Monthly Archive: April 2023
ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?ಕೇಳಿದ ಶಿಷ್ಯನ ಪ್ರಶ್ನೆಗೆಗುರುಗಳ ಉತ್ತರ ಮಾತಿನಲಲ್ಲ !ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !! ಮರವೊಂದನು ತೋರಿದರು ; ಮಗುಮ್ಮಾದರುತಂಗಾಳಿ ತೊನೆವಾಗ ಹಣ್ಣಾದ ಎಲೆಯೊಂದುಹಾಗೇ ಏನನೂ ತಂಟೆ ಮಾಡದೆ ಸೀದಾಜಾರುತ ನೆಲಕಿಳಿಯುತ ಶರಣಾಯಿತು ಇಳೆಗೆ ;ಚಿಗುರುವ ಎಲೆಗೆ ದಾರಿ ಮಾಡಿಕೊಡುವ ಬಗೆ...
ಅಕ್ಷಯ ತೃತೀಯ ಅಥವಾ ಆಖಾತೀಜ್ – ಹಿಂದೂಗಳು ಹಾಗೂ ಜೈನರಿಗೆ ಪವಿತ್ರದಿನ. ಚಾಂದ್ರಮಾನ ಪದ್ಧತಿಯಂತೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿ. ಛತ್ತೀಸ್‌ಗಡದಲ್ಲಿ ಈ ದಿನವನ್ನು ಅಕ್ತಿಯೆಂದೂ ಗುಜರಾಥ್ ಹಾಗೂ ರಾಜಸ್ಥಾನಗಳಲ್ಲಿ ಆಖಾತೀಜ್ ಎಂದೂ ಕರೆಯುತ್ತಾರೆ. ಜೈನ ಹಾಗೂ ಹಿಂದೂ ಕ್ಯಾಲೆಂಡರ್‌ಗಳಲ್ಲಿ, ತಿಂಗಳಲ್ಲಿ ಎಣಿಕೆಯಲ್ಲಿ ಕೆಲವು ದಿನ...
‘ಬಸ್ಸು ಲೇಟಾದರೆ ಇಲ್ಲೇ ಉಳಿಯಬೇಕಾದೀತು!ʼ ಎಂದು ಅತ್ತೆ ಗುಡುಗಿದಾಗ ನನಗೆ ಹೆದರಿಕೆ ಆಯಿತು. ನಿಲ್ದಾಣಕ್ಕೆ ಧಾವಿಸಿ ಹೊರಡಬೇಕು ಎಂದಾಗ ಎದುರಿನಲ್ಲೇ ಕಾರೊಂದು ಬಂದು ನಿಂತಿತು. ಕಿಟಕಿಯಿಂದ ಚಿರಪರಿಚಿತ ಮುಖವೊಂದು ಇಣುಕಿ, “ಬಾರೋ ಲೋ! ಬಸ್ಟಾಂಡಿಗೇ ತಾನೆ?” ಎಂದು ಕೇಳಲು, ನಾನು ತಲೆಯಲ್ಲಾಡಿಸಿ ಕಾರು ಹತ್ತಿದೆ. ಹಿಂದೆಯೇ ಅತ್ತೆ...
ಸಮಾಜದಲ್ಲಿ ಯಾವುದೇ ಯೋಗ್ಯ ಸ್ಥಾನಮಾನ, ಐಶ್ವರ್ಯ, ಸತ್ಕೀರ್ತಿ ದೊರಕಲು ನಾವು ಪಡೆದುಕೊಂಡು ಬಂದಿರಬೇಕು ಎಂದು ಮಾತಿದೆ. ಅರ್ಥಾತ್ ಅದು ಪೂರ್ವಯೋಜಿತ ಕರ್ಮಫಲಗಳೊಂದಿಗೆ ದೈವಾನುಗ್ರಹ ಎಂಬ ನಂಬಿಕೆಯಲ್ಲಿ ಆ ನುಡಿ ಬಂದಿದೆ. ನಾವು ಅನುಭವಿಸುವ ನಿರೀಕ್ಷಿಸುವ ಸಕಲ ಕಾಮನೆಗಳೂ ಅಷ್ಟೇ. ಹಿಂದಿನ ಅರಸರ ಆಳ್ವಿಕೆಯಲ್ಲಿ ರಾಜನಮಂತ್ರಿ, ರಾಜಪುರೋಹಿತ, ರಾಜವೈದ್ಯ...
ಟ್ರಿನ್….ಟ್ರಿನ್….ಅಂತ ಅಲಾರಾಂ ಹೊಡೆದ ಶಬ್ಧಕ್ಕೆ ಕಿವಿಗಳು ಚುರುಕಾದವು. ಅಯ್ಯೋ ಇಷ್ಟು ಬೇಗ ಬೆಳಗಾಯಿತ ಎಂದು ಬಂದ್ ಮಾಡಲು ಕಣ್ ಬಿಟ್ಟರೆ ಸಮಯ ನಾಲ್ಕು ಗಂಟೆ….ಓ ನಾನಿಂದು ಹಾಸಿಗೆ ಬಿಟ್ಟು ಏಳಬೇಕಿತ್ತು. ಕಾರಣ ನಾವಿಂದು ಪ್ರವಾಸ ಹೋಗುವ ದಿನ ಎಂದರಿತು…ತುಸು ಸಡಗರದೇ ಎದ್ದೆ. ಬೆಚ್ಚಗೆ ಮಲಗಿದ್ದ ಮಗಳು..”ಇನ್ನೂ ಸ್ವಲ್ಪ...
ಮಾಸದೇ ನೆನಪು ಕರಗದೇ ಕಾರ್ಮೋಡಬೀಳದೇ ಬಿಂದು ನಿನ್ನದೊಂದೊಂದು . ತೂಗುತ್ತಿಲ್ಲ ಉಯ್ಯಾಲೆ ಅಂಬರದ ಮ್ಯಾಲೆಬುತ್ತಿಕಟ್ಟು ಕನಸುಗಳ ಕಟ್ಟಲಾಗದ ಮ್ಯಾಲೆಹಾದಿಬೀದಿಯಲ್ಲಿ ಬಾವಿಗಳಿಲ್ಲದ ಮ್ಯಾಲೆ ಬಿಂದಿಗೆ ಹೊತ್ತಿರುವವಳು ಬಿಂಕದೆಣ್ಣೆಂದ ಮ್ಯಾಲೆಬೀಳುವ ಬಿಂದು ನಿನ್ನದೊಂದೊಂದು . ಕೆರೆ ತುಂಬಿ ಬಿಂಬ ನೋಡುವಾಗ ಬಿಂದು ಬಿದ್ದುಚದುರಿಹೋಯಿತು ಛಾಯೆ ಈ ಮಾಯೆ .ಅಳುವಾಗ ಬಿಂದು ಅದರೊಳಗೆ...
ಅಕ್ಕ ,ನೀನಿಂದಿಗೂ ಅರಿತವರ ಆದರ್ಶನಡೆನುಡಿ ಸಮೃದ್ಧ ಪಾರದರ್ಶ ! ಗಂಡು ಗುಡುಗಿದ ಕಾಲದಲೂಆಗಸದ ಮೋಡ ಹೊದ್ದ ನಿನ್ನ ಕಂಗಳಲಿ ಸುರಿದ ಭಾರೀ ಮಳೆನಿಟ್ಟುಸಿರ ನೀರ ಹೆಂಗಳೆಯ ಇಳೆ ! ಕೌಶಿಕನ ಹೊದ್ದೂ ಕೊನೆಗೊದ್ದುಎದ್ದು ನಡೆದ ನಿನ್ನ ನಿರ್ಭೀತ ನಡಿಗೆಬರೆದ ಒಂದೊಂದರಲೂ ಬಿಂಬಿಸಿದತನುಮನ ಕನಸುಗಳ ಶಿವನೊಸಗೆ ಚನ್ನಮಲ್ಲನನರಸಿದ ಕೇಶಾಂಬರೆಅಲ್ಲಮನ ಪ್ರಶ್ನೆಗುತ್ತರಿಸಿದ...
ಲೇಖಕರ ಪರಿಚಯ: ತೇಜಸ್ ಎಚ್ ಬಾಡಾಲಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಬಹುಮುಖ ಪ್ರತಿಭೆಯ ಈತನಿಗೆ ಹಲವು ರೀತಿಯ ಹವ್ಯಾಸಗಳಿವೆ. ಸಾಹಿತ್ಯ, ಕವಿತ್ವ, ಜೊತೆಗೊಂದಿಷ್ಟು ಸಂಗೀತ. ಈತ ತಾನೇ ರಚಿಸಿದ ಕವನಗಳಿಗೆ ರಾಗಹಾಕಿ ಹಾಡುತ್ತಾನೆ. ಗದುಗಿನ ಅಶ್ವಿನಿ ಪ್ರಕಾಶನದವರು ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಫರ್ಧೆಯಲ್ಲಿ ಈತನಿಗೆ...
ಒಂದು ಗೌಳಿಗರ ಮನೆ. ಸಾಕಷ್ಟು ಹಸುಗಳನ್ನು ಸಾಕಿದ್ದರು. ಹೆಚ್ಚು ಪ್ರಮಾಣದಲ್ಲಿ ಹಾಲನ್ನು ಉತ್ಪಾದಿಸುತ್ತಿದ್ದರು. ಹಾಲು, ಮೊಸರು, ಬೆಣ್ಣೆ, ತುಪ್ಪ ಮುಂತಾದ ರೀತಿಯಲ್ಲಿ ಹಾಲಿನ ಪದಾರ್ಥಗಳನ್ನು ಗ್ರಾಹಕರಿಗೆ ಮಾರಿ ಸಂಪಾದನೆ ಮಾಡುವುದು ಅವರ ಕಸುಬಾಗಿತ್ತು.ಒಂದು ದಿನ ಹೆಚ್ಚು ಪ್ರಮಾಣದ ಹಾಲನ್ನು ಹದವಾಗಿ ಕಾಯಿಸಿ ಆರಿಸಿ ದೊಡ್ಡ ಬಾಯಿಯ ಪಾತ್ರೆಯೊಂದರಲ್ಲಿ...
ಕನ್ನಡ ನಾಡಿನ ಭಾಗೀರಥಿ ಹೊಸ ವರ್ಷದ ಸಂಭ್ರಮಾಚರಣೆ ಯುಗಾದಿ ಹಬ್ಬದಂದು ಮುಗಿದಿತ್ತು, ಆದರೆ ಚಂದ್ರ ದರ್ಶನ ಇನ್ನೂ ಆಗಿರಲಿಲ್ಲ. ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ನನ್ನ ಯಜಮಾನರಿಗೆ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಅವುಗಳ ಮೇಲೆ ತೇಲುವ ಮೋಡಗಳನ್ನು ನೋಡುವುದೇ ನಿಜವಾದ ಹಬ್ಬ ಎನ್ನುವ ಭಾವ. ಮಲೆನಾಡಿನ...
ನಿಮ್ಮ ಅನಿಸಿಕೆಗಳು…