Monthly Archive: February 2018
. ಖಗೋಳವೆಂಬ ವಿಷಯವೇ ಅಂಥದ್ದು. ಸ್ವಲ್ಪ ಆಸಕ್ತಿ ಬೆಳೆಸಿಕೊಂಡರೆ ಅದು ಮಹಾ ಕುತೂಹಲವಾಗಿ ಬೆಳೆದುಬಿಡುತ್ತದೆ. ನನ್ನ ಬಾಲ್ಯದಲ್ಲಿ ರಾತ್ರಿ ಆಕಾಶ ನೋಡುವುದೆಂದರೆ ನನಗೆ ಬಹಳ ಅಚ್ಚುಮೆಚ್ಚಿನ ವಿಷಯವಾಗಿತ್ತು. ಅನಂತಕೋಟಿ ನಕ್ಷತ್ರಗಳು ಮಿನುಗುವ ಆಕಾಶ, ಬೆಳ್ಳಿ ಬೆಳಕಿನ ಚಂದಿರ ಹೊಳೆವ ಆಕಾಶ ನೋಡಿ ನಾನು ಮಂತ್ರಮುಗ್ಧಳಾಗಿ ನಿಂತುಬಿಡುತ್ತಿದ್ದೆ. ನನ್ನ ವಿವಾಹದ...
1829 ನೇ ಇಸವಿ. ಜಗತ್ತಿನ ಒಬ್ಬ ಶ್ರೇಷ್ಠ ರಸಾಯನ ಶಾಸ್ತ್ರಜ್ಞರಾದ ಸರ್ ಹಂಫ್ರಿ ಡೇವಿಯವರು ಮರಣಶಯ್ಯೆಯಲ್ಲಿದ್ದರು. ಸುತ್ತಲೂ ಜನ ಸೇರಿದ್ದರು. ಅವರಲ್ಲೊಬ್ಬರು ಕೇಳಿದರು, “ಮಿ. ಡೇವಿಯವರೇ, ತಮಗನಿಸುವಂತೆ ನಿಮ್ಮ ಅತ್ಯಂತ ದೊಡ್ಡ ಆವಿಷ್ಕಾರ ಯಾವುದು?”. ಡೇವಿ ಒಂದು ಕ್ಷಣದ ಮೌನಮುರಿದು, ಮೆಲ್ಲಗೆ ಆದರೆ ಸ್ಪಷ್ಟವಾಗಿ ಉತ್ತರಿಸಿದರು:...
ಕಟ್ರಾ ರೈಲ್ವೇ ಸ್ಟೇಷನ್ – ಯಾತ್ರಾರ್ಥಿಗಳ ನೋಂದಣಿ ಅಂತೂ ಬರೋಬರಿ ಏಳು ಗಂಟೆ ತಡವಾಗಿ. ಮಧ್ಯಾಹ್ನ 1230 ಗಂಟೆಗೆ ಕಟ್ರಾ ತಲಪಿತು. ಬೆಟ್ಟಗುಡ್ಡಗಳ ನಡುವೆ ಇರುವ ಕಟ್ರಾ ರೈಲ್ವೇಸ್ಟೇಷನ್ ಬಹಳ ವಿಶಾಲವಾಗಿದ್ದು ಆಧುನಿಕ ಸವಲತ್ತುಗಳನ್ನು ಹೊಂದಿದೆ. ಪ್ಲಾಟ್ ಫಾರ್ಮ್ ನಲ್ಲಿ, ವಿಶ್ರಾಂತಿ ಕೋಣೆಗಳಲ್ಲಿ ಜನ ಅಲ್ಲಲ್ಲಿ ತೂಕಡಿಸುತ್ತಲೋ...
ಗರುಡಾ, ಗಗನದೆ ತೇಲೊ ಗರುಡ ನಿನ್ನ ಕೊರಳಾ ಬಿಳುಪದೆಷ್ಟು ಗಾಢ ! ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು ಹಗುರ ನೌಕೆ ನೀ ಗಗನದ ಬಯಲಲ್ಲು || ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ...
ಬರ್ನಾಡ್ ಟ್ರೆವಿಸನ್ ಆಧುನಿಕ ವಿಜ್ಞಾನವು ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ. ಯಾವುದೇ ಒಂದು ರಾಜವಂಶದ ಯಾ ಚಕ್ರವರ್ತಿಯ ಕತೆಯಷ್ಟೇ ವಿಜ್ಞಾನದ ಚರಿತ್ರೆ ಕುತೂಹಲದಾಯಕವಾಗಿದೆ ಎಂದರೆ ಅತಿಶೋಯಕ್ತಿಯಲ್ಲ. ಆಧುನಿಕ ವಿಜ್ಞಾನದ ಜನ್ಮ ಸುಮಾರಾಗಿ 17 ನೇ ಶತಮಾನದ ಆದಿ ಭಾಗದಲ್ಲಿ ಆಯಿತೆನ್ನಬಹುದು. ಅದಕ್ಕಿಂತ ಮೊದಲಿನ ವಿಜ್ಞಾನ,...
ಮಳೆಯಂತೆ ಬೀಳುವ ಕನಸುಗಳ ಅರ್ಥವೇನು ಹೇಳು ಬಣ್ಣ ತಳೆದು ನಗುವ ಮುಗಿಲುಗಳ ಅರ್ಥವೇನು ಹೇಳು ಬನದುದ್ದ ಕುಪ್ಪಳಿಸಿ ಕೀಚೆಂದಿದೆ ಹೆಸರಿಲ್ಲದ ಹಕ್ಕಿ ನೆನಪುಗಳಾಚೆಗೆ ನೆಗೆವ ರೆಕ್ಕೆಗಳ ಅರ್ಥವೇನು ಹೇಳು ಬೇಸಗೆಯಲ್ಲೂ ಕಾಮನ ಬಿಲ್ಲೆ! ತುಂಬಿ ಬಂತು ಮನಸು ಮಾತಿಗೆ ದಕ್ಕದ ನೂರು ಸ್ನೇಹಗಳ ಅರ್ಥವೇನು ಹೇಳು ಕಾರ್ಯ-ಕಾರಣ...
ದಿಲ್ಲಿಯಿಂದ ‘ಕಟ್ರಾ’ ನಗರದತ್ತ ನಮ್ಮ ಮುಂದಿನ ಪಯಣ ದಿಲ್ಲಿಯಿಂದ ಜಮ್ಮು ಕಾಶ್ಮೀರದ ‘ಕಟ್ರಾ’ನಗರಕ್ಕೆ. ಸಂಜೆ 0530 ಗಂಟೆಗೆ ದಿಲ್ಲಿಯಿಂದ ಹೊರಡುವ ಶ್ರೀ ಶಕ್ತಿ ಎಕ್ಸ್ ಪ್ರೆಸ್ ರೈಲು ಗಾಡಿಯನ್ನು ಹತ್ತಿ ಪ್ರಯಾಣಿಸಿದೆವು. ಸುಮಾರು 70 ಕಿ.ಮೀ ಚಲಿಸಿದ ರೈಲು ಇದ್ದಕ್ಕಿದ್ದಂತೆ ಒಂದು ಗಂಟೆಗೂ ಹೆಚ್ಚು ಕಾಲ ತಟಸ್ಥವಾಯಿತು....
ಮುಂಬೈಯ ಅಂತರರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗು ಹವ್ಯಾಸಿ ರಂಗ ತಂಡ ಧ್ವನಿ ಪ್ರತಿಷ್ಠಾನಕ್ಕೆ ಈಗ 32 ರ ಹರೆಯ.ಇತ್ತೀಚಿಗೆ ಇದು ತನ್ನ ವಾರ್ಷಿಕೋತ್ಸವವನ್ನು ದುಬೈಯ ಎಮಿರೇಟ್ಸ್ ಥಿಯೇಟರ್ ನಲ್ಲಿ ಶುಕ್ರವಾರ ದಿನಾಂಕ 19 ಜನವರಿ 2018ರಂದು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಧ್ವನಿ ಪ್ರತಿಷ್ಠಾನ ಪ್ರತಿವರ್ಷ ನೀಡುವ ‘ಧ್ವನಿ ಶ್ರೀರಂಗ’ ಅಂತಾರಾಷ್ಟ್ರಿಯ ರಂಗ ಪ್ರಶಸ್ತಿಯನ್ನು ಖ್ಯಾತ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಶ್ರೀಮತಿ...
ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಹಲಸಿನ ಮರಗಳಲ್ಲಿ ಎಳೆ ಹಲಸಿನಕಾಯಿಗಳು ಮೂಡುತ್ತವೆ. ಈ ಹಂತದಲ್ಲಿ ಇದನ್ನು ‘ಗುಜ್ಜೆ’ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ವಿವಿಧ ಅಡುಗೆಗಳು ಅಚ್ಚುಮೆಚ್ಚು. ಎಳೆ ಹಲಸಿನಕಾಯಿ/ಗುಜ್ಜೆಯ ಅಡುಗೆಯ ಸವಿ ಹಾಗೂ ಅದನ್ನು ಹೆಚ್ಚಲು ಬೇಕಾದ ಕುಶಲತೆ –...
ನಿಮ್ಮ ಅನಿಸಿಕೆಗಳು…