Category: ಕವಿ ಕೆ.ಎಸ್.ನ ನೆನಪು
ಶಿವಮೊಗ್ಗ ಸುಬ್ಬಣ್ಣ , ಕೆ ವಿ ಸುಬ್ಬಣ್ಣರಂತೆಯೇ ನಮ್ಮ ತಂದೆಯವರ ಆತ್ಮೀಯ ಸ್ನೇಹವಲಯದಲ್ಲಿ ಇದ್ದ ಮತ್ತೊಬ್ಬ ಸುಬ್ಬಣ್ಣ . ಬಹುಶಃ ಮೊದಲ ಬಾರಿಗೆ ಶಿವಮೊಗ್ಗ ಸುಬ್ಬಣ್ಣನವರನ್ನು ನಮ್ಮ ತಂದೆಯವರಿಗೆ ಪರಿಚಯಿಸಿದವರು ಎನ್ ಎಸ್ ಎಲ್ ಭಟ್ಟ ಅವರು. ಭಟ್ಟರ ದೀಪಿಕಾ ಹಾಗೂ ಶರೀಫರ ಧ್ವನಿಸುರಳಿಗಳಲ್ಲಿ ಸುಬ್ಬಣ್ಣ ಅವರದ್ದು ಪ್ರಬಲ ದನಿಯೇ. ಶಿವಮೊಗ್ಗದಲ್ಲಿ...
ದೂರದ ಹೆಗ್ಗೋಡಿನಲ್ಲಿ ಸಿನಿಮಾ ರಸಗ್ರಹಣ, ನಾಟಕ ರೆಪರ್ಟರಿ, ಪುಸ್ತಕ ಪ್ರಕಾಶನ ಮುಂತಾದ ರಚನಾತ್ಮಕ ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ನಿಸ್ಪೃಹವಾಗಿ ತೊಡಗಿಸಿಕೊಂಡಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಅವರೊಡನೆಯೂ ಆತ್ಮೀಯವಾದ ಸ್ನೇಹವನ್ನು ಹೊಂದಿದ್ದರು ನಮ್ಮ ತಂದೆ. ಅವರ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಕ್ಷಿ ಸಾಹಿತ್ಯ ತ್ರೈಮಾಸಿಕ...
ಕವಿ ಕೆ ಎಸ್ ನ ಗಮಕ ಕ್ಷೇತ್ರದಲ್ಲಿ ಅಸಾಧಾರಣ ಸೇವೆಸಲ್ಲಿಸಿ,ಗಮಕದ ಪಠ್ಯಕ್ರಮದ ರಚನೆಯಲ್ಲೂ ತೊಡಗಿಸಿಕೊಂಡು, ಗಮಕ ಕಲೆಗೆ ಸಂಬಂಧಿಸಿದ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲೂ ಯಶಸ್ವಿಯಾಗಿದ್ದ ನಾಡಿನ ಪ್ರಖ್ಯಾತ ಗಮಕಿ ಎಂ. ರಾಘವೇಂದ್ರರಾವ್ ಅವರು ನಮ್ಮ ತಂದೆಯವರ ಮಾಧ್ಯಮಿಕ ಶಾಲಾ ಸಹಪಾಠಿಯಾಗಿದ್ದರು. ರಾಘವೇಂದ್ರರಾವ್ ನಮ್ಮ ತಂದೆಯವರಿಗಿಂತ ನಾಲ್ಕೈದು ತಿಂಗಳು ಹಿರಿಯರು....
ಕವಿ,ವಿಮರ್ಶಕ,ವಿದ್ವಾಂಸ,ಭಾಷಾಂತರಕಾರ, ಹಾಗೂ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದ ಎ ಕೆ ರಾಮಾನುಜನ್ ಅವರಿಗೆ ಅಮೆರಿಕೆಯಲ್ಲಿದ್ದರೂ ಕನ್ನಡದ್ದೇ ಕನವರಿಕೆ. ಅಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯದ ವಿಶೇಷವಾಗಿ ಕಾವ್ಯದ ಬೆಳವಣಿಗೆಯನ್ನು ಬಹಳ ಜತನದಿಂದ ಗಮನಿಸುತ್ತಿದ್ದ ಅಧ್ಯಯನಜೀವಿ ಎ ಕೆ ಆರ್. .ಭಾರತಕ್ಕೆ ಆಗಾಗ್ಗೆ ಬಂದಾಗಲೆಲ್ಲ ನಮ್ಮತಂದೆಯವರನ್ನು ತಪ್ಪದೆ ಭೇಟಿಯಾಗುತ್ತಿದ್ದರು.ಬೆಂಗಳೂರಿಗೆ ಬಂದೊಡನೆ ಇಂಥ...
ಬೇಂದ್ರೆ,ಅಡಿಗ ಹಾಗು ಕೆ ಎಸ್ ನ ಮೂರೂ ಕವಿಗಳ ಪ್ರಭಾವವನ್ನು ಮೈಗೂಡಿಕೊಂಡು ಬೆಳೆದರೂ ತಮ್ಮದೇ ಶೈಲಿಯಿಂದ ಕವನಗಳನ್ನು ರಚಿಸಿ, ಕವಿಗೋಷ್ಠಿಗಳಲ್ಲಿ ಆಕರ್ಷಕವಾಗಿ ಹಾಗೂ ಧ್ವನಿಪೂರ್ಣವಾಗಿ ವಾಚಿಸಬಲ್ಲ ಸಾಮರ್ಥ್ಯ ಹೊಂದಿದ್ದವರು ಸುಮತೀಂದ್ರ ನಾಡಿಗ ಅವರು. ಎಪ್ಪತ್ತರ ದಶಕದಿಂದಲೂ ನಮ್ಮ ತಂದೆಯವರನ್ನು ಭೇಟಿಯಾಗಲು ಬರುತ್ತಿದ್ದವರಲ್ಲಿ ನಾಡಿಗರೂ ಪ್ರಮುಖರು.ಅಮೆರಿಕದಲ್ಲಿ ವಾಸವಾಗಿದ್ದ ಭಾವಮೈದುನ...
ಬಹುಶಃ 1974ರ ವರ್ಷ ಎಂದು ತೋರುತ್ತದೆ. ಸುಮತೀಂದ್ರ ನಾಡಿಗ ಅವರು ಒಮ್ಮೆ ಒಬ್ಬ ತರುಣ ಕವಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ತಂದೆಯವರಿಗೆ “ಇವರು ವ್ಯಾಸರಾವ್ ಅಂತ.ಯುಕೊ ಬ್ಯಾಂಕಿನಲ್ಲಿದ್ದಾರೆ.ಕವನಗಳ ರಚನೆಯಲ್ಲಿ ಆಸಕ್ತಿ.” ಎಂದು ಪರಿಚಯಿಸಿದರು. ನಮ್ಮ ತಂದೆಯವರು “ಸಂತೋಷ,ಯಾವುದಾದರೂ ಕವನ ತಂದಿದ್ದೀರೋ”ಎಂದು ಕೇಳಿದರು. ವ್ಯಾಸರಾವ್ “ಹೌದು” ಎಂದಾಗ “ಸರಿ ಓದಿ” ಎಂದರು...
ಸಂತ ಶಿಶುನಾಳ ಶರೀಫರ ರಚನೆಗಳನ್ನು ಹಾಗೂ ಕನ್ನಡದ ಭಾವಗೀತೆಗಳನ್ನು ಕ್ಯಾಸೆಟ್ಟುಗಳ ರೂಪದಲ್ಲಿ ಹೊರತರಲು ಕಾರಣರಾದ ಸಹೃದಯ ಕವಿ,ವಿಮರ್ಶಕ, ಚಿಂತಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ನಮ್ಮ ತಂದೆಯವರ ಆಪ್ತಸ್ನೇಹವಲಯಗಳಲ್ಲಿ ಇದ್ದವರೇ. ಎಪ್ಪತ್ತರ ದಶಕದಲ್ಲಿ ಕೆ ಎಸ್ ನ ರ ಶೈಲಿ ನವೋದಯದಿಂದ ನವ್ಯಕ್ಕೂ ಪಲ್ಲಟಗೊಂಡಿದ್ದನ್ನು ತಾರ್ಕಿಕವಾಗಿ ವಿಶ್ಲೇಷಿಸಿ “ಹೊರಳು ದಾರಿಯಲ್ಲಿ ಕೆ...
ಕನ್ನಡ ಸಾಹಿತ್ಯಲೋಕದ ವಿದ್ವಾಂಸ, ಲಲಿತ ಪ್ರಬಂಧಕಾರ, ಹಾಸ್ಯಪಟು, ವಿಮರ್ಶಕ ಹಾಗೂ ಶ್ರೇಷ್ಠ ಭಾಷಣಕಾರ ಪ್ರೊ.ಅ ರಾ ಮಿತ್ರರವರು ನಮ್ಮ ತಂದೆಯವರ ಕಾವ್ಯಗಳಿಗೆ ಸಹೃದಯ ಪ್ರಚಾರ ನೀಡುತ್ತಿರುವ ಮಹನೀಯರು. ತಮ್ಮ ಭಾಷಣಗಳಲ್ಲಿ ಅವರು ಕೆ ಎಸ್ ನ ಅವರ ಬಹುಪಾಲು ಕವನಗಳನ್ನು ಯಾವುದೇ ಬರವಣಿಗೆಯ ಸಹಾಯವಿಲ್ಲದೆ ಉದ್ಧರಿಸಬಲ್ಲರು. ನಮ್ಮ ತಂದೆಯರಿಗೂ ಮಿತ್ರ ಅವರಿಗೂ ಒಂದು ನಿಕಟವಾದ ಸ್ನೇಹವಿತ್ತು.ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ತಮ್ಮ ಕನ್ನಡ ಅಧ್ಯಾಪನ ವೃತ್ತಿ ಆರಂಭಿಸಿ, ಹಲವು ಕಾಲದ ನಂತರ ಸರ್ಕಾರಿ ...
ಕೆ ಎಸ್ ನ ಮತ್ತು ಆ ಕಾಲದಲ್ಲಿ ತಮ್ಮದೇ ಶೈಲಿಯನ್ನು ಅರಗಿಸಿಕೊಂಡು ಕಾವ್ಯ ಬರೆಯುತ್ತಿದ್ದ ಹಲವರ ರಚನೆಗಳು ನವ್ಯ ವಿಮರ್ಶಕರ ಅವಗಣನೆಗೆ ಸಿಲುಕಿತೇನೊ ಎನ್ನುವಂಥ ಸಂದಿಗ್ಧ ಕಾಲದಲ್ಲಿ ,ಇಂಥ ಕಾವ್ಯದ ಬಗ್ಗೆ ಒಂದು ಸಹೃದಯ ವಿಮರ್ಶೆಯನ್ನು ನೀಡುತ್ತಲೇ ಬಂದಿದ್ದ ಹಲವು ಮಹನೀಯರಲ್ಲಿ ಪ್ರಮುಖರು ಪ್ರೊ .ಎಲ್ .ಎಸ್ ಶೇಷಗಿರಿರಾವ್. ಬೋಧನೆ,ನಿಘಂಟು ಕಾರ್ಯ,ಇಂಗ್ಲಿಷ್...
ಒಂದು ಕವಿಗೋಷ್ಠಿಯಲ್ಲಿ ನಮ್ಮ ತಂದೆಯವರು ಕವಿತಾವಾಚನ ಮಾಡಿದಾಗ ಜನರ ಮೇಲೆ ಅದು ಅಷ್ಟೊಂದು ಪರಿಣಾಮ ಬೀರಿರಲಿಲ್ಲ.ಇಷ್ಟೊಂದು ಒಳ್ಳೆಯ ಪದ್ಯದ ಭಾವ ಸಂವಹನವಾಗದೆ ಹೋದುದನ್ನು ಗಮನಿಸಿದ ರಾಜರತ್ನಂ ತಕ್ಷಣ ಎದ್ದು ನಿಂತು “ಇದೊಂದು ಉತ್ತಮ ಪದ್ಯ. ಇದನ್ನು ಈಗ ನಾನು ಓದುತ್ತೇನೆ. ಇಲ್ಲಿ ಬರುವ ಪದುಮ ನನ್ನ ಕವನಗಳಲ್ಲಿ ಬರುವ...
ನಿಮ್ಮ ಅನಿಸಿಕೆಗಳು…