Daily Archive: May 14, 2020
ನಾನು ಸರ್ಕಾರಿ ಕಚೇರಿಗಳಿಗೆ ಹೋದಾಗಲೆಲ್ಲ ಅಲ್ಲಿಗೆ ಬರುವ ಜನರು ಅಟೆಂಡರನನ್ನೋ,ಮತ್ತಾರನ್ನೋ ಸಾಹೇಬರು ಇದ್ದಾರೇನ್ರಿ ಎಂದು ಕೇಳಿದಾಗ ಸಾಹೇಬರು ಈ ಪದ ನನಗೆ ಅಪ್ಯಾಯಮಾನವಾಗಿ ಕೇಳಿಸುತ್ತದೆ. ಹೀಗಾಗಿ ಸಾಹೇಬರು ಪದ ನನ್ನಲ್ಲಿ ಚಿಂತನೆ ಮೂಡಿಸಿತು. ಸಾಹೇಬರು ಶಬ್ದದಲ್ಲಿ ಅದೆಷ್ಟು ವಿಶಾಲ ಅರ್ಥ ಇದೆಯಲ್ಲ ಎನಿಸಿತು. ಸಾಹೇಬರು ಎಂದರೆ ದೊಡ್ಡವರು...
ಹೊರ ಅಂಗಳದಲ್ಲಿ ಬೈಕು ನನ್ನ ಹೊರದೆ ಹೊರ ಹೋಗದೆ ನಿಂತಲ್ಲೆ ನಿಂತೂ ನಿಂತು ಹತ್ತೆಂಟು ಹಕ್ಕಿ ಸ್ನೇಹ ಬೆಳೆಸಿತು ದಿನ ಬೆಳಗುಸಂಜೆ ಎಷ್ಟೋ ಬಣ್ಣ ಪುಚ್ಛ ಹಾಡು ಕೊರಳ ಜೋಡಿ ಆಟ ಬೈಕು ಕನ್ನಡಿಗಳೆ ಒಡನಾಡಿ ಕಾಗೆ ಕೂಡಾ ಕನ್ನಡಿ ಇಣುಕಿ ತನ್ನ ಸೌಂದರ್ಯಕ್ಕೆ ಮಾರು ಹೋಗಿ...
ಕಳೆದುಕೊಳ್ಳದಿರಿ ಧೈರ್ಯವನು ಕಂಟಕಗಳ ನಡುವೆಯೂ ಅರಳುವುದು ಮೆದುಳು ಭವಿತವ್ಯದಲಿ ಬಿಟ್ಟುಕೊಡದಿರಿ ಆತ್ಮಸ್ಥೈರ್ಯವನು ಗಂಡೆದೆಯ ಆಟವಾಡಿರಿ… ಬೀಸಿ ಬಂದ ಬಿರುಗಾಳಿ ಜೊತೆಗೆ ಎದುರಾಗಿ ಉರುಳಿಸಿದ ಬಂಡೆಗಲ್ಲಿಗೆ ಎದೆಯೊಡ್ಡಿರಿ ಛಲದಲಿ… ತಿಳಿದಾಗಿದೆ ನಿಮಗೆ ವರ್ಷಧಾರೆಯ ದಿನಗಳಿವು ಕೋಲಾಹಲವೆದ್ದಿದೆ ಗಗನದಲಿ ನಿಧಾನವಿರಲಿ ಮನದ ಪರಿಚಲನೆಯಲಿ ಕಣ್ಮುಂದಿವೆ ಮಿನುಗು ಹಣತೆಗಳು ನಂಬಿಕೆಯಿರಲಿ ಆತ್ಮಸೈರ್ಯದ...
ತರ್ಜುಮೆ ಮಾಡುವುದೆಂದರೆ ವ್ಯತ್ಯಸ್ತ ಭಾಷೆಯ ಪದಗಳ ಯಥಾವತ್ ತಂದು ಶಬ್ದ ಜೋಡಿಸಿದಂತಲ್ಲ… ನಿರ್ಭಾವ ವಾಕ್ಯಗಳು ಬಲಹೀನ..! ಸುಳಿಗಾಳಿಗೆ ಚದುರಿ ಕಾರ್ಮೋಡ, ಮತ್ತದೇ ನಿರ್ಲಿಪ್ತ ನೀಲಭಾನು..! ಭಾಷಾಂತರವೆಂದರೆ ಸುಮ್ಮನಲ್ಲ ಕಡಲೆದೆಯ ಬಗೆದು, ಕವಾಟಗಳ ತೆರೆದು ನೆತ್ತರಿನ ಲೆಕ್ಕಾಚಾರ ಹಾಕಿದಂತೆ.. ಹೃತ್ಕರ್ಣ ಹೃತ್ಕಕ್ಷಿಗಳಿಗೂ ಸಿಗದ ಶುದ್ದತೆಯ ಅಂದಾಜು.. ಇಂಗಾಲ ಪ್ರಾಣವಾಯುಗಳ...
‘ಅಮ್ಮ ತಾಯಿ ನಿನ್ನ ಮಡಿಲಲ್ಲಿ ಕಣ್ಣು ತೆರೆದ ಕ್ಷಣದಲ್ಲಿ ಸೂತ್ರವೊಂದು ಬಿಗಿಯಿತ್ತು. ಸಂಬಂಧದ ನೆಪದಲ್ಲಿ ‘ ಎನ್ನುವ ಭಾವಗೀತೆಯು ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ. ಅಮ್ಮಾ ಅಂದ್ರೆ ಅದೊಂದು ಅದ್ಭುತ ಶಕ್ತಿ. ನಿಸರ್ಗದ ಎಲ್ಲಾ ಶಕ್ತಿಗಳ ಚೇತನ ಎಂದು ಒತ್ತಡ ಚೆಲುಮೆ. ಹುಟ್ಟಿದ ಕ್ಷಣದಿಂದ ಮರಣದವರೆಗೂ ನಮ್ಮೆಲ್ಲ ನೋವು – ನಲಿವುಗಳಿಗೆ ಸದಾ...
ಬೆಳಗುತಿಹ ದಿನಕರನು ಸೆಳೆಯುತಲಿ ಮೇದಿನಿಯ ಮುಳುಗದೆಯೆ ಬಾನಿನಲಿ ನಿಲ್ಲಲಹನೇ| ಬಿಳುಪಾದ ಚಂದಿರನು ಹೊಳೆಯುತಿರೆ ಗಗನದಲಿ ಕಳೆಗುಂದಿ ಸೊರಗುತಲಿ ಬಾಡದಿಹನೇ|| ಬಿರಿಯುತಲಿ ಕಂಗೊಳಿಸಿ ಮೆರೆಯುತಿಹ ಸುಮರಾಜಿ ಬರಿದಾಗಿ ಸಂಜೆಯಲಿ ಮುದುಡದಿಹುದೇ| ಹರಿಯುತಿಹ ಹೊಳೆಯೊಂದು ಸರಿಯುತಿರೆ ಕಡಲೆಡೆಗೆ ಧರೆಯಲ್ಲಿ ತೊಡರುಗಳ ಕಾಣದಿಹುದೇ || ಮುಗಿಲೊಡಲ ಜಲರಾಶಿ ಜಿಗಿಯುತಲಿ ಮಳೆಯಾಗಿ ಯುಗಯುಗದಿ...
ಅದೆಷ್ಟು ಆಯುಧಗಳ ಒಗ್ಗೂಡಿಸುತ್ತಲೆ ಇರುವಿರಿ ನನ್ನ ಅಸ್ತಿತ್ವ ಅಳಿಸಲು ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು ನನ್ನ ಅಸ್ತಿತ್ವ ಅಳಿಸಲು ಪಾವಿತ್ರ್ಯತೆ ಅಂಧಶ್ರದ್ಧೆ ನಂಬಿಕೆಗಳ ಶೃಂಕಲೆ ತೊಡಿಸಿದಿರಿ ಮೈಮನಕ್ಕೆ ನನ್ನ ಅಸ್ತಿತ್ವ ಅಳಿಯಲು ಹಿಂಸೆ ಅತ್ಯಾಚಾರಗಳಗೈದು ದುರ್ಬಲಗೊಳಿಸಿ ಅಬಲೆ ನಾನೆಂದು ನಂಬಿಸಿದಿರಿ ನನ್ನ ಅಸ್ತಿತ್ವ ಅಳಿಸಲು ನ್ಯಾಯ...
ಮಕ್ಕಳು ಸುಂದರವಾಗಿ ಅರಳಿ ನಿಂತಿರೋ ಹೂಗಳಿದ್ದಂತೆ. ಆ ಹೂಗಳಿಗೆ ಯಾವುದೇ ರೀತಿಯ ಘಾಸಿಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರ ಹಾಗು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳನ್ನು ಶಿಸ್ತಾಗಿ ಬೆಳೆಸಬೇಕಾದರೆ ಶಿಕ್ಷೆಯೂ ಒಂದು ಭಾಗ ಎಂದೇ ಪೋಷಕರು ಹಾಗು ಶಿಕ್ಷಕರು ಭಾವಿಸಿಬಿಟ್ಟಿದ್ದಾರೆ. ಅದರಲ್ಲೂ ದೈಹಿಕವಾಗಿ ದಂಡಿಸಿದರಷ್ಟೆ ಮಕ್ಕಳು ನಾವು ಹೇಳಿದ ಹಾಗೆ ಕೇಳುತ್ತಾರೆ, ಬುದ್ಧಿವಂತರಾಗುತ್ತಾರೆ ಎಂದೆಲ್ಲ ಭಾವಿಸಿ ಮಕ್ಕಳಿಗೆ...
ಒಡಲಾಗ ಹೊರಿಯಂತಾ ಭಾರವಿದ್ದರು ಮನಸು ತುಂಬಿ ನಗಾಕಿ ನಮ್ಮವ್ವ ದೇಹದಾಗ ಕಸುವು ಮೆತ್ತಗಾಗಿದ್ದರೂ ದುಡಿದುಣ್ಣಾಕಿ ನಮ್ಮವ್ವ ॥೧॥ ಮಣ್ಣಿಗೂ ಬಣ್ಣ ಕೊಟ್ಟಾಕಿ ನೆಲದ ಹಸಿರಿಗೂ ಜೀವತಂದಾಕಿ ನಮ್ಮವ್ವ ನೆಲವ ಬಗೆದು ಹಿಡಿ ಕಾಳು ಸೇರಿಗಂಜಿಗೆ ಮೈಯ ಮಣಿಸಿ ದುಡಿದಾಕಿ ನಮ್ಮವ್ವ.॥೨॥ ಮಣ್ಣನ್ನೇ ಜೀವದುಸಿರಾಗಿಸಿಕೊಂಡಾಕಿ ಕೋಳಿ ಕೂಗುವಾಗ ಏಳಾಕಿ...
ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ ಒಂದು ರೀತಿಯ ಪ್ರೀತಿ. ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ ಅರ್ಧಂಬರ್ಧ ಕಥೆಗಳು ಕಲಸುಮೇಲೋಗರವಾಗಿ ಒಂದು ಅಲೌಕಿಕ ಆಕರ್ಷಣೆಯಾಗಿ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ...
ನಿಮ್ಮ ಅನಿಸಿಕೆಗಳು…