Daily Archive: July 1, 2021

17

ಮಾತು – ಮೌನ

Share Button

“ಮಾತಾದಾಗ ಮೌನ, ಗೀಚಿತು ಮನ ಕವನ, ತೆರೆದ ಪುಸ್ತಕ ಈ ಜೀವನ, ಮನದ ಎಲ್ಲಾ ಭಾವನೆ ಹಾಳೆಯ ಮೇಲೆ ಅನಾವರಣಗೊಂಡ ಕ್ಷಣ”. “ಮಾತಿನಲ್ಲೇನಿಹುದು ಬರೀ ವಿರಸ, ಸಿಹಿಮಾತು ತರಬಲ್ಲದು ಸಂತಸ, ಕಟುಮಾತು ಹುಟ್ಟುಹಾಕಿ ದ್ವೇಷ, ಕಾರ್ಮೋಡ ಕವಿದಂತೆ ಆಗುವುದು ಮನದಾಗಸ”. “ಇರಬೇಕು ನಾವಾಡುವ ಪದಗಳ ಮೇಲೆ ಹಿಡಿತ,...

9

ನಿರ್ಧಾರ

Share Button

ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ ಮರೆತರು ಕೂಡ ಮತ್ತೆ ಆ ನೋವುಗಳು ಬರಸಿಡಿಲಾಗಿ  ಚೇತನಾಳೆದೆಗೆ ಬಡಿಯುತ್ತಲಿದ್ದವು.ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಯು ಜೀವನದ ಸಂತೋಷವನ್ನೆಲ್ಲಾ ತೊಳೆದು, ಬರಿಯ ಬಿಂದುಗಳೊಳಗಿನ ಕೊನೆಯುಸಿರಿನ ಶಬ್ದವನ್ನಷ್ಟೇ ನನ್ನ ಬಾಳಿನಲ್ಲಿ...

10

ನಾ ಓದಿದ ಪುಸ್ತಕ : ‘ಸಾರ್ಥ’

Share Button

ಇತ್ತೀಚೆಗೆ ಎಸ್.ಎಲ್. ಭೈರಪ್ಪರವರ “ಸಾರ್ಥ” ಕಾದಂಬರಿ ಓದುವ ಅವಕಾಶ ಸಿಕ್ಕಿತು. ಇದರ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನವಷ್ಟೇ. ಓದು ಪ್ರಾರಂಭಿಸಿದಾಗ ನನ್ನ ಬುದ್ಧಿಮತ್ತೆಗೆ ಸವಾಲು ಎನಿಸುವಂತೆ ಕಂಡಿತಾದರೂ, ನನ್ನ ಸಂಕಲ್ಪದಂತೆ ಓದನ್ನು ಮುಂದುವರಿಸಿದೆ. ಓದುತ್ತಾ ಹೋದಂತೆ, ಧಾರ್ಮಿಕ ಸಂಘರ್ಷಗಳ ಅನಾವರಣವಾಗುತ್ತಾ ಹೋಗಿ ನನ್ನನ್ನು ತಬ್ಬಿಬ್ಬು ಮಾಡಿದ್ದು ಸತ್ಯದ ವಿಚಾರ....

12

ಜಯವಿರುವವರೆಗೆ ಭಯವಿಲ್ಲ.

Share Button

ಶ್ರಾವಣ ಮಾಸ ಬರುತ್ತಿದ್ದಂತೆ ಹತ್ತಿರವಾಗುತ್ತಿದ್ದ ಹಬ್ಬಗಳ ಪ್ರಯುಕ್ತ ಮನೆಯನ್ನು ಸ್ವಚ್ಛಮಾಡುವ ಯೋಜನೆ ಹಾಕಿಕೊಂಡೆ. ಮೊದಲು ಮನೆಯ ಒಳಗೆ, ಹೊರಗೆ ಇರುವ ಧೂಳು, ಜೇಡರ ಬಲೆಗಳು, ಮೂಲೆಗಳಲ್ಲಿ ಅಡಗಿಕೊಂಡಿರುವ ಕ್ರಿಮಿಕೀಟಗಳನ್ನು ತೆಗೆದುಬಿಡೋಣವೆಂದು ಪ್ರತಿದಿನವೂ ಒಂದೊಂದೇ ಕೊಠಡಿಯಂತೆ ಕಾರ್ಯಕ್ರಮ ಸಿದ್ಧವಾಯಿತು. ಅದಕ್ಕೆ ಬೇಕಾದ ಧೂಳು ತೆಗೆಯುವ ಗಳವನ್ನಿಟ್ಟಿದ್ದ ಸ್ಟೋರ್ ರೂಮಿನ...

8

ದಿನಚರಿ ಬದಲಾಗಿದೆ

Share Button

ಜನ ಬೀದಿಯಲ್ಲಿ ಕಾಣುತ್ತಿಲ್ಲ ಇತ್ತೀಚೆಗೆ ಮುಗುಮ್ಮಾಗಿ ಒಳಸರಿದು ಸಾವಿನ ಸೆರಗ ದೂಡುತ್ತಿದ್ದಾರೆ ದೂರಕೆ ಆದರೂ…ಭೀತಿ ಕಂಗಳನು ಬಿಗಿದಪ್ಪಿ ಕೂತಿದೆ ಬಗಲಲೇ ಅವಿತು ಬಲಿಗಾಗಿ ಬಾಯ್ಬಿಡುತಿದೆ ಜನ ಮನೆಮುಂದೆ ಕೂರದೆ ಕರಿನೆರಳ ಕೂಗಿಗೆ ಬಾಗಿಲು ತೆರೆಯದೆ ತರಕಾರಿಗಾಗಿ ಹೊರಬರದೆ ಒಳತೂರಿಕೊಳ್ಳುತಿರುವರು ಸರ್ರನೆ ಮಾತಿಗೆ ಸಿಕ್ಕಿ ಕಡೆಗೆ ಪ್ರಾಣಕ್ಕೆ ಕುತ್ತೆಂಬ…ಭಯ!...

11

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 9

Share Button

ಮನೆಗೆ ಒಳ್ಳೆಯ ಬೆಲೆಯೇ ಬಂತು.  ಸತೀಶರು ಈಗ ಸ್ವಲ್ಪ ಜಾಗೃತರಾದರು.  ತಮ್ಮಿಬ್ಬರಲ್ಲಿ ಒಬ್ಬರು ಮರಣಿಸಿದರೂ ಇನ್ನೊಬ್ಬರು ಹಣಕಾಸಿಗಾಗಿ ಬವಣೆ ಪಡದಂತೆ ಲೆಕ್ಕಾಚಾರ ಹಾಕಿ, ಬೇಕಷ್ಟು ಹಣವನ್ನು ಬ್ಯಾಂಕಿನಲ್ಲಿ ಇಟ್ಟುಕೊಂಡು, ಒಂದು ಮಹಡಿ ಮೇಲಿನ ಚಿಕ್ಕ ಮನೆಯನ್ನು ಭೋಗ್ಯಕ್ಕೆ ಹಾಕಿಕೊಂಡು ಮಿಕ್ಕ ಹಣವನ್ನು ಮಗಳಿಗೆ ಕಳಿಹಿಸಿದರು. ಸರಳವಾಗಿ ಗೃಹ...

10

ಸತ್ಯಕ್ಕೆ ಇನ್ನೊಂದು ಹೆಸರು…?

Share Button

          ಯಾರೋ ಮೂರನೆ ವ್ಯಕ್ತಿಯ ವಿಷಯದಲ್ಲಿ ಇಬ್ಬರು ಪರಸ್ಪರ ವಾದ ಮಾಡುತ್ತಾರೆ. ಆ ವಾದ ವಿವಾದವಾಗಿ ವಿವಾದವಾಗಿ ಸಾಕಷ್ಟು ಚರ್ಚೆಯಾಗಿ ವಿಕೋಪಕ್ಕೆ ತಿರುಗಿ ಮೈಮನಸ್ಯ, ಹಳೆದ್ವೇಷ, ಪೂರ್ವಾಗ್ರಹಗಳಿಂದ ಪೀಡಿತರಾಗಿ ಕೆರಳಿ ಕೆಂಡವಾಗುವುದು, ಶಾರೀರಕ ಮಾನಸಿಕ ಪೆಟ್ಟುಗಳೂ ಆಗಿ ಕೊನೆಗೊಳ್ಳುವುದು ಇವುಗಳೆಲ್ಲ ಪ್ರಸ್ತುತ ಸಮಾಜದಲ್ಲಿ  ಕಾಣಿಸುವ ವಿದ್ಯಮಾನಗಳೆಂದು ನಾವು...

9

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ? ಪುಟ 7

Share Button

ಆದಿ ಮಾನವನ ತೊಟ್ಟಿಲು – (CRADLE OF HUMANS) ನಮ್ಮ ಪ್ರವಾಸದ ಕೊನೆಯ ದಿನ. ನಮ್ಮ ನಿಮ್ಮೆಲ್ಲರ ತವರೂರನ್ನು ನೋಡೋಣವೇ. ದಕ್ಷಿಣ ಆಫ್ರಿಕಾವನ್ನು ‘ಆದಿ ಮಾನವನ ತೊಟ್ಟಿಲು’ ಎನ್ನುವರು. ನಮ್ಮಜ್ಜ, ನಿಮ್ಮಜ್ಜ, ಮುತ್ತಜ್ಜನ ಜನ್ಮಸ್ಥಳ ದಕ್ಷಿಣ ಆಫ್ರಿಕಾದಲ್ಲಿದೆ ಎಂದರೆ ನಂಬುವಿರಾ? ಸುಮಾರು ಎರಡು ಲಕ್ಷ ವರ್ಷಗಳ ಹಿಂದಿನ...

6

ಭಾವ ಬೇತಾಳ

Share Button

ಗಡಿಬಿಡಿಯಲ್ಲೂ ಒಡಮೂಡುವುದು ಭಾವಗಳಡಿಗಡಿಗೇ.. ಪಡಿಯಚ್ಚಿನ ತರ ಮನದ ಬಿಕ್ಕುಗಳು ರೆಕ್ಕೆ ಪಡೆವ ಘಳಿಗೇ… ಸಣ್ಣಗೆ ಹರಿಯುವ ಜುಳು ಝರಿಯಂತೆ ಕವಿತೆಯ ಸಂಚಾರ.. ಕಣ್ಣಿಗೆ ಕಾಣದ ಆತ್ಮದ ಒಳಗೆ ಮಾರ್ದನಿಸುವುದಿಂಚರ.. ಶೀತಲ ಗಾಳಿಗೆ ಥರಗುಡುವಂತೆ ಮನದೊಳಗಿನ ಮಾತು.. ಬೇತಾಳದ ತರ ಬೆನ್ನನುಬಿಡದೆ ಕಾಡುವ ಪಿಸುಮಾತು.. ಸೋನೆ ಮಳೆಯಂತೆ ತೊಟ್ಟಿಕ್ಕುವುದು...

16

ಮನದ ಮನೆ

Share Button

ಅಲ್ಲೊಂದು ಅರಮನೆ. ವಿಶಾಲವಾದ ಮನೆ. ಹೆಬ್ಬಾಗಿಲು ಮುಚ್ಚಿತ್ತು. ಬಲವಾಗಿ ತಳ್ಳಿದೆ. ತೆರೆದುಕೊಂಡಿತು. ಒಳಗಿನಿಂದ ಚಿಲಕ ಹಾಕಿರಲಿಲ್ಲ. ಒಳ ನಡೆದೆ. ಆಗಲೋ ಈಗಲೋ ಕತ್ತಲಾವರಿಸುವಂತಿತ್ತು. ಮುಸ್ಸಂಜೆಯ ಮಂದ ಬೆಳಕು. ಮನೆ ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಮನೆಯೊಳಗಿರಬೇಕಾದ ಎಲ್ಲ ಬಗೆಯ ಸೌಕರ್ಯಗಳೂ ಇದ್ದವು. ಅಂದದ ಚಂದದ ಮನೆಯೊಳಗೆ ಮನಸುಗಳ ಸುಳಿವೇ ಇರಲಿಲ್ಲ....

Follow

Get every new post on this blog delivered to your Inbox.

Join other followers: