Daily Archive: March 17, 2022
ನಾವೆಲ್ಲ ಚಿಕ್ಕವರಾಗಿದ್ದಾಗ ಗುಬ್ಬಕ್ಕ ಮತ್ತು ಕಾಗಕ್ಕ ಕಥೆಯನ್ನು ಅದೆಷ್ಟು ಬಾರಿ ಕೇಳಿ ಆನಂದಿಸಿದ್ದೆವು. ಮುಗ್ಧ ಮನಸ್ಸಿಗೆ ಬಹಳ ಆಪ್ಯಾಯಮಾನವಾಗಿತ್ತಲ್ಲವೇ ಈ ಕಥೆ? ಈಗ ಎಲ್ಲಿ ಹೋದವು ಗುಬ್ಬಚ್ಚಿಗಳು? ನಗರಗಳಲ್ಲಿ ಗುಬ್ಬಚ್ಚಿ ಕಾಣುತ್ತಿಲ್ಲ. ಅಲ್ಲಿಯ ಪರಿಸರ ಅದಕ್ಕೆ ಹೊಂದುತ್ತಿಲ್ಲ. ಹಳ್ಳಿಗಳ ಕಡೆ ಗುಬ್ಬಿಗಳು ಇನ್ನೂ ಇವೆ. ಇದೇ ಸಮಾಧಾನಕರ...
ಅಮ್ಮ ಮೊರದಲ್ಲಿದ್ದ ಅಕ್ಕಿ ಆರಿಸುವಾಗಒಂದೊಂದೇ ಕಾಳು ಹೆಕ್ಕಲು ಬರುತ್ತಿದ್ದೆವಿಶಾಲ ಹಜಾರದ ದೊಡ್ಡ ಪಟಗಳ ಹಿಂದೆಗೂಡು ಕಟ್ಟಿ ನಿನ್ನ ಸಂಸಾರ ಹೂಡುತ್ತಿದ್ದೆ. ಬೆಳಗಾಗುತ್ತಿತ್ತು ನಿನ್ನ ಚಿಂವ್ ಚಿಂವ್ ಕೇಳಿಪುಟ್ಟ ಕಣ್ಣು ಬಿಟ್ಟು ಮರಿ ನೋಡುತ್ತಿತ್ತು ಪಿಳಿಪಿಳಿಮುದ್ದಾಡಲು ಮುಟ್ಟಲು ಹೋದರೆ ಅಮ್ಮನ ಬೈಗುಳಮನುಷ್ಯ ಮುಟ್ಟಿದ ಗುಬ್ಬಿ ಗುಂಪು ಸೇರದು ಮಕ್ಕಳ....
ಬಣ್ಣವಿಲ್ಲ ಬಲಿಷ್ಠ ಮೈಕಟ್ಟುಅನೂಹ್ಯ ಗಮ್ಯದಷ್ಟು ಎತ್ತರವಯಸ್ಸಿಗಿಲ್ಲ ಯಾವುದೇ ಚೌಕಟ್ಟುಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವಸತ್ಯ ಕಾಣೆಯಾಗಿದೆ.. ಸಿಹಿಯಾದ ಸುಳ್ಳಿನ ನರ್ತನದ ಆರ್ಭಟಕಟುಸತ್ಯದ ತಲೆಮೇಲೆ!ಕಹಿಯೆಂದು ದೂಡಿಸಿಕೊಂಡ ಮುಗ್ಧಸತ್ಯಸುಳ್ಳಿನ ಸಂಭ್ರಮದ ಸುಳಿಯಲಿ ಸಿಲುಕಬಾರದೆಂದುನಿಲುಕಲಾರದಾಯಿತೇ? ಈರ್ಷ್ಯೆ ಕುಣಿಯುವವನ ಕಣ್ಣಿಂದ ಜಾರಿಮುಖವಾಡದ ಚಹರೆಯೊಳಗಿಂದ ಉದುರಿಕಪಟ ನಗೆಯೊಂದರಿಂದ ನೆಗೆದುಅನೈತಿಕತೆಯ ಹಾದಿಯಿಂದ ದೂರ ದೂರ ಓಡಿಸತ್ಯ ಕಾಣೆಯಾಗಿದೆ.....
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ ದುಡಿದರೂ ಕಾಣದ ಆಯಾಸಈಗ ಬೆಳ ಬೆಳಗ್ಗೆಯೇ ಕಾಡತೊಡಗಿದೆಕೈ ಕಾಲುಗಳಲಿ ನೋವಿನ ರಾಗ ಇಣುಕತೊಡಗಿದೆ ನಡೆದೇ ಬರುತ್ತಿದ್ದ ತರಕಾರಿ ಈಗ ವಾಹನ ಕೇಳತೊಡಗಿದೆಗೊತ್ತಿಲ್ಲದೆ ಮಾತಿನ ಮಧ್ಯೆ ರಾಜಕೀಯ...
ಬಲಿಯುತ್ತಿದೆ ಕೊಟ್ಟು ಹೋಗೆನ್ನುವ ಭಾವ ಎಲ್ಲ ಬಿಟ್ಟು ಹೊರಡುವ ಮುನ್ನ ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ ಉಳಿದಿದ್ದಷ್ಟೆ ನನಗಾಗಿ ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ ಏಗಿದ್ದಾಗಿದೆ ಆಲಯದ ಬದುಕಿನ ಬವಣೆಗಳೊಂದಿಗೆ ಆಲಯದೊಳಗಿನ ಬದುಕು ಸಂಕೀರ್ಣ ಪ್ರತಿಫಲಾಪೇಕ್ಷೆಯ ಸ್ವಾರ್ಥದ ಲೆಕ್ಕಮಮಕಾರಗಳ ಬಂಧನದ ಸಿಕ್ಕುಗಳಒಳತೋಟಿಯ ತೀರದ ತೊಳಲಾಟ ಹಿಟ್ಟಿಲ್ಲದಾಗ ಹೊಟ್ಟೆಗೆಮುಚ್ಚಬೇಕು ಕಿಟಕಿ ಬಾಗಿಲುಮಲ್ಲಿಗೆಯಿದ್ದಾಗ ಜುಟ್ಟಿಗೆಹಾರುಹೊಡೆಯ ಬೇಕು ಬಾಗಿಲು ರಟ್ಟು ಮಾಡದೆ ಗುಟ್ಟಿನ...
ನಾ ನಿನ್ನ ಮರೆಯಲಾರೆ…! ನಾಲ್ಕು ದಿನಗಳ ನಮ್ಮ ಸಿನಿಮಾ ನಗರಿಯ ಸುತ್ತಾಟದ ಗಮ್ಮತ್ತನ್ನು ಮೆಲುಕು ಹಾಕುತ್ತಾ ಇದ್ದಂತೆಯೇ ಪುಟ್ಟ ಮಗುವಿನ ಒಡನಾಟದಲ್ಲಿ ದಿನಗಳು ಸರಾಗವಾಗಿ ಓಡುತ್ತಿದ್ದವು. ಅದಾಗಲೇ ಚಳಿಗಾಲ ಮುಗಿದು ವಸಂತಕಾಲ ಪ್ರಾರಂಭವಾಯ್ತು. ನಾವಿದ್ದ ಬೇ ಏರಿಯಾವು, ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ, ಸಮಶೀತೋಷ್ಣ ಪ್ರದೇಶದ ಜನರಿಗೆ ವಾಸಿಸಲು ಅತ್ಯಂತ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಮಲಗಿದ್ದ ಲಕ್ಷ್ಮಿಗೆ ಮನೆಯ ಹೊರಗಡೆ ಏನೋ ಸದ್ದುಗದ್ದಲ ಕೇಳಿಸಿ ಥಟ್ಟನೆ ಎಚ್ಚರಿಕೆಯಾಯಿತು. ಹಾಗೇ ಸದ್ದಿಗೆ ಕಿವಿಕೊಟ್ಟಳು. “ಷ್..ನಿಮ್ಮನ್ನು ಇಷ್ಟುಬೇಗ ಎದ್ದುಬನ್ನಿ ಎಂದು ಯಾರು ಹೇಳಿದರು? ಹೋಗಿ ಇನ್ನೂ ಸ್ವಲ್ಪ ಹೊತ್ತು ಮಲಗಿ. ಅಪರೂಪಕ್ಕೆ ಅಮ್ಮ ಮಲಗಿದ್ದಾರೆ. ಗಲಾಟೆ ಮಾಡಬೇಡಿ” ಭಾವನಾ ತನ್ನ ಕಿರಿಯರಿಗೆ...
ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್...
ನಿಮ್ಮ ಅನಿಸಿಕೆಗಳು…