Author: Dr.Gayathri Devi Sajjan
ಪ್ರತಿವರ್ಷ ಬೇಸಿಗೆಯಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ನೆಲಸಿದ್ದ ಮಗನ ಮನೆಗೆ ಭೇಟಿ ನೀಡುವುದು ವಾಡಿಕೆ ಆಗಿ ಹೋಗಿತ್ತು. ಮೊಮ್ಮಕ್ಕಳ ಪ್ರೀತಿಯ ಕರೆಗೆ ಓಗೊಡದಿರಲು ಹೇಗೆ ತಾನೇ ಸಾಧ್ಯವಾದೀತು? ಕೊವಿಡ್ -19 ಮಹಾಶಯನ ಉಪಟಳದಿಂದ ಎರಡು ವರ್ಷ ಎಲ್ಲಿಗೂ ಹೋಗಲಾಗಿರಲಿಲ್ಲ. ಮೇ 2020 ರಲ್ಲಿ ಮಾಡಿಸಿದ್ದ ಟಿಕೆಟ್ ಅಗಸ್ಟ್ 2022 ರ...
ನೈಜೀರಿಯಾದ ಖ್ಯಾತ ಕವಿ -ಗೇಬ್ರಿಯಲ್ ಒಕಾರಾ ರಚಿಸಿರುವ – ‘ಒನ್ಸ್ ಅಪಾನ್ ಎ ಟೈಮ್’ (Once Upon A Time) ಕವನವನ್ನು ಕಾಲೇಜಿನಲ್ಲಿ ಬೋಧಿಸುತ್ತಿರುವಾಗ, ನನಗೆ ನನ್ನ ಬದುಕಿನ ನೆನಪುಗಳ ಸರಮಾಲೆಯೊಂದು ಕಣ್ಣ ಮುಂದೆ ತೇಲಿ ಬಂತು. ಮಾನವನು ನಿತ್ಯ ಬದುಕಿನಲ್ಲಿ ಹಲವು ಮುಖವಾಡಗಳನ್ನು ಧರಿಸಿ, ಕೊನೆಗೆ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಜುಲೈ 24 ರಂದು ಬೆಳಗಿನ ಜಾವ ಐದು ಗಂಟೆಗೇ ಹೆಲಿಕಾಪ್ಟರ್ ಬೋರ್ಡಿಂಗ್ ಪಾಸ್ ಪಡೆಯಲು ಕ್ಯೂ ನಿಲ್ಲಬೇಕಾಯಿತು. ನಮ್ಮ ನಮ್ಮ ಯಾತ್ರಾ ಪರ್ಮಿಟ್‌ಗಳನ್ನು ರಿಜಿಸ್ಟರ್ ಮಾಡಿಕೊಂಡು, ನಮ್ಮ ತೂಕ ನೋಡಿ, ನಂತರ ಬೋರ್ಡಿಂಗ್ ಪಾಸ್ ನೀಡಿದರು. ಹೆಲಿಕಾಪ್ಟರ್‌ನಲ್ಲಿ ಪಯಣಿಸಲು, ನಮ್ಮ ಸರದಿಗಾಗಿ ಕಾಯುತ್ತಾ ಕುಳಿತೆವು....
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಅಮರನಾಥ ಗುಹೆಯ ಭೌಗೋಳಿಕ ಹಾಗೂ ವೈಜ್ಞಾನಿಕ ವಿವರಗಳನ್ನು ತಿಳಿಯೋಣವೇ? ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹಾ ದೇವಾಲಯ. ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಪುರಾತನ ದೇಗುಲ ಎಂಬ ದಾಖಲೆಯಿದೆ. ಈ ರಾಜ್ಯದ ರಾಜಧಾನಿಯಾದ ಶ್ರೀನಗರದಿಂದ ನೂರಾ ನಲವತ್ತೊಂದು ಕಿ.ಮೀ. ದೂರದಲ್ಲಿರುವ...
2022 ಜುಲೈ, ದಿನಕ್ಕೊಂದು ಸುದ್ದಿ ಅಮರನಾಥ ದೇಗುಲದ ಬಗ್ಗೆ. ಮೇಘಸ್ಫೋಟ, ಹಲವು ಯಾತ್ರಿಗಳನ್ನು ಕೊಚ್ಚಿಕೊಂಡು ಹೋದ ಮಳೆರಾಯ, ಯಾತ್ರೆಯನ್ನು ಸ್ಥಗಿತಗೊಳಿಸಿದ ಮಾಹಿತಿ, ಭಾರತದ ಎಲ್ಲೆಡೆ ಎಡೆಬಿಡದೆ ಸುರಿದ ವರ್ಷಧಾರೆ ನಮ್ಮನ್ನು ಕಂಗೆಡಿಸಿದ್ದವು. ಆದರೂ, ಛಲ ಬಿಡದ ತ್ರಿವಿಕ್ರಮನಂತೆ ನಾವು 2022, ಜುಲೈ 23 ರಂದು ಅಮರನಾಥನದ ದರ್ಶನಕ್ಕೆ...
ಮಲೆನಾಡಿನ ಮಡಿಲಲ್ಲಿ ಸಂಭ್ರಮ ಸಡಗರಗಳಿಂದ ನಲಿಯುತ್ತಿರುವ ನೀಲ ಕುರಂಜಿಯನ್ನು ನೋಡೋಣ ಬನ್ನಿ. ಪಾಂಡವರು ಹನ್ನೆರೆಡು ವರ್ಷ ವನವಾಸ ಮಾಡಿ, ಒಂದು ವರ್ಷ ಅಜ್ಞಾತವಾಸ ಮಾಡಿದರೆ, ನೀಲ ಕುರಂಜಿ ಎಂಬ ಹೂವು, ಹನ್ನೆರೆಡು ವರ್ಷ ಅಜ್ಞಾತವಾಸ ಮಾಡಿ, ಒಂದು ವರ್ಷ ವನವಾಸ ಮಾಡುವಾಗ, ಇದ್ದಕ್ಕಿದ್ದಂತೆ ನಮ್ಮ ಮುಂದೆ ಧುತ್ತೆಂದು...
ಅಂದು ಕೃಷ್ಣ ಜನ್ಮಾಷ್ಟಮಿ. ಹತ್ತಾರು ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ನೃತ್ಯ ಮಾಡಲು ಸಜ್ಜಾಗಿದ್ದರು. ಸ್ಥಳ – ಸ್ಕಾಟ್‌ಲ್ಯಾಂಡಿನಲ್ಲಿರುವ ಒಂದು ಸುಂದರ ನಗರ ಅಬರ್ಡೀನ್. ಸಮುದ್ರ ತೀರದಲ್ಲಿದ್ದ ಹಳೆಯ ಚರ್ಚ್‌ನ್ನು ನವೀಕರಿಸಿ, ಹಿಂದೂ ದೇಗುಲವನ್ನಾಗಿ ಮಾರ್ಪಡಿಸಿದ್ದರು. ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು....
‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆಶಿಲೆಯಲ್ಲವೀ ಗುಡಿಯು ಕಲೆಯ ಬಲೆಯುಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟುಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ.’ ಲೇಪಾಕ್ಷಿ ದೇಗುಲವನ್ನು ಕಂಡಾಗ, ಕುವೆಂಪುರವರ ಕವನವೊಂದು ಎದೆಯಾಳದಿಂದ ಮೂಡಿ ಬಂತು. ಶೈವರ ಅಜಂತಾ ಎಂದೇ ಪ್ರಖ್ಯಾತವಾಗಿರುವ ಲೇಪಾಕ್ಷಿಯ ವೀರಭದ್ರ ದೇಗುಲವನ್ನು, ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಯಿತು. ಈ...
ರಜೆಯಲ್ಲಿ ಸ್ಕಾಟ್ಲ್ಯಾಂಡಿನಿಂದ ಬಂದ ಮೊಮ್ಮಗಳು ದಿಶಾ ಯುಕ್ಯಾಟ್, ಬಿಮ್ಯಾಟ್, ಗಾಮ್‌ಸ್ಯಾಟ್ ಅಂತೆಲ್ಲಾ ಅರಳು ಹುರಿದಂತೆ ಮಾತಾಡುವಾಗ ನಾನು ಬೆರಗಾಗಿ ಅವಳನ್ನೇ ನೋಡುತ್ತಿದ್ದೆ. ಏನೇ ಪುಟ್ಟ್ಟಿ ಇದು, ನರ್ಸರಿ ಮಕ್ಕಳ ಹಾಗೆ ಕ್ಯಾಟ್, ಮ್ಯಾಟ್, ಸಾಟ್ ಅಂತ ಬಡಬಡಿಸುತ್ತಿದ್ದೀಯಾ ಅಂತ ಅವಳನ್ನೇ ಕೇಳಿದಾಗ, ದಿಶಾ, ‘ಅಜ್ಜೀ, ಸ್ಕಾಟ್ಲ್ಯಾಂಡಿನ ಮೆಡಿಕಲ್...
ಮುಂಜಾನೆ ಆರೂವರೆಯಾಗಿತ್ತು. ಅಂದು ಶುಕ್ರವಾರವಾಗಿದ್ದರಿಂದ ಯೋಗಕೇಂದ್ರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ತರಗತಿ ನಡೆದಿತ್ತು. ಶೀಲ ಮೇಡಂ ಜೊತೆ ಎಲ್ಲರೂ ಒಟ್ಟಾಗಿ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಪಕ್ಕದಲ್ಲಿ ಪಾರಿವಾಳವೊಂದು ಪಟಪಟನೇ ರೆಕ್ಕೆ ಬಡಿಯುತ್ತಾ ದೊಪ್ಪೆಂದು ಕೆಳಗೆ ಬಿತ್ತು. ತಕ್ಷಣವೇ ಜಯಮ್ಮ ಪಾರಿವಾಳವನ್ನು ಮಗುವಿನಂತೆ ಎತ್ತಿಕೊಂಡರು, ವೀಣಾ...
ನಿಮ್ಮ ಅನಿಸಿಕೆಗಳು…