Daily Archive: July 20, 2023
ಕವಿಯಾಗುವೆ ಕೂತು ಮಲೆನಾಡ ಮಳೆಗೆ,ಪದದನಿಯ ಪೋಷಿಸುವೆ ಸಾಹಿತ್ಯಭೂಮಿಗೆ. ಭಾವ ಭುವನಕ್ಕೆ ಸಾಹಿತ್ಯ ಸ್ನಾನ ಸಂಲಗ್ನವಾದಂತೆ ಸೊಗಸು,ಮಳೆಯ ಮಧ್ಯದಲ್ಲಿ ಮುಗುಳಗೆಯನ್ನಪಿತು ಎನ್ನೀ ಮನಸು. ಮೂಡಿಬಂದದ್ದು ಮಲೆನಾಡ ಮನೋಹರ ಚಿತ್ರ,ಮುಂಗಾರನ್ನಪಿದ ಮರದ ಚಿತ್ರ,ಮಳೆಯ ಮಧ್ಯದಲ್ಲೂ ಮೆರೆಯುತ್ತಿದ್ದ ಮಾಮರದ ಚಿತ್ರ,ಮಳೆದನಿಯ ಮೀರಿಸಿದ ಝರಿಯ ಚಿತ್ರ. ಮುಗುಳಗೆ ಮೀರಿ ನಯನದೆರೆದಾಗ ಮೂಡಿದ್ದು,ಮಳೆಯ ನಡುವೆ...
ಬೆಡ್ ರೂಮಿನ ಡ್ರೆಸ್ಸಿಂಗ್ ಟೇಬಲ್ ನ ಪೂರ್ಣ ನಿಲುವಿನ ಕನ್ನಡಿಯ ಕಡೆಗೆ ನೋಟ ಹರಿಯಿತು. ಸ್ವಲ್ಪ ಸ್ಥೂಲವೆನಿಸುವ, ತಲೆಯಲ್ಲಿ ಹೆಚ್ಚಿನ ಬಿಳಿಕೂದಲಿನ, ಬೊಜ್ಜು ಹೊಟ್ಟೆಯ ನಡು ವಯಸ್ಸಿನ ಮಹಿಳೆ ಯಾರೆಂದು ನನಗೇ ಒಂದು ಕ್ಷಣ ಗುರುತು ಸಿಕ್ಕದೆ ಹಾಗೇ ದಿಟ್ಟಿಸಿದೆ . ನಿಜ ಅದು ನಾನೇ ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಸೆಂಟ್ರಲ್ ಪಾರ್ಕ್ ಸಾಂತಾಕ್ಲಾರಾದಲ್ಲಿ ನಾವಿರುವ ಮನೆಯಿಂದ ಕೇವಲ ಐದು ನಿಮಿಷಗಳ ನಡಿಗೆಯ ದೂರದಲ್ಲಿರುವ ಅತ್ಯಂತ ವಿಶೇಷವಾದ ಪಾರ್ಕಿನ ಬಗ್ಗೆ ಹೇಳದಿರಲು ಸಾಧ್ಯವೇ? ಹೌದು…ಅದುವೇ ಸೆಂಟ್ರಲ್ ಪಾರ್ಕ್. ಇದು ನನ್ನ ಅತ್ಯಂತ ಪ್ರೀತಿಯ ತಾಣವೂ ಹೌದು. ಸಾಮಾನ್ಯ ರೀತಿಯ ಉದ್ಯಾನವನದಂತಿರದ ಇದು ಸುಮಾರು 52ಎಕರೆಗಳಷ್ಟು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅನಾಗರಿಕರು ಯಾರು? ಅಂದು ಬೆಳಗ್ಗೆ ಗಿರೀಶ ತಿಂಡಿ ತಿನ್ನುತ್ತ “ರಂಗಪ್ಪ, ನಾಳೆ ನನ್ನ ಫ್ರೆಂಡ್ ಸುರೇಶ ಬರ್ತಿದಾನೆ. ಅದೇ ಎರಡು ವರ್ಷದ ಹಿಂದೆ ಬಂದಿದ್ದನಲ್ಲ. ನಾಳೆ ನಮ್ಮ ಮನೆಲೇ ಇರ್ತಾನೆ. ಗೆಸ್ಟ್ ರೂಮು ರೆಡಿ ಮಾಡು” ರಂಗಪ್ಪನಿಗೆ ಸಂಬೋಧಿಸಿದರೂ ಸುಮನ್‍ಗೂ ಹೇಳಿದ. ಗಿರೀಶ ಅತ್ತ...
ಒಂದು ಗುಡ್ಡದ ಮೇಲೆ ದಷ್ಟಪುಷ್ಟವಾದ ಎಮ್ಮೆಯೊಂದು ಹುಲ್ಲು ಮೇಯುತ್ತಿತ್ತು. ಏಕೋ ಅದರ ಕಣ್ಣು ಗುಡ್ಡದ ಕೆಳಗೆ ನಿಂತಿದ್ದ ತನ್ನ ಯಜಮಾನನತ್ತ ಹೊರಳಿತು. ಅದಕ್ಕೆ ಆ ಮನುಷ್ಯ ಅದಕ್ಕೆ ತುಂಬ ಚಿಕ್ಕದಾಗಿ ಕಾಣಿಸಿದ. ”ಅಯ್ಯೋ ನನ್ನ ಒಡೆಯ ಎಷ್ಟು ಚಿಕ್ಕವನಾಗಿ ಕಾಣುತ್ತಿದ್ದಾನೆ. ಇದೇಕೆ ಹೀಗೆ?” ಎಂದುಕೊಂಡಿತು. ಆದರೆ ಕಾರಣ...
ಈ ಬಾರಿ ಅಧಿಕಮಾಸ ಇರುವುದರಿಂದ ನಿಜಶ್ರಾವಣದಲ್ಲೇ ನಾವು ಈ ದೇವಿಯ ವ್ರತವನ್ನು ಆಚರಿಸುತ್ತೇವೆ. ವಿಷ್ಣು ಪತ್ನಿಯನ್ನು ಆರಾಧಿಸುವ ಇಂದಿನ ದಿನವನ್ನು “ವರಮಹಾಲಕ್ಷ್ಮಿ ವ್ರತ” ಎಂದು ಕರೆಯಲಾಗುತ್ತದೆ. “ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪ್ತಾನ್ತ್ಯಭಾರ್ಗವೇವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ”” ನಭೋ ಮಾಸೇ ಪೂರ್ಣಿಮಾಯಾಂ ಅಂತಿಕಸ್ಥೇ ಭೃಗೋರ್ದಿನೇಮತ್ಪೂಜಾ ತತ್ರ ಕರ್ತವ್ಯಾ...
ಶಾಲೆಗಳಲ್ಲಿ ಸಾಮಾನ್ಯವಾಗಿ ಹುಡುಗರಿಗೆ ಶೋಕಿ ಮಾಡುವ ಗೀಳು. ʼಹುಡುಗರುʼ ಎಂದರೆ ಕೇವಲ ಬಾಲಕರು ಎಂದರ್ಥ. ಬಾಲಕಿಯರಲ್ಲ. ಹೊಸದಾಗಿ ಮಾರುಕಟ್ಟೆಗೆ ಬಂದ ವಾಚು, ಸ್ಮಾರ್ಟ್ ವಾಚು, ಬೂಟುಗಳು, ಅಥವಾ ಬೆಲ್ಟು; ಎಲ್ಲಕ್ಕಿಂತ ಮುಖ್ಯವಾಗಿ ಹೇರ್ ಸ್ಟೈಲು! ಈ ಕೂದಲನ್ನು ಬೇರೆ ಬೇರೆ ರೀತಿಗಳಲ್ಲಿ ಕತ್ತರಿಸಿಕೊಳ್ಳುವುದು ಒಂದು ಚಟ. ವಾರವಾರಕ್ಕೂ...
ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ ಜೀವ ಅಮ್ಮನ ಕರುಳಿಂದ ಬೇರ್ಪಡಿಸಿದ ಡಾಕ್ಟರಮ್ಮಳ ಹೊಡೆಯಲು ಪುಟ್ಟ ಮುಷ್ಟಿ ಕಟ್ಟಿದೆಒಲವು ತುಂಬಿದ ಕಂಗಳ ನೋಡಿ ಹಾಗೇ ನಿದ್ದೆಗೆ ಜಾರಿದೆ ತೆಳು ಗುಲಾಬಿ ಬಣ್ಣದ ತ್ಚಚೆಯಲ್ಲಿ...
ನಿಮ್ಮ ಅನಿಸಿಕೆಗಳು…