Daily Archive: June 15, 2023
ವಿದ್ಯಾರ್ಥಿ-ಗುರು ಸಂಬಂಧವೆಂದರೆ ಅದು ಪಾರದರ್ಶಕವಾದುದು. ಶಿಕ್ಷಣದಲ್ಲಿ ಮುಚ್ಚುಮರೆಯಿಲ್ಲ. ಉತ್ತಮ ಗುರು ತನ್ನೆಲ್ಲ ಜ್ಞಾನವನ್ನು ಶಿಷ್ಯನಿಗೆ ಧಾರೆಯೆರೆಯುತ್ತಾನೆ.ಆದರೆ ಎಷ್ಟು ಜನ ವಿದ್ಯಾರ್ಥಿಗಳು ಗುರುಗಳು ಕಲಿಸಿದ್ದನ್ನು ಅರ್ಥೈಸಿಕೊಳ್ಳುತ್ತಾರೆ, ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಕೆಲವರಂತೂ ಶಿಕ್ಷಕರು ಪಾಠ ಮಾಡುವ ವೇಳೆ ತಮ್ಮ ಮನಸ್ಸನ್ನು ಬೇರೆಲ್ಲೋ ನೆಟ್ಟು ವ್ಯವಹರಿಸುತ್ತಿರುತ್ತಾರೆ....
ಹೊಸ ಜೀವನಶೈಲಿ ಒಂದು ವಾರ ಕಳೆಯಿತು. ಬಂದಾಗಿನಿಂದ ಬೆಳಗ್ಗೆ ಬ್ರೆಡ್, ಜಾಮ್ ಮತ್ತು ಗಿರೀಶಗೆ ಆಮಲೆಟ್ ಮಾಡಿ ಹಾಕಿದ್ದ ರಂಗಪ್ಪ. ಅಂದೂ ಅದನ್ನೆ ತಂದಿರಿಸಿದಾಗ “ಏನು ರಂಗಪ್ಪ ದಿನಾಲು ತಿಂಡಿಗೆ ಬ್ರೆಡ್ಡಾ? ನಿಮಗೆ ಉಪ್ಪಿಟ್ಟು, ರೊಟ್ಟಿ, ಅವಲಕ್ಕಿ ಮಾಡೋಕ್ಕೆ ಬರಲ್ವಾ” ಸುಮನ್ ತುಸು ಮುನಿಸಿನಿಂದ ಕೇಳಿದಳು. ರಂಗಪ್ಪ...
ಮಣಿಪುರದ ತೇಲುವ ಕಿಯಾಬುಲ್ ಲಾಮ್ ಜೋ ಅಭಯಾರಣ್ಯದ ಬಗ್ಗೆ ಆಸಕ್ತಿ, ಕುತೂಹಲ ಎರಡೂ ಒಮ್ಮೆಲೆ ಮೂಡಿದವು. ಭಾರತದ ಈಶಾನ್ಯ ರಾಜ್ಯಗಳ ಸಪ್ತ ಸಹೋದರಿಗಳಲ್ಲೊಬ್ಬಳಾದ ಮಣಿಪುರದ ಬಿಷ್ಣುಪುರದಲ್ಲಿತ್ತು ಈ ಅಪರೂಪದ ಅರಣ್ಯ. ಮಣಿಪುರದ ರಾಜಧಾನಿ ಇಂಪಾಲದಿಂದ 32 ಕಿ.ಮೀ. ದೂರದಲ್ಲಿರುವ ಲೋಕ್‌ಟಾಪ್ ಸರೋವರದ ಒಡಲಲ್ಲಿ ಹಬ್ಬಿತ್ತು ಈ ತೇಲಾಡುವ...
ಹಾರುವ ಹೂವೊಂದು ಮರದ ಮೇಲೆ ಕುಳಿತಿದೆಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳುಕತ್ತು ಅಲ್ಲಾಡಿಸಿದಾಗ ಮೇಲೆದ್ದು ಕೂರುವ ಕೆಂಪನೆಯ ಜುಟ್ಟಿನ ಭಾಗಗಳು ಕಡು ನೀಲಿ ಬಣ್ಣದ ಪುಕ್ಕಗಳು ಹಳದಿ ವರ್ಣದ ಮೈಗೆ ಮೆರಗು ನೀಡಿವೆಚೂಪಾದ ಉಗುರುಗಳು ಕಾಂಡಕ್ಕೆ ಚುಚ್ಚಿ ಬಳಸಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕಾರ್ಯಾಗಾರದತ್ತ…. ಈ ದಿನ ಬೆಳಗ್ಗೆ 9:30ಕ್ಕೆ ಹೊರಟು ತಯಾರಾಗಿರಲು ಮಕ್ಕಳಿಂದ ನಮಗೆ ಸಂದೇಶ… ಎಲ್ಲರೂ ಸಿದ್ಧರಾದರೂ ಹೋಗುವ ಸ್ಥಳದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ ನೋಡಿ… ! ಹಿಂದಿನ ದಿನ, ಹಣ್ಣಿನ ತೋಟಗಳಿಂದ ಕಿತ್ತು ತಂದಿದ್ದ (Fruit Plucking) ರುಚಿಯಾದ ವಿವಿಧ ಹಣ್ಣುಗಳು ತುಂಬಿದ ಡಬ್ಬಗಳು...
ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು ಬಣ್ಣಗಳಜಾಡಿನಲಿ ಶಿಲೆಯಾಗಿಮೂರ್ತಿಯಾಗಿಗುಡಿಗಳಲಿ ರಾರಾಜಿಸಿದೆ ಜಾತಿ, ಧರ್ಮ,ಮತವೆಂದುಹಿಂದೆ ಸರಿಯದೆಸದ್ದಿಲ್ಲದೆ ಸರ್ವಧರ್ಮಕೂಸಲ್ಲಿದೆ ಲಿಂಗಭೇದ ಎನಗಿತ್ತೇ…?ಧರ್ಮದ ಆಸರೆ ಎನಗಿತ್ತೇ…?ಗುಡಿಸೇರಿ ಮಡಿಯಾದೆಮಂಟಪಕೆ ಆಸರೆಯಾದೆ ನಿರ್ಜೀವದ ಪದರಕೆಪೂಜೆ,ಗೌರವ ಪಡೆದೆಲಿಂಗ, ವರ್ಣಗಳಲ್ಲಿ ಬೆರೆತುಸೆರೆಯಾದೆ ಧರೆಯ...
ಪುಸ್ತಕ:- ಆಯ್ದ ಹತ್ತು ಕಥೆಗಳು ( ಅನುವಾದಿತ ಕಥಾ ಸಂಕಲನ)ಲೇಖಕರು:- ಮಾಲತಿ ಮುದಕವಿಪ್ರಕಾಶಕರು :- ಎನ್. ಕೆ. ಎಸ್. ಪ್ರಕಾಶನಬೆಲೆ :- 210 /- ಇಲ್ಲಿ ಮರಾಠಿ ಭಾಷೆಯಿಂದ ಆರಿಸಿ ಅನುವಾದಿಸಲ್ಪಟ್ಟ 10 ಕಥೆಗಳಿವೆ. ಬೇರೆ ಭಾಷೆಗಳನ್ನು ಅರಿಯದ ಓದುಗರಿಗೆ ಹೀಗೆ ಅನುವಾದಿಸಲ್ಪಟ್ಟ ಕಥೆ, ಬರಹಗಳು ಬೇರೆ ...
ಬೀಚಿಯವರ ಮಾನಸಪುತ್ರ ‘ತಿಂಮ’ ತನಗೆ ಪುತ್ರೋತ್ಸವವಾದಾಗ ಜ್ಯೋತಿಷಿಗಳ ಬಳಿ ಹೋಗಿ ತನ್ನ ಮಗನ ಭವಿಷ್ಯ ಕೇಳಿದನಂತೆ. ಅವರು ”ನೋಡು ತಿಂಮ, ನಿನ್ನ ಮಗನಿಗೆ ಗಜಾರೋಹಣ ಯೋಗವಿದೆ” ಎಂದರಂತೆ. ತಿಂಮನಿಗೆ ಅದು ನಿಜವೆನ್ನಿಸಿದ್ದು ನಾಲ್ಕು ವರ್ಷಗಳ ನಂತರ. ಮಗನನ್ನು ಕರೆದುಕೊಂಡು ದೇವಸ್ಥಾನಕ್ಕೊಮ್ಮೆ ಹೋದ. ದರ್ಶನ ಮಾಡಿ ಹೊರಗೆ ಬಂದು...
ನಿಮ್ಮ ಅನಿಸಿಕೆಗಳು…