Daily Archive: April 4, 2024
ಸತ್ತ್ವ,ರಜಸ್ಸು, ತಮಸ್ಸು ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಾತ್ವಿಕ ಅಲ್ಲದ್ದು ಎಂದರೆ ರಜಸ್ಸು ಮತ್ತು ತಮಸ್ಸು. ಜಗತ್ತಿನ ಆಗು-ಹೋಗುಗಳಿಗೆ ಅಥವಾ ಜಗತ್ತಿನ ಜಗಳಕ್ಕೆ, ಇಬ್ಬರಲ್ಲಿ ಭೇದ ಮೂಡಿಸುವುದಕ್ಕೆ ಮೂರನೆಯವನ ಅವಶ್ಯಕತೆ ಇದೆಯಲ್ಲ. ಹೀಗೆ ಜಗತ್ತಿನ ನಿರಂತರತೆಗೆ, ಚಲನವಲನ ರೂಪದ ವ್ಯಾಪಾರ ನಡೆಯುವುದಕ್ಕೆ ಮೂಲಭೂತವಾದದ್ದು ಈ ತ್ರಿಗುಣಗಳು. ಈ...
ಒರೆಗಾನ್ ಜ್ವಾಲಾಮುಖಿಗಳತ್ತ… ನಾವಿದ್ದ ಸಾಂತಾಕ್ಲಾರದಿಂದ ಸುಮಾರು ಐನ್ನೂರು ಮೈಲು ದೂರದಲ್ಲಿರುವ ಒರೆಗಾನ್ ನ ಜೀವಂತ ಹಾಗೂ ನಿರ್ಜೀವವಾಗಿ, ಪ್ರಸ್ತುತ ಪಳೆಯುಳಿಕೆಯಾಗಿ ಇರುವ ಜ್ವಾಲಾಮುಖಿಗಳನ್ನು ನೋಡಲು ಹೋಗುವ ಕುರಿತು ಯೋಜನೆ ರೂಪುಗೊಳ್ಳುತ್ತಿತ್ತು. ಈ ಜ್ವಾಲಾಮುಖಿಗಳ ಪ್ರದೇಶವು, ರಾಷ್ಟ್ರೀಯ ರಕ್ಷಿತ ಪ್ರದೇಶವಾಗಿದ್ದು; 1990ರಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲ್ಪಟ್ಟಿತು. ಇದು ಸುಮಾರು...
ಇಂತಹ ಒಂದು ದಿನ ಬರುತ್ತದೆ ಎಂದು ನಾವ್ಯಾರೂ ಸಹ ಉಹಿಸಿರಲಿಕ್ಕಿಲ್ಲ. ಕಚ್ಚೆ ಪಂಚೆ, ತಲೆ ಮೇಲೊಂದು ಗಾಂಧೀ ಟೋಪಿ ಹಾಕಿ ಪಾಠ ಮಾಡಿದ ಶಿಕ್ಷಕರ ಜಾಗದಲ್ಲಿ ಇಂದು ಕೃತಕ ಬುದ್ದಿಮತ್ತೆಯ ವರದಾನದ ಫಲವಾಗಿರುವ “ಹುಮನಾಯ್ಡ್ ಶಿಕ್ಷಕ” ಬಂದು ನಮ್ಮ ಮಕ್ಕಳಿಗೆ ಪಾಠ ಮಾಡುತ್ತಾನೆಂದರೆ ಒಮ್ಮೆ ಆಶ್ಚರ್ಯ ಎನಿಸುತ್ತದೆ....
ಎಲ್ಲೆಡೆ ಹೆಚ್ಚಿದ ನೀರಿನ ಹಾಹಾಕಾರ: ಸರ್ಕಾರದ, ಸಂಘ ಸಂಸ್ಥೆಯ ಜೊತೆಗೆ ಕೈಜೋಡಿಸೋಣ. ಹಿಂದೆಂದಿಗಿಂತಲೂ ಈಗ ಬೇಸಿಗೆ ತನ್ನ ಪ್ರಭಾವವನ್ನು ಈಗಾಗಲೇ ನಮಗೆ ತೋರಿಸಿದೆ. ಸೂರ್ಯನ ಪ್ರಕಾರ ಬೆಳಕು ಬೆಳಗ್ಗೆಯಿಂದಲೇ ಪ್ರಾರಂಭವಾಗುತ್ತಿದೆ. ಇನ್ನು ಮಧ್ಯಾಹ್ನ ಹಂತದಲ್ಲಿ ಮಿತಿಮೀರಿದ ಬಿಸಿಲಿನಿಂದಾಗಿ ಮನುಷ್ಯನಿಂದ ಹಿಡಿದು ಪ್ರಾಣಿ-ಪಕ್ಷಿಗಳು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು...
ಮನೆಮದ್ದು ಎಂದರೆ ಮನೆಯಲ್ಲೇ ತಯಾರಿಸಬಹುದಾದ ಔಷಧ. ಹಿಂದೆ ಇಷ್ಟೊಂದೆಲ್ಲ ಅಸ್ಪತ್ರೆಗಳು, ಖಾಸಗಿ ಕ್ಲಿನಿಕ್ಗಳು ಇರಲಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಊರುಗಳಲ್ಲಿ ಯಾವುದೇ ಸೌಲಭ್ಯವಿರಲಿಲ್ಲ. ಅಂಥಹ ಸಮಯದಲ್ಲಿ ಹಿರಿಯರಾದ ಕೆಲವರು ತಮ್ಮ ಹಿರಿಯರಿಂದ ಕೇಳಿದ್ದ, ಕಂಡಿದ್ದ ಮನೆಯಲ್ಲೇ ಖಾಯಿಲೆಗಳಿಗೆ ಮಾಡಬಹುದಾದ ಔಷಧೋಪಚಾರದ ಬಗ್ಗೆ ತಿಳಿಸಿಕೊಡುತ್ತಿದ್ದರು ಜನರು ಅದನ್ನು ಪಾಲಿಸುತ್ತಿದ್ದರು....
ದೋಸೆಯ ರುಚಿ ಯಾರಿಗೆ ಗೊತ್ತಿಲ್ಲ? ತಿನ್ನದೇ ಇರುವ ಪಾಪಿಗಳು ಯಾರಿಹರು? ಅದರಲೂ ಮಸಾಲೆ ದೋಸೆಯನ್ನು ಆಸ್ವಾದಿಸದ ನಾಲಗೆಯದು ನಿಜಕೂ ಜಡ ಮತ್ತು ಬಡ! ಪುತಿನ ಅವರು ಮಸಾಲೆ ದೋಸೆಯನ್ನು ಕುರಿತು ಬಹು ಸುಂದರವಾದ ಲಲಿತ ಪ್ರಬಂಧವನ್ನು ಬರೆದಾಗ ಒಂದು ಪುಟ್ಟ ಆಕ್ಷೇಪಣೆಯೂ ಎದ್ದಿತ್ತು. ‘ಹಳ್ಳಿಗಳಲ್ಲಿ ಬರಗಾಲ ಬಂದಿದೆಯೆಂದು...
ಮಾರ್ಚ್ ತಿಂಗಳಲ್ಲಿ ಜನಿಸಿದ ಪುರೋಹಿತ ತಿರುನಾರಾಯಣ ಐಯ್ಯಂಗಾರ್ ನರಸಿಂಹಾಚಾರ್ ಅವರ ಶ್ರೀಹರಿಚರಿತೆ ಬಳಸಿದ ಛಂದಸ್ಸಿನಿಂದ, ದ್ವಾಪರಯುಗದ ಕೃಷ್ಣನನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸುವ ಆಶಯದಿಂದ ಅನುಸರಿಸಿದ ಕೃಷ್ಣಕಥೆಯ ನಡಿಗೆಯಿಂದ, ಎಷ್ಟು ವಿಶೇಷವಾದದ್ದು ಆಗಿದೆಯೋ ಕೃಷ್ಣನನ್ನು ರಾಧಾಕೃಷ್ಣನನ್ನಾಗಿ ಪರಿಭಾವಿಸಿದ ರೀತಿಯಿಂದಲೂ ವಿಶೇಷವಾದದ್ದು ಆಗಿದೆ. ಇದು ಅವರ ವೈಷ್ಣವ ಸಂಪ್ರದಾಯಕ್ಕೆ ಅನುಗುಣವಾದ ಗ್ರಹಿಕೆ...
ಗೆಳೆಯಾ !ನಿನ್ನ ವಿಳಾಸಕ್ಕಾಗಿಗುಡಿಗೋಪುರಗಳೇ ಅಲ್ಲಬೆಟ್ಟಗಳು ಕಣಿವೆಗಳನ್ನುಹುಡುಕುವ ಕೆಲಸವಿಲ್ಲ ಒಬ್ಬಂಟಿಯಾಗಿರುವಾಗನಿನ್ನ ಆತ್ಮವನ್ನು ಪ್ರಶ್ನಿಸು ನಿನ್ನ ಮೊಮ್ಮಗಳ ತುಟಿಗಳಮೇಲಿನನಿರ್ಮಲವಾದ ಮುಗುಳ್ನಗೆಯನ್ನು ಕೇಳು ನಿನ್ನ ಮನೆಯ ಮುಂದಿರುವಆರೋಗ್ಯ ಧಾಮಆ ಬೇವಿನ ಮರವನ್ನು ವಿಚಾರಿಸು ಸವಿಯೂಟದ ನಂತರಕಸದ ಬುಟ್ಟಿಗೆ ಎಸೆದಿದ್ದಊಟದ ಎಲೆಯಲ್ಲಿರುವ ಅನ್ನದ ಕಣವನ್ನು ಕೇಳು ಶರೀರದಿಂದ ಜಾರಿ ಬೀಳುವಶ್ರಮಾಮೃತ ಹನಿಗಳನ್ನು ಕೇಳು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಪಳನಿ – ಸುಬ್ರಹ್ಮಣ್ಯ ಕ್ಷೇತ್ರ ಜಂಬುಕೇಶ್ವರನ ದರ್ಶನ ಮಾಡಿ, ಮಧ್ಯಾಹ್ನದ ಊಟ ಪೂರೈಸಿ, ಅಂದಾಜು 170 ಕಿಮೀ ಪ್ರಯಾಣಿಸಿ ‘ಪಳನಿ’ ತಲಪಿದೆವು. ಮುರುಗನ್, ಕಾರ್ತಿಕೇಯ, ಷಣ್ಮುಖ ಮೊದಲಾದ ಹೆಸರುಗಳಿಂದ ಅರ್ಚಿಸಿಕೊಳ್ಳುವ ಸುಬ್ರಹ್ಮಣ್ಯ ಇಲ್ಲಿಯ ಮುಖ್ಯ ದೇವರು, ‘ಪಳನಿ’ ಎಂದರೆ ಫಲವನ್ನು ಕೊಡುವವನು ಅಂತ ಅರ್ಥ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಆದಿತ್ಯ ರಮ್ಯಾಗೆ ತಾನು ಮೂರ್ತಿರಾಯರನ್ನು ಭೇಟಿ ಮಾಡಿದ ವಿಚಾರ ಹೇಳಲಿಲ್ಲ.“ಅಮ್ಮ-ಅಪ್ಪ ತುಂಬಾ ಆರಾಮವಾಗಿರಬಹುದು. ನಾವ್ಯಾಕೆ ತೊಂದರೆಕೊಡುವುದು?” ಎಂದುಕೊಂಡ. ಸುಬ್ರಹ್ಮಣ್ಯ ಆದಿತ್ಯ ದಂಪತಿಗಳನ್ನು ತಂದೆ-ತಾಯಿ ವಿವಾಹ ವಜ್ರಮಹೋತ್ಸವಕ್ಕೆ ಕರೆಯಲು ಬಂದವನು, ಆದಿ ತಂದೆ-ತಾಯಿಯರನ್ನೂ ಭೇಟಿ ಮಾಡಿ ಆಹ್ವಾನಿಸಿದ. ”ನಮ್ಮ ಪರವಾಗಿ ಮಗ-ಸೊಸೆ ಬರ್ತಾರೆ. ನಮಗೆ...
ನಿಮ್ಮ ಅನಿಸಿಕೆಗಳು…