Monthly Archive: June 2017
ನಿನ್ನ ನೆನಪುಗಳ ಕೆಂಡ ಹಾಯುತ್ತಿರುವೆ ಅಗ್ನಿದಿವ್ಯದ ಆಚೆ ಇರುವುದೇನೆ ? ಇರುವೆಯೇನೇ ? ** ನಿನ್ನ ನೆನಪನ್ನೆಲ್ಲ ಗುಡಿಸಿ ಹಾಕಿದ್ದೇನೆ ಈ ಮರಳ ಕಣ ಮಾತ್ರ ಹೀಗೆ ಕಣ್ಣಲೊತ್ತಿದೆ.. ** ಭಾಗ್ಯಶಾಲಿ ನೀನು ಎದೆಯಲ್ಲಿ ಮನೆ ಮಾಡಿರುವೆ. ನಾನೋ ಅನಾಥ ತಾವಿಲ್ಲದೇ ಹೀಗೆ ಅಲೆಯುತ್ತಿರುವೆ.. ...
ದಿಬ್ಬಣದ ಸಾಲಿನಂತೆ ಸಾಗುತಿದೆ ನೆನಪುಗಳು ಮನವೆಂಬ ಪುಟದಲ್ಲಿ ಅಚ್ಚಳಿಯದ ನೆನಪುಗಳು. ಮಾತಾಗದ ಮಾತುಗಳು ಹೇಳಲಾಗದ ಮಾತುಗಳು ಮೌನದೊಳಗೆ ಮಾತಾಗಿ ಮೌನಕೂ ಭಾರವಾಗುವ ನೂರೆಂಟು ನೆನಪುಗಳು. ಏಕಾಂತ ಬಯಸಿ ಬಂದರಿಲ್ಲಿ ಸಾಗರದ ಅಲೆಯಂತೆ ಸುಳಿದೇಳುತಿರುವ ನೆನಪು ಮತ್ತೆ ಕಾಡುತಿದೆ ಮನವ. ಹೊರಗೆಡವಲಾರದೆ ಒಳಗಿಳಿಸಿ ಅರಗಿಸಲಾಗದೆ ಕ್ಷಣಕ್ಷಣವು ರಣರಂಗವಾಗುತಿದೆ ಮನದಂಗಳವು....
ಒಂದನೆ ತರಗತಿಯಲ್ಲಿ ಅ-ಅರಸ, ಆ- ಆನೆ….ಹೀಗೆ ಮುಂದುವರಿದು ಉ-ಉಗಿಬಂಡಿ ಎಂದು ಉರು ಹಾಕಿಯಾಗಿದೆ. ಆದರೆ ಈಗಿನ ಲೊಕೊಮೋಟಿವ್ ಚಾಲಿತ ಟ್ರೈನ್ ಗಳ ಮಧ್ಯೆ ನೀರಿನ ಉಗಿಯಿಂದ ಚಲಿಸುವ ‘ಉಗಿಬಂಡಿ’ ನೋಡಲು ಸಿಗುವುದು ಬಲು ಅಪರೂಪ. ಊಟಿ ಮತ್ತು ಮೆಟ್ಟುಪಾಳ್ಯಂ ಮಧ್ಯೆ ಒಂದು ಉಗಿಬಂಡಿ ಓಡುತ್ತದೆ. ಇದು ಊಟಿಯಿಂದ...
ಇವತ್ತು ಬೆಳಗ್ಗೆ ಮನೆಯಿಂದ ಎರಡು ಕಿಲೋಮೀಟರ್ ದೂರವಿರುವ ಮೆಟ್ರೋ ಸ್ಟೇಷನ್ ವರೆಗೆ ಹೋಗುತ್ತಿದ್ದಾಗ ನನ್ನ ದ್ವಿಚಕ್ರ ಗಾಡಿಯ ಮುಂದೆ ಹೋಗುತ್ತಿದ್ದ, ಥಳಥಳನೆ ಹೊಳೆಯುತ್ತಿದ್ದ ಕಡುಗಪ್ಪು ಬಣ್ಣದ ಹೊಸ “ಡಸ್ಟರ್” ಕಾರೊಂದು ಗಮನ ಸೆಳೆಯಿತು. ಶಾಲೆಯೊಂದರ ಮುಂದೆ ಕಾರು ನಿಲ್ಲಿಸಿ ಅದರೊಳಗಿನಿಂದ ಮಗುವೊಂದನ್ನು ಹೆತ್ತವರಿಬ್ಬರೂ ಇಳಿಸುವುದು ಕಂಡು ಒಮ್ಮೆ...
*ಕ*ಮಲದಳಗಳ ಮೇಲೆ ನಡೆಯುತ *ಕಾ*ವ್ಯದೇವಿಯು ಬಂದಳು. *ಕಿ*ರುನಗೆಯ ಪನ್ನೀರ ಸೂಸುತ *ಕೀ*ರವಾಣಿಯಲುಲಿದಳು. *ಕು*ಹೂ ಎನ್ನುತ ಮಧುರಪಿಕಗಳು *ಕೂ*ಗೆ ಸುಳಿಯುತ ಬಂದಳು. *ಕೃ*ಪೆಯದೋರುತ ಕವಿಮನಗಳಿಗೆ *ಕೆ*ನೆಯ ಹಾಲಂತೊಲಿದಳು. *ಕೇ*ದಗೆಯ ಪರಿಮಳದ ವನದಿಂ *ಕೈ*ಯ ಬೀಸುತ ಬಂದಳು. *ಕೊ*ರಳ ಪದಕದ ಹಾರ ಮಿಂಚಲು *ಕೋ*ಮಲಾಂಗಿಯು ನಲಿದಳು. *ಕೌ*ತುಕದಿ ನೋಡುತಿರೆ ಅವಳನು...
ಕೈ ನಡುಗುತಿದ್ದರು ಸಕ್ಕರೆ ಬದಲು ಅಕ್ಕರೆ ತುಂಬಿ ಅಜ್ಜಿ ಮಾಡಿಕೊಡುತಿದ್ದ ಕರದಂಟು ನೆನೆದು ಈಗಲೂ ಕನಸೊಳಗೆ ಬಾಯಿ ಚಪ್ಪರಿಸುತ್ತೇನೆ ಅಜ್ಜ ಅವನಿಗೊಂದು ಕನಸು ನನಗೆ ರೇಶಿಮೆ ಅಂಗಿ ತೊಡಿಸಿ ಕಣ್ತುಂಬಿಕೊಳ್ಳುವುದು ಕಾಲ ಕೂಡಿ ಬರಲಿಲ್ಲ ಕರುಣೆ ತುಂಬಿದ ಕರುಳು ಅದು ಗುಡಿ ಕಟ್ಟಿಸಿ ಅವರನ್ನು ದೇವರಾಗಿಸಿದ್ದಾರೆ ನಾ...
ಚಳಿಗಾಲ, ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ಗಡಿಯಾರದೊಂದಿಗೆ ಮಹಾಯುದ್ಧವೇ ನಡೆದುಬಿಡುತ್ತದೆ. ಹಾಗೂ ಹೀಗೂ ಕಷ್ಟಪಟ್ಟು ಗಡಿಯಾರ, ನಿನಗೇ ಜೈ ಸೋಲೊಪ್ಪಿಕೊಂಡದ್ದಾಯಿತೆಂದು ಕಣ್ಣು ತೆರೆದರೆ, ರೆಪ್ಪೆಯೊಳಗೆ ಮರಳುಹಾಕಿ ತಿಕ್ಕಿದಂತೆ ಹಿಂಸೆ. ಸರಿ, ಸಾಹಸ ಮಾಡಿ ಕಣ್ಣು ತೆರಿದದ್ದಾಯಿತೆನ್ನುವಷ್ಟರಲ್ಲಿ ಇನ್ನೊಂದು ಭೀಕರ ಸಮಸ್ಯೆ! ಕಾಲಿಗೆ ದೊಡ್ಡದೊಂದು ಕಬ್ಬಿಣದ ಗುಂಡು ಕಟ್ಟಿಕೊಂಡಂತೆ, ಎದ್ದು...
ಒಂದು ಸುಂದರ ಮುಂಜಾನೆ. ಈಗಷ್ಟೇ ಸೂರ್ಯ ನಿದ್ದೆಯಿಂದ ಎದ್ದಹಾಗಿತ್ತು. ಹೆಲ್ಮೆಟ್, ರೈಡಿಂಗ್ ಗಿಯರ್ ಗಳನ್ನು ಕಳಚುತ್ತಾ ಸುತ್ತಲೂ ಕಣ್ಣು ಹಾಯಿಸಿದೆ. ವಾವ್ ಅಂದಿತು ಮನಸ್ಸು. ಅದೇನೂ ಸದ್ದು ಮಾಡುತಿದ್ದ ಹೊಟ್ಟೆಯೂ ಥಟ್ಟಂತ ಸುಮ್ಮನಾಗಿ ಬಿಟ್ಟಿತ್ತು. ಹೊಸದಾಗಿ ಹಾಕಿರುವ ತಂತಿ ಬೇಲಿಯನ್ನು ದಾಟಿ ಮುಂದೆ ಸಾಗಿದವು ಕಾಲುಗಳು. ಕಣ್ಣಮುಂದೆ...
ಮುದ್ದಾದ ಕಂದನೇ ನಿನ್ನಂತೆ ಚೆಲುವಿ ಈ ಮುದ್ದಾದ ಕರುವು. ಅಚ್ಚ ಬಿಳುಪಿನ ಮಲ್ಲಿಗೆಯಂತೆ ಕಂಪ ಬೀರುವ ಕರುವಿದು ನಿನ್ನ ನಿತ್ಯದೊಡನಾಡಿಯೇ? ಅವಳ ಪಾಲಿನ ಹಾಲಿನ ಕುಡಿದು ನೀ ಬೆಳೆಯುತಿರಲು ಕೊಡುವೆಯೇನು ಅವಳಿಗೂ ಅಮ್ಮ ನಿನಗಿತ್ತ ತಿನಿಸಿನಲೊಂದು ಪಾಲನ್ನು? ಅಮ್ಮನೆದೆಹಾಲು ಕುಡಿದ ಹರುಷದಿ ಕರುವು ಅಂಗಳದಿ ಅತ್ತಿತ್ತ...
ಉದುರಿದ ಪಕಳೆಗಳಲ್ಲಿ ನಿನ್ನ ಅರಸುವುದು ಹೇಗೆ ವಿಷಮರೇಖೆಗಳಲ್ಲಿ ಬಣ್ಣ ತುಂಬುವುದು ಹೇಗೆ ಕೈಹಿಡಿದು ನಡೆವಾಗ ಬಡಿದು ಬರಸಿಡಿಲು ಸೀಳಿದ ದಾರಿಗಳ ಮತ್ತೆ ಬೆಸೆಯುವುದು ಹೇಗೆ ಸಾಗಿದ ಹಾದಿಗುಂಟ ಬೆಳೆದ ಗೋರಿಯ ಸಾಲು ಸತ್ತ ಕನಸುಗಳ ನಡುವೆ ನಿನ್ನ ತಲುಪುವುದು ಹೇಗೆ ಜಾರಿ ಬಿದ್ದಿದೆ ದೀಪ ಒಡೆದು ಹೋಗಿದೆ...
ನಿಮ್ಮ ಅನಿಸಿಕೆಗಳು…