ಕಾವ್ಯ ಭಾಗವತ 24 : ಜಯ ವಿಜಯ

Share Button

24. ಸಪ್ತಮ ಸ್ಕಂದ – ಅಧ್ಯಾಯ – 1
ಜಯ ವಿಜಯ


ಜಯವಿಜಯರೆಂಬ
ವಿಷ್ಣುವಿನ ವಾಸಸ್ಥಾನ ವೈಕುಂಠ
ದ್ವಾರಪಾಲಕರು
ನಾಲ್ಕು ಬ್ರಹ್ಮ ಮಾನಸಪುತ್ರರು
ಬಾಲವಟುಗಳಂತೆ ದಿಗಂಬರ
ವೇಷಧಾರಿಗಳಾಗಿ
ವಿಷ್ಣು ಸಂದರ್ಶನ ಬಯಸೆ
ವೈಕುಂಠದ್ವಾರ ಪ್ರವೇಶಿಸದಂತೆ
ತಡೆದರೆಂಬ ಕಾರಣದಿಂ
ಕೋಪಿಸಿ
ರಾಕ್ಷಸಯೋನಿಯಲಿ ಜನಿಸಿರಿ
ಎಂದು ಶಾಪ ಪೀಡಿತರಾಗಿ

ಪ್ರಥಮ ಜನ್ಮದಲಿ
ದಿತಿಯ ಗರ್ಭದಲಿ
ಹಿರಣ್ಯಾಕ್ಷ, ಹಿರಣ್ಯಕಶ್ಯಪರಾಗಿ
ದ್ವಿತೀಯ ಜನ್ಮದಲಿ
ರಾವಣ, ಕುಂಭಕರ್ಣರಾಗಿ
ತೃತೀಯ ಜನ್ಮದಲಿ
ಶಿಶುಪಾಲ, ದಂತವಕ್ರರಾಗಿ
ಹರಿದ್ವೇಷಿಗಳಾಗಿ, ಹರಿಯ
ವರಾಹ, ನರಸಿಂಹ, ಶ್ರೀರಾಮ
ಶ್ರೀಕೃಷ್ಣನವತಾರದಲಿ
ಅವರಿಂದ ಹತರಾಗಿ
ಸುಲಭದಿ ಮೋಕ್ಷಪಡೆದು
ಹರಿಸಾನಿಧ್ಯ ಸೇರಿದ
ಮಾಹಾ ಹರಿಭಕ್ತರು

ಹರಿಯ ಪೂಜಿಸಿ
ಹತ್ತಾರು ಜನುಮದ ನಂತರದಿ
ಹರಿಯ ಸೇರುವ ಬದಲು
ಮೂರೇ ಜನ್ಮದಲಿ
ಹರಿದ್ವೇಷಿಗಳಾಗಿ
ಅವನಿಂದಲೇ ವಧಿಸಲ್ಪಟ್ಟು
ಬ್ರಹ್ಮಮಾನಸ ಪುತ್ರರ
ಶಾಪದಿಂ ವಿಮುಕ್ತಿ ಪಡೆದ
ಆದರ್ಶ ವಿಷ್ಣು ಭಕ್ತರು
ಜಯವಿಜಯರು

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41586

(ಮುಂದುವರಿಯುವುದು)
-ಎಂ. ಆರ್.‌ ಆನಂದ, ಮೈಸೂರು

5 Responses

  1. ಪದ್ಮಾ ಆನಂದ್ says:

    ಆದರ್ಶ ವಿಷ್ಣು ಭಕ್ರರಾದ ಜಯವಿಜಯರ ಆಸಕ್ತಿದಾಯಕ ಭಾಗವತ ಕಥೆಯ ಕಾವ್ಯರೂಪ ಚೆನ್ನಾಗಿ ಮೂಡಿ ಬಂದಿದೆ.

  2. ಕಾವ್ಯ ಭಾಗವತದಲ್ಲಿ ಜಯ ವಿಜಯರ ಪ್ರಸಂಗ ಸರಳ ಸುಂದರ ವಾಗಿ ಮೂಡಿಬಂದಿದೆ ಸಾರ್

  3. ಶಂಕರಿ ಶರ್ಮ says:

    ಸುದೀರ್ಘ ಪೌರಾಣಿಕ ಕಥೆಯನ್ನು ಸರಳ, ಸುಂದರ ಕಾವ್ಯ ಭಾಗವತ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ ರೀತಿ ಅನನ್ಯ! ಧನ್ಯವಾದಗಳು ಸರ್.

  4. ನಯನ ಬಜಕೂಡ್ಲು says:

    ನೈಸ್

  5. Hema Mala says:

    ಜಯ-ವಿಜಯರೆಂಬ ದ್ವಾರಪಾಲಕರ ಶಿಲ್ಪಗಳನ್ನು ಹೆಚ್ಚಿನ ದೇವಾಲಯಗಳಲ್ಲಿ ಕಾಣುತ್ತೇವೆ. ಅವರ ಕಥೆಯನ್ನು ಸೊಗಸಾಗಿ , ಸರಳ ಪದಗಳಲ್ಲಿ ಕಟ್ಟಿ ಕೊಟ್ಟಿದ್ದೀರಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: