ್ಯಾನವನಸಾವಕಾಶ, ಸಾವಧಾನವೇಇಲ್ಲಿ ಪ್ರಧಾನ ವಿಲ್ಲಾದೊಳಗೆಲ್ಲ...

5

ವರಾಹಿ ನದಿ… ಭೂಗರ್ಭ ವಿದ್ಯುದಾಗಾರ

Share Button

ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...

4

ಮತ್ತೆ ಬಂದಿದೆ ಯುಗಾದಿ….ಶುಭಾಶಯಗಳು

Share Button

ಋತುಗಳು ಜಾರಿ ಕಾಲಚಕ್ರದಲ್ಲಿತಂದಿದೆ ಚೈತ್ರಮಾಸವ ಚಿಗುರೆಲೆಯಲಿಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿತಂದಿದೆ ಹೊಸ ವರುಷವ ಲೋಕದಲಿ ಯುಗಾದಿಯ ಸಡಗರ ಸಂಭ್ರಮದಲ್ಲಿನಲಿದಿದೆ ಕಾಲವು ಪುನರ್ಜ್ಜೀವನದಲ್ಲಿಯುಗಾದಿಯ ಸಡಗರ ಸಂಭ್ರಮದಲ್ಲಿಆನಂದಿಸಿದೆ ಕಾಲವು ನವೀನತೆಯಲಿ ಹರಿದಿದೆ ಜಗದಲಿ ಹರುಷದ ಹೊನಲುಮೆರಗಿದೆ ಚೆಲುವಲಿ ಹೂದೋಟದ ಮಡಿಲುಕುಣಿದಿದೆ ಲೋಕವು ಕೋಗಿಲೆ ಹಾಡಲುಧ್ವನಿಸಿದೆ ನಾದವು ಪ್ರಕೃತಿಯು ನಗಲು ಯುಗಾದಿ ಸಡಗರ...

7

ಅವಿಸ್ಮರಣೀಯ ಅಮೆರಿಕ-ಎಳೆ 16

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…) ಹಣ್ಣು ಬೇಕೇ…ಹಣ್ಣು..!!  ಅಮೆರಿಕವು ಅತ್ಯಂತ ಸ್ವಚ್ಛ ರಾಷ್ಟ್ರ ಎಂಬುದು ಸರ್ವವಿದಿತ. ಇಲ್ಲಿ, ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರುವುದರಿಂದ ಸಹಜವಾಗಿ ಇಂಧನದ ಹೊಗೆಯು, ಗಾಳಿಯನ್ನು ಹೆಚ್ಚು ಮಲಿನಗೊಳಿಸುತ್ತದೆ, ಹಾಗೂ ಅತಿ ನೇರಳೆ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಛತ್ರಿ…ಓಝೋನ್ ಪದರವನ್ನು ಬೇರೆಲ್ಲಾ ರಾಷ್ಟ್ರಗಳಿಗಿಂತ ಹೆಚ್ಚು...

12

ಕವಿತೆ ಎಂಬ ಮೂಡಣ, ಪಡುವಣ

Share Button

ಕವಿತೆಯೆoಬುದು ಮನದ ರಿಂಗಣಬದುಕ ನುಸುಲಿನ ಹೂರಣ..ಮಿಡತೆ ಚಿಟ್ಟೆಯದಾಗಿ ಹಾರುವಭಾವ ಯಾನದ ಚಿತ್ರಣ.. ನೋವು ನಲಿವಿನ ಪಾಕ ಕವಿತೆಗೆಸೋಲು ಗೆಲುವೂ ಕಾರಣ..ಅಮ್ಮನಪ್ಪುಗೆ ಕಂದನೆಳೆತಸಿಹಿಯು ಕಹಿಯ ಮಿಶ್ರಣ.. ತಿಮಿರ ಕವಿದಿಹ ಭಾವ ಜೀವಿಗೆಬೆಳಕನುದಿಸುವ ಮೂಡಣ..ಬೆಂದು ಬಳಲಿದ ಕರ್ಮಚಾರಿಗೆತಂಪ ನೀಡುವ ಪಡುವಣ.. –ವಿದ್ಯಾಶ್ರೀ ಅಡೂರ್, ಮುಂಡಾಜೆ +8

7

ಸುರಿಯಲಿ ವರ್ಷಧಾರೆ

Share Button

ವಾರದಲ್ಲಿ ಎರಡು ಬಾರಿ ಬೀಡು ಬಿರುಸಾಗಿ ಸುರಿಯುತ್ತಿದ್ದ ಮಳೆಈಗೀಗ  ಕಣ್ಮರೆಯಾಗಿದೆಅಡ್ಡಾದಿಡ್ಡಿ ಬಂದು ಧರೆಯನ್ನು ತೊಯಿಸಿ ತೊಪ್ಪೆಯಾಗಿಸುವ ಹನಿಗಳಿಗಾಗಿಮನ ಹಪಹಪಿಸಿದೆ ಸುರಿದಷ್ಟು ತೀವ್ರತೆ ಪಡೆಯುತ್ತಿದ್ದ ವರ್ಷದ ವೇಗಕ್ಕಾಗಿಬಳಲಿದ ಧರೆಯಿಂದು ಬಾಯಿ ತೆರೆದು ಕಾಯುತಿದೆಬಿಸಿಲ ಬೇಗೆಗೆ ಬಿರುಕು ಮೂಡಿದ ಧರಣಿಹರಿಯುವ ತಂಪನೆಯ ಹಳ್ಳ ತೊರೆಗಳಿಗಾಗಿ ಹಂಬಲಿಸಿದೆ ಕರಿಮೋಡ ಸುತ್ತುಗಟ್ಟಿ ಶಿಷ್ಟಾಚಾರ...

Follow

Get every new post on this blog delivered to your Inbox.

Join other followers: