ಮಾತು – ಮೌನ
“ಮಾತಾದಾಗ ಮೌನ,
ಗೀಚಿತು ಮನ ಕವನ,
ತೆರೆದ ಪುಸ್ತಕ ಈ ಜೀವನ,
ಮನದ ಎಲ್ಲಾ ಭಾವನೆ
ಹಾಳೆಯ ಮೇಲೆ
ಅನಾವರಣಗೊಂಡ ಕ್ಷಣ”.
“ಮಾತಿನಲ್ಲೇನಿಹುದು ಬರೀ ವಿರಸ,
ಸಿಹಿಮಾತು ತರಬಲ್ಲದು ಸಂತಸ,
ಕಟುಮಾತು ಹುಟ್ಟುಹಾಕಿ ದ್ವೇಷ,
ಕಾರ್ಮೋಡ ಕವಿದಂತೆ ಆಗುವುದು
ಮನದಾಗಸ”.
“ಇರಬೇಕು ನಾವಾಡುವ
ಪದಗಳ ಮೇಲೆ ಹಿಡಿತ,
ಆಗ ಹೊಮ್ಮುವುದು ಬಾಳಲ್ಲಿ
ಮಧುರ ಸಂಗೀತ,
ಯಾರು ಇರುವವರು ಇಲ್ಲಿ ಶಾಶ್ವತ?,
ಬದುಕು ಬರೀ ಎರಡು ದಿನದ ಆಟ”.
“ಈ ಸತ್ಯವನ್ನು ಅರಿತಲ್ಲಿ ನಿರಾಳ ಮನ,
ಮಾಡಬಯಸದು ಯಾರೊಡನೆಯೂ ಕದನ,
ಹೊಂದಿ ತುಸು ಸಮಾಧಾನ,
ಕಲಿಯುವುದು ಹಂತಹಂತವಾಗಿ
ಸಾಗುವುದನ್ನ”.
“ಆಡ ಬಯಸದೆ ಇದ್ದಾಗ
ಅರ್ಥವಿಲ್ಲದ ಮಾತು,
ಹೋಗುವುದು ಮನಸ್ಸು
ಮೌನದೊಳಗೆ ಬೆರೆತು,
ಈ ಮೌನವೂ ಒಂದು ಸುಂದರ ಜಗತ್ತು,
ಅರ್ಥವಾಗುವುದು ಹೋದಾಗಲಷ್ಟೇ
ಈ ಲೋಕದೊಳಗೊಮ್ಮೆ ಕಲೆತು”.
“ಇಳಿಸಂಜೆ ಸರಿದು ಆವರಿಸೊ
ಕತ್ತಲೊಳಗು ಇಹುದೊಂದು ದೀರ್ಘ ಮೌನ,
ಅಲ್ಲಿ ಹುಡುಕುವುದು ಕಣ್ಣು
ಆಗಸದಲ್ಲಿ ಚಂದಿರನ,
ಕತ್ತಲು – ಬೆಳಕಿನ ಆಟದಂತೆಯೇ
ಈ ಜೀವನ,
ಆಗದೆ ಇರುವುದೆ ಪ್ರಕೃತಿಯಲ್ಲೂ
ವಸಂತನ ಆಗಮನ ?”.
– ನಯನ ಬಜಕೂಡ್ಲು
ಮಾತು-ಮೌನ ಕವಿತೆ ಚೆನ್ನ..!
Thank you madam
ಬಹಳ ಅರ್ಥಪೂರ್ಣ ಕವಿತೆ ಮೇಡಂ
ಧನ್ಯವಾದಗಳು ಸರ್
ಮಾತು ಮೌನದ ಅನಾವರಣ ತುಂಬಾ ಸೊಗಸಾಗಿ ಮೂಡಿ ಬಂದಿದೆ,,ಹೀಗೆ ಕವನಗಳು ಹೆಚ್ಚಾಗಿ ಮೂಡಿ ಬರಲಿ
Thank you
ಚೆಂದದ ಅರ್ಥಪೂರ್ಣ ಕವನ..
Thank you
ಹೌದು.. ಅದಕ್ಕೇ, ಮಾತು ಬೆಳ್ಳಿ, ಮೌನ ಬಂಗಾರ ಎನ್ನುವ ಗಾದೆ ಮಾತು ಹಿರಿಯರಿಂದ ಮೂಡಿಬಂದಿದೆ. ಬಹಳ ಒಳ್ಳೆಯ ಸಂದೇಶ ಹೊತ್ತ ಕವನ. ಧನ್ಯವಾದಗಳು ನಯನಾ ಮೇಡಂ.
ಧನ್ಯವಾದಗಳು ಮೇಡಂ
ಉತ್ತಮ ಮೌಲ್ಯದ ಕವಿತೆ
ವಂದನೆಗಳು
ಧನ್ಯವಾದಗಳು ಮೇಡಂ
ಅರ್ಥ ಪೂರ್ಣ ವಾ ದ ಕವನ. ಅಭಿನಂದನೆಗಳು ಮೇಡಮ್.
ಮಾತು, ಮೌನಗಳೆರಡರ ಮಹತ್ವವನ್ನು ಕಾವ್ಯಮಯವಾಗಿ ಕಟ್ಟಿ ಕೊಟ್ಟಿರುವ ನಿಮಗೆ ಅಭಿನಂದನೆಗಳು
ಕವನದ ಜೊತೆಗೆ ಸಾರಾಂಶವನ್ನು ಹೇಳಿರುವುದು
ವಿಶೇಷವಾಗಿದೆ, ನಯನರವರೆ.
ಕತ್ತಲೊಳಗೊಂದು ದೀಪ ಮೌನ ಅಥ೯ವತ್ತಾದ ಸಾಲುಗಳು
ಚಂದದ ಕವನ