Monthly Archive: August 2019
ಸಭೆ , ಸಮಾರಂಭ, ಪಾರ್ಟಿ, ಎಲ್ಲೇ ಹೋದರೂ ಮದುವೆಯಾದ ಹೆಣ್ಣು ಮಕ್ಕಳನ್ನು ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ “… ಹೌಸ್ ವೈಫಾ….?”, “ಏನಾದರೂ ಕೆಲಸದಲ್ಲಿ ಇದ್ದೀರಾ…?”, “ಹೊರಗಡೆ ಕೆಲಸಕ್ಕೆ ಹೋಗ್ತೀರಾ…?” ‘ಗೃಹಿಣಿ’ ಎಂಬ ಪದ ಕೇಳಿದೊಡನೆ, ಅದೆಲ್ಲೋ ಒಂದಷ್ಟು ತಾತ್ಸಾರದ ಭಾವವು ಮಾತು, ಭಾವಗಳಲ್ಲಿ ಇಣುಕುತ್ತವೆ....
ನಂದನ್ ಕಾನನ್, ವಿಶಾಲವಾದ ಪ್ರಾಕೃತಿಕ ಪ್ರಾಣಿ ಸಂಗ್ರಹಾಲಯವಾಗಿದ್ದು ನಾವು ವೀಕ್ಷಿಸಬೇಕಾಗಿದ್ದ ಸ್ಥಳಗಳಲ್ಲೊಂದು. ಆದರೆ, “ಚಂಡಮಾರುತದ ಹೊಡೆತಕ್ಕೆ ಅಲ್ಲಿಯ ಮರ ಗಿಡಗಳೆಲ್ಲಾ ನಾಶವಾಗಿದ್ದು, ಪ್ರಾಣಿಗಳಿಗೂ ತುಂಬಾ ತೊಂದರೆಯಾಗಿರಬಹುದು. ಅಲ್ಲಿ ನೋಡಲು ಏನೂ ಇಲ್ಲ” ಎಂದು ಬಾಲಣ್ಣನವರು ಹೇಳಿದಾಗ ಎಲ್ಲರಿಗೂ ಮತ್ತೊಮ್ಮೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದಂತೂ ನಿಜ. ನಾವು ವೀಕ್ಷಿಸುತ್ತಿದ್ದ...
. ನಿನ್ನೊಳಗಿನ ಕವಿತೆಯ ಮಾತು ಹೃದಯ ಸೇರಿತು ಹಾಡಾಗಿ ನಲ್ಮೆಯ ಮಾತಾಯಿತು ಪಾಡಾಗಿ ಹದವರಿತ ನಿನ್ನ ರಾಗ ಲಯದ ಕವಿತೆ ಮೀಟಿತು ಹೃದಯ ವೀಣೆಯ.॥೧॥ . ಎಷ್ಟೊಂದು ನೆನಪುಗಳ ಹೆಕ್ಕಿದೆ ನೀನ್ನೀ ಹೃದಯದ ಗೂಡು ಅದರೊಳಡಗಿದ ಕವಿತೆಯ ಮಾಡು ನನ್ನೆದೆಯ ಗೂಡು ತುಂಬಿ ತುಳುಕುತಿದೆ ನೋಡು ॥೨॥...
ಮೊನ್ನೆ ಟಿ ವಿ ಕಾರ್ಯಕ್ರಮವೊಂದರಲ್ಲಿ ‘ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಅದು ಹೆಚ್ಚಾಗಿ ಮಡದಿ ಅಥವಾ ತಾಯಿ’ ಎಂಬ ವಿಷಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿತ್ತು.ಅದರಲ್ಲಿ ಈ ವಿಷಯದ ಬಗ್ಗೆ ವಿರೋಧಿ ಗುಂಪಿನಲ್ಲಿದ್ದವರು ಮಾತನಾಡುತ್ತಾ ಇದೆಲ್ಲಾ ಸುಳ್ಳು ಎಂದು ವಾದಿಸಿ ಪ್ರತಿಯೊಬ್ಬ ಯಶಸ್ವಿ...
ಕತ್ತಲಾವರಿಸಿ ಪರಿಸರವು ನಿಶ್ಶಬ್ದವಾಗುತ್ತಿದ್ದಂತೆಯೇ ಆ ದಿನದ ಜಂಜಾಟಗಳನ್ನೆಲ್ಲ ಮರೆತು ಮೈ-ಮನಸ್ಸುಗಳನ್ನು ಹಗುರವಾಗಿಸಲು ಎಲ್ಲರೂ ಬಯಸುವುದು ಒಂದು ಸುಖವಾದ ನಿದ್ದೆ. ಇನ್ನು ಕೆಲವರಿಗೆ ರಾತ್ರಿಯಾಗುತ್ತಿದ್ದಂತೆಯೇ ನಿದ್ದೆ ಬರದಿದ್ದರೆ ಎಂಬ ಚಿಂತೆ.ಇಡೀ ಜಗತ್ತು ಶಾಂತವಾಗಿ ಮಲಗಿ ನಿದ್ರಿಸುತ್ತಿರುವಾಗ ಒಂಟಿಯಾಗಿ ನಿದ್ದೆ ಇಲ್ಲದೆ ಚಡಪಡಿಸುವುದೆಂದರೆ ಅದು ಅತ್ಯಂತ ಅಸಹನೀಯ. ಉತ್ತಮ ಆಹಾರ,...
ಧಾವಂತ ಧಾವಿಸುವ ಕಾಲುಗಳ ಕಾಲಡಿಗೆ ಎಷ್ಟೊಂದು ದಾರಿಗಳು…. ಅನಿಯಮಿತ ನಡೆದಾಡುವ ಹಾದಿಯ ತುಂಬ ಅದೆಷ್ಟು ಗುರಿಗಳು…… ದಮ್ಮು ಕಟ್ಟುತ್ತ ಕೆಮ್ಮುವ ಅಪ್ಪನ ದವಖಾನೆಗೆ ಸೇರಿಸುವ ಆತುರ ಮಗಳಿಗಾದರೆ, ಚಿಂದಿ ಆಯ್ದ ಹುಡುಗ ಹೊರಲಾರದೆ ಹೊತ್ತು ದಾಪುಗಾಲಲ್ಲಿ ಬರುವುದರ ಕಾಯುವ ಅಮ್ಮ ಭಿಕ್ಷೆ ಬೇಡುವ ಅಜ್ಜಿಯ ಇಂಗಿದ ಕಣ್ಣುಗಳ...
ಹೋಟೆಲಿಗೆ ಹೋಗುವ ದಾರಿಯಲ್ಲೇ ಗಣೇಶಣ್ಣ ಉವಾಚ, ” ಮೂರುವರೆಗೆ ಸಿಂಪಲ್ ಊಟ ರೆಡಿ. ಫ್ರೆಷಪ್ ಆಗಿ ಬನ್ನಿ”. ಡಬಲ್ ಬೆಡ್ ಡಿಲಕ್ಸ್ ರೂಮು ತುಂಬಾ ಚೆನ್ನಾಗಿತ್ತು. ಆ ಎಲ್ಲಾ ಇಲ್ಲಗಳ ಮಧ್ಯೆಯೇ ನಮಗೆಲ್ಲಾ ಏನೂ ಕೊರತೆಯಾಗದಂತೆ ನಿರಂತರ ವಿದ್ಯುತ್ , ನೀರು ಒದಗಿಸಿ ಅನುಕೂಲ ಮಾಡಿಕೊಟ್ಟ ಹೋಟೆಲ್...
ಆಷಾಢ ವಾರ ಇರುವಾಗ ಮುದ್ದಿನ ಹೆಂಡತಿಯ ತವರು ಮನೆಯಿಂದ ‘ಅಳಿಯಂದಿರೇ ಮೊದಲ ಆಷಾಢ, ಮಗಳನ್ನು ತಿಂಗಳ ಮಟ್ಟಿಗೆ ಕಳುಹಿಸಿಕೊಡಿ, ಅತ್ತೆ-ಸೊಸೆ ಒಂದೇ ಹೊಸ್ತಿಲಿನೊಳಗೆ ಓಡಾಡಬಾರದು, ನಿಮ್ಮ ಅಪ್ಪ-ಅಮ್ಮನಿಗೆ ಹೇಳಿದ್ದೇವೆ, ಒಪ್ಪಿದ್ದಾರೆ, ಮುಂದಿನವಾರ ಮಗನನ್ನು ಕಳುಹಿಸುತ್ತಿದ್ದೇವೆ, ನೀವೂ ನಮ್ಮ ಜೊತೆ ಬಂದು ನಾಲ್ಕು ದಿನ ಇದ್ದು ಹೋಗುವಿರಂತೆ’ ಎಂದು...
ಜೀವನದಲ್ಲಿ ನಡೆಯುವ, ನೋಡುವ ಕೆಲವೊಂದು ವಿಷಯಗಳು ನಮ್ಮ ಊಹೆಗೂ ನಿಲುಕುವುದಿಲ್ಲ. ಆ ವಿಷಯಗಳು ಯಾಕಾಗಿ ಆಗುತ್ತವೆ ಅನ್ನುವುದಕ್ಕೆ ಸ್ಪಷ್ಟ ಕಾರಣಗಳನ್ನು ಕೂಡಾ ಕೊಡಲಾಗುವುದಿಲ್ಲ. ಕೆಲವೊಮ್ಮೆ ಮುಂದೆ ಘಟಿಸಲಿರುವ ವಿದ್ಯಮಾನಗಳನ್ನು ಮನಸ್ಸು ಮೊದಲೇ ಗ್ರಹಿಸುವುದು (Intuition) ಮತ್ತು ಆ ಘಟನೆಗಳು ನಡೆದೇ ಬಿಡುವುದು. ಯಾಕೆ ಹೀಗೆ ಎಂದು ಆಲೋಚಿಸಿದರೆ...
ಕಲ್ಲಾಗಿ ನಿಂತಿರುವ ಕರಿಯ ಆನೆ ನಿಜ ಆನೆ ಕಂಡರೆ ಹೆದರುವೆನು ನಾನೆ ದೇವಾಲಯದೊಳು ಕೈಮುಗಿದು ದೇವಗೆ ಬೇಗನೆ ಬರುವೆನಾ ನಿನ್ನ ಬಳಿಗೆ|| , ನಾನಿನ್ನು ತೆರಳುವೆ ಖುಷಿಯಿಂದ ಶಾಲೆಗೆ ನಿನಗಿಲ್ಲಿಯೇ ನಿಲುವ ಶಿಕ್ಷೆ ಏಕೆ..? ಆಟ ಪಾಠದಲಿ ನನ್ನ ಜಯಭೇರಿಗೆ ನೀನೂ ಸಲಿಸುವೆಯಾ ದೇವನಿಗೆ ಕೋರಿಕೆ..? ,...
ನಿಮ್ಮ ಅನಿಸಿಕೆಗಳು…