ಹಾಗೆ ಸುಮ್ಮಗೆ
ಅವನ ಒಂದು ಕಣ್ಣ ಬೆಳಕು
ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು
ನೂರು ಭಾವ ಹೊಮ್ಮಿ ಫಲಿಸಿ
ಅವನ-ಅವಳ ನಡುವಲಿ
ಉದಿಸಿತೊಂದು ಪ್ರೇಮ ರಾಗ.
ಬಾನಿನೊಲವು ಕೆಳಗೆ ಸುರಿದು
ಇಳೆಯ ತುಂಬ ಜೀವ ಚೆಲುವು
ಭುವಿಯ -ಬಾನ ನಡುವಲಿ ಹಾಗೇ
ಸುಮ್ಮಗೊಂದು ಜೀವ ರಾಗ.
ಕ್ಷಣದ ಭಾವ ಪದಗಳಾಗಿ
ಮಾತು ಮರೆತು ಮೌನ ಮೆರೆದು
ನನ್ನ -ಪದದ ನಡುವಲಿ
ಮಿಡಿವುದೊಂದು ಕಾವ್ಯ ರಾಗ.
ಹೇಗೋ ಏನೋ ಎಲ್ಲೋ ಎತ್ತ
ಬೆಸೆದುಕೊಂಡ ಭಾವ ಬಂಧ
ಅದಕೂ-ಇದಕೂ ಇದಕೂ-ಅದಕೂ
ಲೇಪಿಸುತ್ತಿದೆ ಕಾವ್ಯ ಗಂಧ.
.
– ಸ್ಮಿತಾ ಅಮೃತರಾಜ್,ಕೊಡಗು
ಉತ್ತಮ ಕವನ.
Sundara..kaavya!
ಕವನ ಚೆನ್ನಾಗಿದೆ. ನೀವು ಕೊಟ್ಟ ಅರ್ಥಗಳು ಸುಂದವಾಗಿವೆ.