Daily Archive: May 19, 2022
–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಸುಶ್ರಾವ್ಯವಾದ ಗಾನಮಾಧುರ್ಯದಿಂದ ಎಚ್ಚೆತ್ತ ಭಾಗ್ಯ ಸುತ್ತಲೂ ಕಣ್ಣು ಹಾಯಿಸಿದಳು. ಓ ! ನಾನೀಗ ಇರುವುದು ಅತ್ತೆಯ ಮನೆಯಲ್ಲಿ, ಮನೆತುಂಬಿಸಿಕೊಳ್ಳುವ ಕಾರ್ಯ, ಆ ಮನೆಯಿಂದ ಈ ಮನೆಗೆ ಉಡುಕೆ ನಡೆದದ್ದು, ನೆನ್ನೆ ನಡೆದ ಸತ್ಯನಾರಾಯಣಪೂಜೆ, ರಾತ್ರಿಯ ಸಜ್ಜೆಮನೆ, ಎಲ್ಲವೂ ದುತ್ತನೆ ಕಣ್ಮುಂದೆ ನಿಂತವು. ಎಲ್ಲಾ ಕಾರ್ಯಕ್ರಮಗಳಿಂದ...
ಎಲ್ಲ ದೇಶಗಳಿಗೆಎಲ್ಲ ಭಾಷೆಯ ಮಂದಿಗೆಅರ್ಥವಾಗುವ ಮಾತುಮುಗುಳ್ನಗೆ ಸಮಸ್ಯೆಗಳ ಬಲೆಯಿಂದಕಷ್ಟಗಳ ಸುಳಿಯಿಂದದೂರಕೊಯ್ಯುವ ದೋಣಿಮುಗುಳ್ನಗೆ ಮನಸ ಹಗುರತೆಗೆಮುಖದಂದ ಸಿರಿಗೆಅಳಿಸಲಾಗದ ಅಲಂಕಾರಮುಗುಳ್ನಗೆ ಪ್ರೇಮಾಂಕುರಕ್ಕೆಸಲ್ಲಾಪ ಸಂಭ್ರಮಕ್ಕೆನೀರನೆರೆಯುವ ನದಿಯೆಮುಗುಳ್ನಗೆ ದ್ವೇಷಗಳನಳಿಸಿಆತ್ಮೀಯತೆ ಬೆಳೆಸಿಚೆಂದ ಹಬ್ಬುವ ಬಳ್ಳಿಮುಗುಳ್ನಗೆ ಶಯ್ಯೆಯಲಿ ಕೊನೆದಿನವನೆಣಿಸುವಲ್ಲಿಬಂಧ ಮುಕ್ತಿಯಲ್ಲಿರಲಿಮುಗುಳ್ನಗೆ -ಅನಂತ ರಮೇಶ್ +3
ಸಾಹಿತ್ಯ ಎನ್ನುವುದು ಒಂದು ಸಮುದಾಯದ ಬೌದ್ಧಿಕತೆಯ, ಸಂಸ್ಕೃತಿಯ ಹಾಗೂ ಮನೋಭಿವೃದ್ಧಿಯ ಪ್ರತಿನಿಧಿ ಹಾಗೂ ಅಭಿವೃದ್ಧಿಯ ಸಂಕೇತವು ಹೌದು. ಸಾಹಿತ್ಯ ಎನ್ನುವುದು ಯಾವುದೇ ಭಾಷೆಯನ್ನಡುವ ಸಮುದಾಯದಲ್ಲಿ ಬರವಣಿಗೆಯ ರೂಪದಲ್ಲೋ ಅಥವಾ ಮಾತಿನ ನೆಲೆಯಲ್ಲೋ ಅಂದರೆ ಜಾನಪದ ರೂಪದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಿರುತ್ತದೆ. ಹಾಗಾಗಿ ಸಾಹಿತ್ಯ ಎನ್ನುವುದು ಸರ್ವವ್ಯಾಪಿ ಹಾಗೂ...
ಬರೆದಿರುವೆ ನನ್ನ ಕೊನೆಯ ಪತ್ರನಿನಗೆ ಒಂದಲ್ಲ ಒಂದು ದಿನ ತಲುಪುವುದೆಂದು ಪುತ್ರ ನೀನು ನಿನ್ನ ಪುಟ್ಟ ತಂಗಿ ಒಳಗೊಂಡ ನಮ್ಮ ಚಿಕ್ಕ ಸಂಸಾರವಿಶಾಲ ಎದೆಯ ಗಿರಿಜಾ ಮೀಸೆಯ ನನ್ನ ಗಂಡ ಸರದಾರ ಉಟ್ಟು ಉಡಲು ಕಷ್ಟವಿರಲಿಲ್ಲಅನ್ನ ಮೇಲೋಗರಗಳಿಗೆ ಬರವಿರಲಿಲ್ಲಬಯಸಿದ್ದು ಕೊಳ್ಳುವಷ್ಟು ಶಕ್ತಿ ನಮ್ಮಲ್ಲಿ ಇಲ್ಲದೆ ಇರಲಿಲ್ಲ ನಿಮ್ಮ...
ಸಾಂತಾಕ್ರೂಝ್ ಕಡಲಕಿನಾರೆಯಲ್ಲಿ ….. ಮೂರು ತಿಂಗಳ ಮೊಮ್ಮಗಳು ಕವುಚಲಾರಂಭಿಸಿದ ಸಂಭ್ರಮದ ನಡುವೆಯೇ ಅಲ್ಲಿದ್ದ ಪರಿಚಿತ ಕುಟುಂಬಗಳಿಗೆ ಭೇಟಿ ಕೊಡುತ್ತಾ, ಅವರ ಆದರಾತಿಥ್ಯಗಳನ್ನು ಸವಿಯುತ್ತಾ, ವಾರದ ಕೊನೆಯಲ್ಲಿ ಹೊಸ ಜಾಗಗಳಿಗೆ ಹೋಗಿ ಸುತ್ತಾಡುವುದು ನಡೆದಿತ್ತು… ಅವುಗಳಲ್ಲೊಂದು ಸಾಂತಾಕ್ರೂಝ್. ಸಾಂತಾಕ್ರೂಝ್ ಪ್ರಾಂತ್ಯದ ಅದೇ ಹೆಸರಿನ ಅತ್ಯಂತ ದೊಡ್ಡ ಪಟ್ಟಣವಾದ ಇದು...
ಹಣ್ಣುಗಳ ರಾಜ ಮಾವು ಎಂದು ಹೇಳಲ್ಪಡುವ ರುಚಿಕಟ್ಟಾದ ಮಾವಿನ ಹಣ್ಣಿನ ಕಾಲ ಈಗ. ವರ್ಷಕ್ಕೆ ಎರಡೋ, ಮೂರೋ ತಿಂಗಳು ಸಿಗುವ ಈ ಹಣ್ಣಿನ ರುಚಿಯ ಹೇಗೆ ಬಣ್ಣಿಸಲಿ? ಮಾವಿನ ಹಣ್ಣು ಇರುವುದು ಅದನ್ನು ತಿಂದು ರುಚಿಯನ್ನು ಆಸ್ವಾದಿಸಲು ಎಂದು, ಅದನ್ನು ಬಣ್ಣಿಸುವುದಕ್ಕಲ್ಲಾ ಎನ್ನುತ್ತೀರಾ….., ಹೌದೌದು, ನೀವು ಹೇಳುವುದು...
ಸಂಜೆಯಾಗಿತ್ತು. ವಿಶಾಲವಾದ ಬಯಲು. ವೆಲ್ಲಂಗಿರಿ ಬೆಟ್ಟದ ತಪ್ಪಲಿನಲ್ಲಿ, ಮುಗಿಲೆತ್ತರಕ್ಕೆ ನಿಂತ ಭವ್ಯವಾದ ಮನೋಹರವಾದ ಆದಿಯೋಗಿ ಶಿವನ ವಿಗ್ರಹ. ನಕ್ಷತ್ರದಂತೆ ಹೊಳೆಯುತ್ತಿದ್ದ ಕಂಗಳು, ಜ್ಯೋತಿಯಂತೆ ಬೆಳಗುತ್ತಿದ್ದ ಹಣೆಗಣ್ಣು, ಅಲೆಅಲೆಯಾಗಿ ಬೆನ್ನಿನ ತುಂಬಾ ಹರಡಿದ್ದ ಜಟೆಗಳು, ಮುಡಿಯಲ್ಲಿ ಶೋಭಿಸುತ್ತಿದ್ದ ಅರ್ಧ ಚಂದ್ರ, ಅರೆ ನಿಮೀಲಿತ ನೇತ್ರಗಳು, ತುಟಿಗಳಲ್ಲಿ ಮಿನುಗುತ್ತಿದ್ದ ಮಂದಹಾಸ,...
ಭಾರತೀಯ ಸಾಮಾಜಿಕ ಪದ್ಧತಿಯ ಬೇರು ಕುಟುಂಬ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ಮನೋಭಾವನೆಯ ಅರಿವು ನಮ್ಮದು. ಅದರಲ್ಲಿ ಕುಟುಂಬ ಅತ್ಯಂತ ಮೂಲಭೂತ ಸ್ತರದ ವ್ಯವಸ್ಥೆ. ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳ ಬಗ್ಗೆ ತಿಳಿದಿದ್ದೇವೆ . ಈಗಂತೂ ನ್ಯೂಕ್ಲಿಯರ್ ಕುಟುಂಬಗಳೇ ಹೆಚ್ಚು...
ನಿಮ್ಮ ಅನಿಸಿಕೆಗಳು…