Daily Archive: June 27, 2019
ನಿನ್ನೊಲುಮೆಯೆಂದರೆ, ಒಂದು ಚಹಾ ಕುಡಿದ ಹಾಗೆ.. ಗುಟುಕರಿಸಿ ನಾಲಗೆ ಮೇಲುಳಿದ ಸಕ್ಕರೆಯ ಸಿಹಿ, ಬಾಯ್ತುಂಬಿ ಅಡರುವ ಏಲಕ್ಕಿಯ ಘಮ ಘಮ.. ನಿನ್ನೊಲುಮೆ ಎಂದರೆ, ನಡುಗುವ ಚಳಿಗೆ ಅಂಗೈ ನಡುವೆ ಚಹಾದ ಬಟ್ಟಲು ಹಿಡಿದಾಗ ತಾಕುವ ಬಿಸಿಯ ಬಿಸುಪದು ವಿರಹದಲಿ ಕಾಡುವ ನೆನಪಿನ ಧಗೆ… ನಿನ್ನೊಲುಮೆ ಎಂದರೆ, ಉರಿಬೆಂಕಿಯ...
ಕಣ್ಣು ಮಂಜಾಗುತ್ತಿವೆ. ಮನದ ವೇದನೆಯು ಕಣ್ಣೀರ ಧಾರೆಯಾಗಿ ಸುರಿಯುತ್ತಿದೆ. ನಮ್ಮದೇ ಮನೆಯ ನೋವು ಎಂಬಂತೆ ಭಾಸವಾಗುತ್ತದೆ. ಪ್ರತಿಕ್ಷಣವೂ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆದು ಮನದ ಪ್ರಶಾಂತತೆಯನ್ನು ಹಾಳುಮಾಡುತ್ತಿವೆ. ಅಂದು ಅಲ್ಲೆಲ್ಲೋ, ನಿನ್ನೆ ಮತ್ತೆಲ್ಲೋ, ಇಂದು ನಮ್ಮಲ್ಲಿ , ನಾಳೆ ಮತ್ತಿನ್ನೆಲ್ಲೋ, ಒಟ್ಟಿನಲ್ಲಿ ಈ ಘಟನೆಗಳು ಸುದ್ದಿಯಾಗುತ್ತಿವೆ. ಅದು...
ಅರಸಲೇ ಬೇಕು… ಬೆಳಕನ್ನು ಕತ್ತಲಲ್ಲಿ, ನಿಜವನ್ನು ಸುಳ್ಳಿನ ಸಿಪ್ಪೆ ಸುಲಿಯುವುದರಲ್ಲಿ, ಸತ್ಯವನ್ನು ಮಿಥ್ಯೆಗಳ ಶೋಧನೆಯಲ್ಲಿ! . ಏಕೆಂದರೆ… ಕೋಟಿ ಸೂರ್ಯರನ್ನು ಕತ್ತಲಿಲ್ಲದಿದ್ದರೆ ನಿಮಗೆ ಅಸ್ಮಿತೆ, ಉಂಟೇ ಎಂದು ಕೇಳಿದರೆ “ಉಂಟು” ಎಂದು ಹೇಳುವುದೇ ಇಲ್ಲ! . ನಿಜದ ಮಾತೆಂದರೆ, ನನ್ನನ್ನು ಪ್ರೀತಿಸುವೆಯಾ? ಎಂಬ ಪ್ರಶ್ನೆಗೆ “ಇಲ್ಲ” ಎಂಬ...
ಅಮೇರಿಕಾದ ನ್ಯೂಯಾರ್ಕ್ ನ ಬಫೆಲೋ ಪಟ್ಟಣದಲ್ಲಿದೆ ಜಗತ್ತಿನ ಪ್ರಾಕೃತಿಕ ಅದ್ಭುತಗಳಲ್ಲೊಂದಾದ ನಯಾಗರ ಜಲಪಾತ. ನಾನು ಮೊತ್ತ ಮೊದಲಾಗಿ ನಮ್ಮ ಜೋಗದ ಜಲಪಾತವನ್ನು ನೋಡಿದಾಗ ಅದೆಷ್ಟು ಸಂಭ್ರಮಪಟ್ಟಿದ್ದೆ… ಪರಮಾಶ್ಚರ್ಯದಿಂದ ಮೂಕ ವಿಸ್ಮಿತಳಾಗಿದ್ದೆ! ಆದರೆ ಆಗ ನಯಾಗರದ ರಮಣೀಯ ದೃಶ್ಯವನ್ನು ಸವಿಯುವ...
ಬರೆಯುವ ಮೊದಲು ಕವಿತೆ ಮನಸುಖರಾಯ ಮಗು ಮಿಸುಕುತ್ತ ಒದೆಯುತ್ತ ಒಡಲ ಜಗ್ಗಿಸಿ ಹಿತನೋವು ತರುತ್ತ ಹೊತ್ತವಳಿಗೆ ಅಷ್ಟಷ್ಟೇ ಕಣಗಳು ಕೂಡಿ ಕೂಡುತ್ತ ತುಂಬುತ್ತ ಭಾರ ವಾಗುತ್ತ ಮೋಡ ಮಿಂಚು ಕಣ- ಕ್ಷಣಗಳಿಗೆ ಕಾದು ತಪಿಸುತ್ತ ಕಾತರಿಸುತ್ತ ತೆಕ್ಕಾಮುಕ್ಕಿಗೆ ಮಿಲನ ಫಲಿಸಿ ಮಳೆಯಾಗಿ ಸುರಿವ ಹದಕ್ಕೆ ಬರೆದ...
ಕಳೆದ ಎಪ್ರಿಲ್ ತಿಂಗಳಲ್ಲಿ ತವರುಮನೆಗೆ ಹೋಗಿದ್ದೆ. ಅಮ್ಮನ ತಲೆಯಲ್ಲಿ ರೆಂಜೆ ಹೂವಿನ ಮಾಲೆ ಕಂಡಾಗ ಬಾಲ್ಯದ ನೆನಪುಗಳ ಸರಮಾಲೆ ಕಣ್ಣೆದುರು ಬರಲಾರಂಭಿಸಿತು. “ನಂಗಿಲ್ವಾ ರೆಂಜೆ ಮಾಲೆ?” ಕೇಳಿಯೇ ಬಿಟ್ಟೆ ಅಮ್ಮನತ್ರ. “ನಂಗೊತ್ತಿತ್ತು ನೀನು ಕೇಳ್ತೀಯಾ ಅಂತ. ನೀನು ಬರುತ್ತಿ ಅಂತ ಗೊತ್ತಾದ ಕೂಡಲೇ ಪುನಃ ಹೋಗಿ...
ನಿಮ್ಮ ಅನಿಸಿಕೆಗಳು…