Daily Archive: September 20, 2018
ಮೊನ್ನೆ ಸಭೆಯೊಂದರಲ್ಲಿ ಮುಖ್ಯ ಭಾಷಣಕಾರರೊಬ್ಬರು ಮಾತಾಡುತ್ತಾ “ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ ಕೊಡುವುದಕ್ಕೆ ಸಂಸ್ಕಾರ ಬೇಕು” ಎಂದಿದ್ದರು. ಪ್ರೋತ್ಸಾಹಿಸಿದರೆ ಎಲ್ಲಿ ಏನನ್ನು ಕಳಕೊಳ್ಳುತ್ತೇವೋ ಎಂಬಂತೆ ಅದೇ ಅವರ ಸಹಜರೀತಿಯಾಗಿ ಬದುಕುವವರನ್ನು ನೋಡಿದರಂತೂ ಆ ಮಾತಿನಲ್ಲಿನ ಆಳವಾದ ಅರ್ಥವು ಹಲವು ಮಜಲುಗಳನ್ನು ಪಡೆದು ದಿಟವೆನಿಸುತ್ತದೆ. ಎಷ್ಟೋ ಬಾರಿ ಕೆಲ ವ್ಯಕ್ತಿಗಳನ್ನು...
ನಮ್ಮಿಬ್ಬರ ನೆಲವೊಂದೆ ನಮಗೆರೆವ ಜಲವೊಂದೆ ನಾವಾಡುವ ಉಸಿರೊಂದೆ,, ನಮ್ಮಿಬ್ಬರ ಆಟವೊಂದೆ ನಮ್ಮಿಬ್ಬರ ನೋಟವೊಂದೆ ಎದುರಾದ ಪರಿಸ್ಥಿತಿಯೊಂದೆ,, ನಾನೂ ತಬ್ಬಲಿ, ನೀವೂ ತಬ್ಬಲಿ, ನಮಗಾರು ಆಸರೆ ನಾ ನಿಮಗೆ, ನೀವು ನನಗೆ, ಬನ್ನಿ ನೆರಳ ಹುಡುಕೋಣ ಬನ್ನಿ ಗೂಡ ಕಟ್ಟೋಣ ಪಯಣದಿ ಜೊತೆ ಸಾಗೋಣ. -ಸುಮಿ +5
ನಮ್ಮ ಪಕ್ಕದೂರಿನ ರಾಮಣ್ಣನಿಗೆ ಅಲ್ಲೇ ಒಂದು ಪುಟ್ಟ ಅಂಗಡಿ. ಊರಿನಲ್ಲಿಯೇ ಬೆಳೆದ ತರಕಾರಿ, ಹಾಗೆಯೇ ಕೆಲವು ದೈನಂದಿನ ಅಗತ್ಯದ ಸಾಮಾನುಗಳು ಅಲ್ಲಿ ಲಭ್ಯವಿರುತ್ತಿದುದರಿಂದ ದಿನದ ವೈವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಅವನ ಅಂಗಡಿ ಇರುವುದು ಊರಿನ ಸ್ಮಶಾನದ ಸಮೀಪ. ಕಡಿಮೆ ಬಾಡಿಗೆಯ ಕಟ್ಟಡ ಮತ್ತೆಲ್ಲಿ ಸಿಗುತ್ತಿತ್ತು ಹೇಳಿ? ಮನೆಯಲ್ಲಿ...
ಹಿಂಗು ಎಂಬುದು ಅಡುಗೆ ಮನೆಯ ಅವಿಭಾಜ್ಯ ಸದಸ್ಯ. ಹಿಂಗಿನ ಒಗ್ಗರಣೆಯ ಪರಿಮಳ ಬಂತೆಂದರೆ ಅದು ಗೃಹಿಣಿಯಿಂದ ಅಡುಗೆಯ ಮುಕ್ತಾಯದ ಸೂಚನೆ. ಅಡುಗೆಯಲ್ಲಿ ಇದರ ಬಳಕೆಯ ಮುಖ್ಯ ಕಾರಣಗಳೆಂದರೆ ಇದರ ವಿಶಿಷ್ಟ ಪರಿಮಳ ಹಾಗೂ ಪಾಚಕ ಗುಣ. ಹಿಂಗು ಒಂದು ಸಸ್ಯ ಜನ್ಯ ಗೋಂದು.ಇದರ ಸಸ್ಯದ ವೈಜ್ಞಾನಿಕ ಹೆಸರು...
ನಿಮ್ಮ ಅನಿಸಿಕೆಗಳು…