Monthly Archive: May 2019
ಸಿದ್ದಮ್ಮ ಒಂದು ದೊಣ್ಣೆಗೆ ಮಚ್ಚು ಸಿಕ್ಕಿಸಿ ನಮ್ಮ ಮನೆ ಅಂಗಳದ ಹಿಂದೆ ಮುಂದೆ ದಂಡಿಯಾಗಿ ಬೆಳೆದಿದ್ದ ಹುಲ್ಲು ಸವರುತ್ತಿದ್ದಳು. ಅದನ್ನು ನೋಡಿ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ. ಯಾವುದೇ ಕೆಲಸವನ್ನಾದರೂ ಅಷ್ಟೆ ಹೇಳದಿದ್ದರೆ ಒಂದು ಹುಲ್ಲುಕಡ್ಡಿಯನ್ನೂ ಅತ್ತ ಸರಿಸದ ಸಿದ್ದಮ್ಮ ಇವತ್ತೇಕೆ ಇದ್ದಕ್ಕಿದ್ದಂತೆ ಈ ಕಾರ್ಯಕ್ಕೆ ಕೈ ಹಾಕಿದಳು?...
ಅದೊಂದು ಸಂಜೆ ಮನೆಯ ಅಂಗಳದಲ್ಲಿ ಹೂಗಿಡಗಳನ್ನು ನೋಡುತ್ತಾ ನಿಂತಿದ್ದೆ. ಪಾತರಗಿತ್ತಿಯೊಂದು ಗುಲಾಬಿಯ ಎಳೆ ಮೊಗ್ಗಿನ ಮೇಲೆ ಕುಳಿತು ತದೇಕಚಿತ್ತದಿಂದ ಮಕರಂದ ಹೀರುತ್ತಿತ್ತು. ಸುಮಾರು 20 ನಿಮಿಷಗಳು ಕಳೆದರೂ ಅದೇ ಧ್ಯಾನಮಗ್ನ ಸ್ಠಿತಿ. ಮನಸನ್ನು ಅತಿಯಾಗಿ ಕಾಡಿದ ಆ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದೆ. ಇನ್ನೂ ಎಷ್ಟು...
‘ಈ ಶತಮಾನದ ಮಾದರಿ ಹೆಣ್ಣೆಂದು’ ಎಷ್ಟೇ ತುತ್ತೂರಿ ಊದಿಕೊಂಡರೂ ಅನಾದಿ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಯಲ್ಲೇ ಪ್ರಸ್ತುತಕ್ಕೆ ತನ್ನನ್ನು ಸಮರ್ಥವಾಗಿ ಸಾಬೀತುಪಡಿಸಿಕೊಳ್ಳುವ ತುರ್ತು ಇಂದಿನ ಹೆಣ್ಣಿಗಿದೆ.ಅದರಲ್ಲಿಯೂ ವೃತ್ತಿ ಪ್ರವೃತ್ತಿಗಳೊಂದಿಗೆ ತಾಯ್ತನದ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವ ಎಳೆಯ ಅಥವಾ ಮಧ್ಯವಯಸ್ಸಿನ ಅಮ್ಮನಿಗಿರುವ ಸವಾಲು ನೂರಾರಿವೆ. ಈಗಿನ ಅಮ್ಮ ಒಂದೆರಡು ತಲೆಮಾರಿನ...
ಆಚಾರ್ಯ ಶಂಕರರೇ. ವಂದಿಪೆ ನಿಮಗೆ ಗುರುವರರೇ … ಆರ್ಯಾಂಬಾ-ಶಿವಗುರುವಿನ ಮಗನಾಗಿ ಜನಿಸಿ, ಆದಿಶಕ್ತಿಯ ಆಶೀರ್ವಾದ ಗಳಿಸಿದಿರಿ. ಹಿಂದೂ ವೇದಾಂತ ಮತವನು ಪುನರುತ್ಥಾನಗೊಳಿಸಿ ಅಧ್ಯಾತ್ಮ ಚಿಂತನೆ ಹರಿಸಿದಿರಿ.. ಆಚಾರ್ಯ ಶಂಕರರೇ ವಂದಿಪೆ ನಿಮಗೆ ಗುರುವರರೇ..1 ಅಲ್ಪ ಸಮಯದಲಿ ಅಗಾಧ ಪಾಂಡಿತ್ಯ ಗಳಿಸಿ ಅಖಂಡ ಭಾರತಯಾತ್ರೆಗೈದಿರಿ. ಶೃಂಗೇರಿ,ಬದರಿ,ಪುರಿ.ದ್ವಾರಕಾ ದಲ್ಲಿ ಪೀಠಗಳನ್ನು...
ಎಲ್ಲರ ಬಳಿಯೂ ಎಲ್ಲರೊಳಗೂ ಇರಬಹುದು ಒಂದೊಂದು ಖಾಲಿ ಜಾಗ. ಹಿತ್ತಲಿನಲ್ಲಿಯೋ? ಮುಂದಣ ಅಂಗಳದಲ್ಲಿಯೋ? ಒಳಕೋಣೆಯೊಳಗೋ? ಅಥವಾ ಯಾವುದೋ ಅದೃಶ್ಯ ಎಡೆಯಲ್ಲಿ ತೀರಾ ಖಾಸಾಗಿಯಾಗಿ. ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ ಕುರಿತು ಯೋಚಿಸಿಯೇ ಇರುತ್ತಾರೆ. ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ? ಭತ್ತ ಬೆಳೆಯುವುದಾ? ತುಸು ಹೆಚ್ಚೇ ಇದ್ದರೆ...
“ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ...
ಅದು 19 ನೆಯ ಶತಮಾನದ ಕಾಲ, ಒಂದರ ಹಿಂದೆ ಒಂದರಂತೆ ಯುದ್ಧಗಳು ತಾಂಡವವಾಡುತ್ತಿದ್ದ ಕಾಲ. ಆಗ ಜನರು ಗಾಯಗೊಂಡಾಗ, ಸಾವನ್ನಪ್ಪುವ ಸಮಯದಲ್ಲಿ, ಸುಷ್ರೂಶೆ ನಡೆಸಲು ಸಾದ್ಯವಾಗದಂತಹ ಕಠಿಣ ಸಮಯದಲ್ಲಿ ಜನರ ಆರೋಗ್ಯಕ್ಕಾಗಿ ನಿರ್ಮಿತವಾದಂತಹ ಸಂಸ್ಥೆಯೆಂದರೆ ಅದು ರೆಡ್ ಕ್ರಾಸ್. ರೆಡ್ ಕ್ರಾಸ್ ಸಂಸ್ಥೆಯು ರಾಜಕೀಯ, ಧಾರ್ಮಿಕ ನಂಬಿಕೆಗಳು ,ರಾಷ್ಟ್ರೀಯತೆ ,ವರ್ಗ ಮುಂತಾದುವುಗಳ...
ಏಪ್ರಿಲ್ , ಮೇ ತಿಂಗಳು ಬೇಸಿಗೆ ರಜೆ ಎಂದೊಡನೆ ನೆನಪಾಗುವುದು ಎಲ್ಲಾ ಮಕ್ಕಳಿಗೂ ಅಜ್ಜಿ ಮನೆ . ಬೇರೆಲ್ಲೂ ಹೋಗ ಬಯಸುವುದಿಲ್ಲ ಪುಟ್ಟ ಜೀವಗಳು. ಆದರೆ ಅಜ್ಜಿಮನೆ ಎಂದರೆ ಪಂಚಪ್ರಾಣ ಅವರಿಗೆ.ಆ ಅಜ್ಜಿಮನೆಯಲ್ಲಿ ಸಿಗುವ ಖುಷಿ, ಸಂತೋಷ, ನೆಮ್ಮದಿ , ಪ್ರೀತಿ , ಸುಂದರ ನೆನಪುಗಳು ಬೇರೆಲ್ಲೂ,...
ಹೇ ದೇವಾ… ಹತ್ತವತಾರಗಳಲಿ ಮತ್ತೊಮ್ಮೆಯೂ ಹೆಣ್ಣಾಗದ ನಿನಗೆ ಬೇಕು – ಹೊಸದೊಂದವತಾರ ; ಹೆಣ್ಣ ಅರಿಯಲು. ನಿನ್ನ ನಾಟಕ ಶಾಲೆಗೆ ನೀನೇ ಸೂತ್ರ, ನಿನ್ನದೇ ಮುಖ್ಯ ಪಾತ್ರ. ಉಳಿದ ಖಾಲಿಯ ತುಂಬಲು ತಂದ ಹಾಗಿದೆ ಇತರೆ ಸ್ತ್ರೀ ಪಾತ್ರ.. ಒಂದೊಂದು ಗುಣಗಳಿಗೆ ಬೇಕಾಯ್ತು ಒಬ್ಬೊಬ್ಬ ದೇವ ! ಸೃಷ್ಟಿಗೊಬ್ಬ ಸ್ಥಿತಿಗೊಬ್ಬ ಲಯಕ್ಕೊಬ್ಬ.., ಅಬ್ಬಬ್ಬಾ..!! ಹೆಣ್ಣಿಗೆ ಬೇಕಿಲ್ಲ...
ಚಂದ್ರು ಆರ್ ಪಾಟೀಲರ “ಬಡ್ತಿ” ಕಥಾ ಸಂಕಲನ ಓದಿಯಾಯ್ತು. ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಹನ್ನೆರಡು ಕತೆಗಳು ಈ ಸಂಕಲನದಲ್ಲಿವೆ. ಮೂಢನಂಬಿಕೆಯ ಕಾರಣಕ್ಕಾಗಿ ನಡೆಯಲಿರುವ ತನ್ನ ಬಲಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗೀತಾ ಎಂಬ ಹುಡುಗಿಯ ಕತೆ ಹೇಳುವ “ನೆಲವೆ ಹಸಿದು ನಿಂತೊಡೆ” ಎಂಬ ಕತೆಯ ಕ್ಲೈಮ್ಯಾಕ್ಸ್ ತನಕವೂ ಅವಳ...
ನಿಮ್ಮ ಅನಿಸಿಕೆಗಳು…