Daily Archive: April 16, 2020
ಇಲ್ಲದ್ದನ್ನು ಇದೆ ಎಂದು ನಂಬಿಸುವ ಹಟ ಬೇಡ ಭೂತಗನ್ನಡಿ ಹಿಡಿದು ಬಿಂಬಿಸುವ ಹಟ ಬೇಡ ಎದೆಯ ಮಾತುಗಳನ್ನು ನೇರ ಹೇಳೋಣಲ್ಲ ತೋರುಗಾಣಿಕೆಯಲ್ಲಿ ಮೆರೆಯುವ ಹಟ ಬೇಡ ಸಹಜತೆಯಲ್ಲೇ ಚೆಲುವು ಕುಟಿಲತೆಯಲ್ಲೇನಿದೆ ನೈಜತೆಯ ಬಚ್ಚಿಟ್ಟು ನಟಿಸುವ ಹಟ ಬೇಡ ಚಣಕ್ಕೊಂದು ಸಲ ಬಣ್ಣ ಬದಲಿಸುತ್ತದೆ ಲೋಕ ಭಂಡತನವೇ ಬದುಕೆಂದು...
ಸನ್ಮಾನ್ಯರೆ, ಕೆಲವು ಸಲಹೆಗಳು. ಈಗ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾಲ ಕಳೆಯುವುದು, ದಿನ ದೂಡುವುದು ಹೇಗೆನ್ನುವ ಯೋಚನೆ ನಮ್ಮ ನಿಮ್ಮಲ್ಲಿರಬಹುದು. ಒಂದಕ್ಕೂ ಹೆಚ್ಚು ದಶಕದಿಂದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಸಧ್ಯಕ್ಕೆ ಮಾಡಲು ನಿರ್ದಿಷ್ಟ ಕಾರ್ಯಗಳು ಇಲ್ಲದೆ ನಮ್ಮ ಕೈಯನ್ನು ನಾವೇ ಕಟ್ಟಿಹಾಕಿಕೊಳ್ಳಬೇಕಾದ...
– ಅದ್ವಿಕ್, 2 ನೇ ತರಗತಿ ಬೆಂಗಳೂರು +7
ಮಕ್ಕಳಾಟದ ಹಾಗೆ ತಿಳಿಯದಿರು ಚೊಕ್ಕದಲಿ ಸಕ್ಕರೆಯ ತೆರನಾದ ಆಶಯವನಿರಿಸುತಲಿ ಸಿಕ್ಕ ಸಿಕ್ಕಲ್ಲೆಲ್ಲ ಅಡ್ಡಾಡುವಾಸೆಯನು ಬಿಟ್ಟು ಇಕ್ಕು ಕರವನು ಕ್ರಿಮಿಯ ಸೋಂಕು ಬಿಡಿಸಿ. ದಕ್ಕಲಾರದು ಜೀವ ಜೀವನದ ಮಜಲುಗಳು ಹಕ್ಕು ಇಹುದೆನುತ ಪ್ರಜ್ಞೆಯನು ಮರೆಯುತಲಿ ಬೆಕ್ಕು ಮನೆಯೊಳಗೆ ತಾನಿರುವ ರೀತಿಯಲಿರಲಿ ಸಿಕ್ಕುಗೊಳದಿರುವಂತೆ ಜಾಡ್ಯವು ದೇಹವನ್ನು ಕೊಳೆಸಿ ಅಂತರವ ಕಾಯ್ದುಕೊಂಡಿರು...
ನಾಥೂಲಾ ಪಾಸ್ ನಲ್ಲಿ ನಡೆದಾಡುತ್ತಾ.. ಬಾಬಾ ಹರಿಭಜನ್ ಸಿಂಗ್ ಸ್ಮಾರಕದ ವೀಕ್ಷಣೆ ಎಲ್ಲರಲ್ಲೂ ಧನ್ಯತಾ ಭಾವನೆ ಉಂಟು ಮಾಡಿತ್ತು. ಮುಂದೆ, ನಮ್ಮ ಪ್ರವಾಸದಲ್ಲಿ ಅತಿ ಮಹತ್ತರ ಸ್ಥಾನ ಪಡೆದ ತಾಣ..ನಾಥೂಲಾ ಪಾಸ್ ನ ಕಡೆಗೆ ಪಯಣ ಆರಂಭ. ದೇಶದ ಈಶಾನ್ಯ ಭಾಗಲ್ಲಿರುವ ಪ್ರಸಿದ್ಧ ಇಂಡೋ-ಚೀನಾ ಸಂರಕ್ಷಿತ ಗಡಿಯಾಗಿರುವ ಇದು, ಪ್ರಾಚೀನ ಕಾಲದಲ್ಲಿ...
ಬೀದಿಯಲಿ ವಾಹನದ ಸದ್ದಾಗಲೆಲ್ಲ ಬಿಂದೂರಾಯರಿಗೆ ಅತ್ತಲೇ ಗಮನ “ರಾತ್ರಿ ಎಷ್ಟು ಹೊತ್ತಾದ್ರೂ ಸರಿ ವಾಪಸ್ ತಂದುಕೊಡ್ತೀನಿ ಭಾವಾ “ಎಂದಿದ್ದ ಭಾವಮೈದುನ ವರಾಹಮೂರ್ತಿ..ಹತ್ತಾಯ್ತು…. , ಹನ್ನೊಂದಾಯ್ತು…. ಹನ್ನೆರಡೂ ಹೊಡೆದೇಬಿಟ್ಟಿತ್ತಲ್ಲ.! “ಎಷ್ತೊತ್ತು ಎಚ್ಚರಾಗಿರ್ತೀರಿ?ಊಟಮಾಡಿ ಮಲಗಿ ಅವನು ಬಂದಾಗ ನಾನು ಎಚ್ಚರಿಸ್ತೀನಿ.”ಮಡದಿ ಮಹಾಲಕ್ಷಮ್ಮನವರ ಆಗ್ರಹದಲ್ಲಿ ಕಳಕಳಿಯೇ ಹೆಚ್ಚು ಇದ್ದದ್ದು. “ಹನ್ನೆರಡಾಯ್ತೆ ಟೈಮು . ಈಗ ಅದು...
ಮೂಡುದಿಕ್ಕಿಗೆ ಮುಖವ ಮಾಡಿ ಕೇಳಿಕೊಂಡೆ ಕೃಷ್ಣ ಬರಿಯ ಮೋಹವೇನೆ? ನೆಲದ ಬುಡಕೂ ನಯನ ನೂಕಿ ಹುಡುಕಿಹೋದೆ ಕೃಷ್ಣ ಬರಿಯ ದೇಹವೇನೇ? ಮರದ ನೆತ್ತಿಏರಿ ಹೋದೆ ಮನದಏಣಿ ಹಾಕುತ ಮಧುರ ಮನದ ಮುಗ್ಧನಾತ ನಾನೇ ಮರಳು ಗೋಪಿಕೆ? ಹೊನಲ ಹಾದಿ ತಡೆಯಬಹುದೇ ರಾಧೆ ಮನದ ವೇಗವಾ ಕಡಲ ಮೊರೆತತೂಗಬಹುದೇ?...
ನಿನ್ನ ಕಣ್ಣ ಕುಂಚದಲ್ಲಿ ನೂರು ಬಣ್ಣ,ನೂರಾರು ಭಾವ! ನನ್ನ ಮನದ ಭಿತ್ತಿಯಲ್ಲಿ ಮೂಡಿ ನಿಂತ ಏನೋ ಮೋಹ! ಏಕೆ ಕಾಡುವೆ ಕನಸೇ ಹೀಗೇ ಸುಮ್ಮನೆ ಜಾರಿ ಹೋಗಿದೆ ಹರೆಯ ಎಂದೋ ಮೆಲ್ಲನೆ ನೆನಪಿನಾಳದಲ್ಲಿ ಎಲ್ಲೋ ಕವಲು ಒಡೆದ ದಾರಿಯೊಂದು ಮಾಸಿ ಹೋದ ಹೆಜ್ಜೆಗುರುತ ನುಂಗಿ ನಿಂತ ತೀರವೊಂದು...
ನಿಮ್ಮ ಅನಿಸಿಕೆಗಳು…