ಒಂದಿಲ್ಲದೆ ಮತ್ತೊಂದೆ?

Share Button

ಅರಸಲೇ ಬೇಕು…
ಬೆಳಕನ್ನು ಕತ್ತಲಲ್ಲಿ,
ನಿಜವನ್ನು ಸುಳ್ಳಿನ
ಸಿಪ್ಪೆ
ಸುಲಿಯುವುದರಲ್ಲಿ,
ಸತ್ಯವನ್ನು ಮಿಥ್ಯೆಗಳ
ಶೋಧನೆಯಲ್ಲಿ!
.
ಏಕೆಂದರೆ…
ಕೋಟಿ ಸೂರ್ಯರನ್ನು
ಕತ್ತಲಿಲ್ಲದಿದ್ದರೆ
ನಿಮಗೆ ಅಸ್ಮಿತೆ, ಉಂಟೇ
ಎಂದು ಕೇಳಿದರೆ
“ಉಂಟು” ಎಂದು
ಹೇಳುವುದೇ ಇಲ್ಲ!
.
ನಿಜದ ಮಾತೆಂದರೆ,
ನನ್ನನ್ನು ಪ್ರೀತಿಸುವೆಯಾ?
ಎಂಬ ಪ್ರಶ್ನೆಗೆ
“ಇಲ್ಲ” ಎಂಬ ಉತ್ತರ
ಬರುವುದೇ ಇಲ್ಲ!
.
ಅಬ್ಬಾ!  ಆ ಮಿಥ್ಯೆಗೆ ಮರಳುಗೊಳಿಸುವ ಚಾಕಚಕ್ಯತೆ!
ನೀನು ಭ್ರಮೆಯೇ?
ಎಂದಾಗ,
“ಉತ್ತರ” ಸಿಗುವುದೇ ಇಲ್ಲ!
.
ಈ ಜಗದಲ್ಲಿ,
ಬೆಳಕು, ನಿಜ, ಸತ್ಯ
ಸುಲಭಕ್ಕೆ ಕೈಗೆಟುವುದಿಲ್ಲ!
.

-ಕೆ.ಆರ್.ಎಸ್.ಮೂರ್ತಿ

4 Responses

  1. ನಯನ ಬಜಕೂಡ್ಲು says:

    ” ಸತ್ಯಕ್ಕೆ ಎತ್ತಲೂ ಭಯವಿಲ್ಲ,
    ಸಾಧಿಸಿ ಗೆಲ್ಲಲಾಗದು ಎಂದಿಗೂ ಸುಳ್ಳ ,
    ಮರೆಯದೆ ಸಾಗಲು ಈ ಸೊಲ್ಲ,
    ಯಾವತ್ತೂ ಸೋಲೇ ಇಲ್ಲ “.

    Well said sir

  2. Anonymous says:

    ನಯನ ಅವರೆ,
    ಸ್ಪಂದನೆಗೆ ಧನ್ಯವಾದಗಳು.

  3. ಮೂರ್ತಿ says:

    ನಯನ ಅವರೆ,
    ಸ್ಪಂದನೆಗೆ ಧನ್ಯವಾದಗಳು.

  4. Shankari Sharma says:

    ಚೆನ್ನಾಗಿದೆ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: