Daily Archive: July 21, 2022
ಕಳೆದ ಹದಿನೇಳು ವರ್ಷಗಳಿಂದಲೂ ಕಾರು ನನ್ನ ಸಂಗಾತಿ. ಎಲ್ಲಿಗೆ ಹೋಗಬೇಕೆಂದರೂ “ಎದ್ದೇಳು, ನಡಿ” ಅಂತ ನನಗೆ ನಾನೇ ಅಪ್ಪಣೆ ಕೊಡುವುದರ ಜೊತೆ ಕಾರಿಗೂ ಇಂಧನ ತುಂಬಿಸಿ “ಚಲ್ ಮೇರೀ ಗಾಡಿ” ಅನ್ನುತ್ತಾ ಪಯಣಿಸುವ ಅಭ್ಯಾಸ ರೂಢಿಯಾಗಿದೆ. ಹಾಗಂತ ಎಲ್ಲಿಗಾದರೂ ಹೋಗಬೇಕೆಂದರೆ ನನಗೆ ಕಾರೇ ಆಗಬೇಕೆಂದಿಲ್ಲ. ಆಗಾಗ ನಡೆದು...
ರಾತ್ರಿಯಲ್ಲಿ ಹಗಲು..!! ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು. ಈ ನಡು ಮಧ್ಯಾಹ್ನ, ಅದೂ ಇನ್ನೂ ಪ್ರಖರವಾದ ಸೂರ್ಯನ ಬೆಳಕು ಇರುವಾಗಲೇ ಇದೇಕೆ ಹೀಗೆ ಎಂದು ನನಗೆ ಅರ್ಥವಾಗಲಿಲ್ಲ. ಆಮೇಲೆ ತಿಳಿದ ವಿಷಯ ನಿಜಕ್ಕೂ ಕುತೂಹಲಕಾರಿಯಾಗಿತ್ತು....
ಆಷಾಢದ ಮೋಡಗಳುಕೈ ಬೀಸಿ ಕರೆದುಮೆಲ್ಲನುಸುರಿದವು.ಗುಟ್ಟನೊಂದ ಕಿವಿಯೊಳಗೆ ವಿದಾಯದೆಳೆ ಹೊತ್ತುತೆರಳುವ ನೋವು ನನಗೇ ಗೊತ್ತುಬರುತಿಹ ಶ್ರಾವಣ ನನ್ನಹೋಗು ಹೋಗೆನುತ ಹಂಗಿಸಿತುಸಣ್ಣಗೆ ಹನಿಯುದುರಿಸಿದರೆ ಸಾಕೇ?ಗಾಳಿಯ ಮೊರೆತದಲಿಮಳೆ ಮೋಡಗಳ ಚೆಲ್ಲಾಡುವುದೇಕೆ? ಈಗ ನೋಡು, ನನ್ನ ಆಗಮನಇಳೆಯ ತೊಳೆದು ಬಣ್ಣದಹೂವುಗಳ ರಂಗೋಲಿಯಿಡುವೆನಕ್ಷತ್ರ ಕಂಗಳ ಬೆಳಕಅಂಗಳದಲಿ ಮಿನುಗಿಸುವೆ.ಹಸಿರ ರಾಶಿಯಲಿ ಭುವಿಯತೇರನೆಳೆಯುವೆಹೆಂಗೆಳೆಯರೆದೆಯಲಿರಂಗಿನ ರಾಗಗಳ ನುಡಿಸುವೆ ನೀ...
ಮತ್ತೆ ನೆನಪುಗಳ ಹೊತ್ತ ಮಳೆಯ ರಭಸ ಹೆಚ್ಚುತ್ತಿದೆ. ಮಳೆ ಎಂದರೆ ನೆನಪೆ! ನೆನಪೆಂದರೆ ಸೊಬಗು..! ಮನದ ಕುಕ್ಕೆಯೊಳಗೆ ಬಚ್ಚಿಟ್ಟಿದ್ದ ನೆನಪುಗಳೆಲ್ಲವೂ ಅಪ್ಪಣೆ ಇಲ್ಲದೆ ಮನದ ಪರದೆಯೆಡೆಗೆ ಮಳೆಯೊಡನೆ ಹರಿದು ತೇವಗೊಳಿಸುತ್ತದೆ. ತುಂತುರು ತುಸು ಸಮಾಧಾನ ಕೊಟ್ಟರೆ, ಗುಡುಗು ಹೆದರಿಸಿ,ಮಿಂಚು ಬೆಚ್ಚಿ ಬೀಳಿಸುತ್ತದೆ. ಈ ಮಳೆ ನೆನಪನ್ನು ಹರವಿ...
ಈ ರೆಸ್ಟೋರೆಂಟಿನಲ್ಲಿ ಕ್ಲೀನರ್ ಹುಡುಗಟೇಬಲ್ ಸ್ವಚ್ಛಗೊಳಿಸಿದ ನಂತರಹಲವು ಕಲೆ ಪಾತ್ರೆಗಳ ನಡುವೆ ಸಿಲುಕಿಜೊತೆಯಾಗಿ ನಾವು ಐಸ್ ಕ್ರೀಮ್ ತಿಂದಜೋಡಿ ಸ್ಪೂನುಗಳು ಸಹಬೇರೆ ಬೇರೆಯಾಗಬಹುದುನಮ್ಮಂತೆಈ ಕ್ಷಣ ಜೊತೆಗಿದ್ದುಸಂಜೆಗೆ ನಾವಿಬ್ಬರು ಇರುತ್ತೇವಲ್ಲಹಾಗೇ ದೂರ ದೂರದಲ್ಲೇ.. ಮತ್ತೆಂದೋ ಆ ಸ್ಪೂನುಗಳುಮತ್ತೊಂದು ಜೋಡಿಯಐಸ್ ಕ್ರೀಮ್ ಕಪ್ಪಿನೊಳಗೆಒಂದಾಗಬಹುದು ಮತ್ತೆನಮ್ಮಿಬ್ಬರ ಮತ್ತೊಂದು ಭೇಟಿಯಂತೆ – ನವೀನ್...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಹಿರಿಯರು ಹೇಳಿದ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಹೂಂ ಎಷ್ಟು ಯೋಚಿಸಿದರೂ ಅಷ್ಟೇ, ಯಾವಾಗ ಲಭ್ಯವಿದೆಯೋ ಆಗಲೇ ಆಗಲಿ. ಮುಂದೇನು ಮಾಡಬೇಕೆಂಬುದರ ಕಡೆಗೆ ಗಮನ ಹರಿಸೋಣ ಎಂದುಕೊಳ್ಳುತ್ತಿದ್ದಂತೆ ಆಕೆಯ ಗುರುಗಳಾದ ಗೌರಿಯಮ್ಮ ಹೇಳಿದ ಮಾತುಗಳು ನೆನಪಿಗೆ ಬಂದವು. “ಭಾಗ್ಯಾ, ನಿಮ್ಮ ಮನೆಯಲ್ಲಿ ಸಂಗೀತ ಕಛೇರಿ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸಂಸ್ಥೆಗಳ ಸ್ಥಾಪನೆ: 1784ರಲ್ಲಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಸಂಸ್ಥೆ ಬ್ರಿಟಿಷ್ ಕಂಪೆನಿ ಸರ್ಕಾರದಿಂದ ಸ್ಥಾಪಿತವಾಯಿತು. ಇದರ ಸ್ಥಾಪಕ ನಿರ್ದೇಶಕರು ಸರ್ ವಿಲಿಯಂ ಜೋನ್ಸ್. ಇದು ಏಷ್ಯಾದ ಎಲ್ಲಾ ವಿಜ್ಞಾನ ವಿಭಾಗಗಳ ವಿಜ್ಞಾನಿಗಳ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ಉದ್ದೇಶದಿಂದ ಆರಂಭವಾಗಿತ್ತು....
ನಿಮ್ಮ ಅನಿಸಿಕೆಗಳು…