Category: ಕವಿ ಕೆ.ಎಸ್.ನ ನೆನಪು
ಕನ್ನಡದ ಬಹುಮುಖ ಪ್ರತಿಭಾವಂತ ಕವಿ, ಸಾಹಿತಿ, ವಿಮರ್ಶಕ, ಚಲನಚಿತ್ರ ಕರ್ಮಿ ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರೊಡನೆ ನಮ್ಮ ತಂದೆಯವರು ಒಂದು ಮಧುರವಾದ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ವೃತ್ತಿಜೀವನ ಹಾಗೂ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಹಲವೊಮ್ಮೆ ತಮ್ಮೊಡನೆ ಉದಯೋನ್ಮುಖ ಪ್ರತಿಭಾವಂತರನ್ನು ಜತೆಗೆ ಕರೆತಂದು ನಮ್ಮ...
ನಮ್ಮ ತಂದೆಯವರು ನಿಸಾರ್ ಅಹಮದ್ ಅವರೊಡನೆ ಒಂದು ವಿಶಿಷ್ಟವಾದ ಸ್ನೇಹಸಂಬಂಧವನ್ನು ಹೊಂದಿದ್ದರು.ಇಬ್ಬರೂ ಯಾವುದೇ ಪಂಥವಾದ,ಗುಂಪುಗಾರಿಕೆಗಳಿಂದ ದೂರವಾದ, ಆದರೆ ಭಿನ್ನವಾದ ಕಾವ್ಯಮಾರ್ಗ ಅನುಸರಿಸಿದರು.ಅಭಿಮಾನಿಗಳು ಅಥವಾ ಕಾವ್ಯಾಸ್ವಾದಕರು ಇದ್ದರೇ ಹೊರತು ಆರಾಧಕರಿರಲಿಲ್ಲ, ಅವರದೆಂದೇ ಆದ ವಿಶೇಷ ವಿಮರ್ಶಾಗಣವಿರಲಿಲ್ಲ. ಮತ್ತೊಂದು ವಿಷಯವೆಂದರೆ ನಿಸಾರರ ಸ್ನೇಹಜಾಲ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೂ ಬೆಸೆದುಕೊಂಡಿದ್ದುದು. ನಾನು...
ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು. 1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ...
ನವ್ಯಕಾವ್ಯ ಪ್ರವರ್ತಕ ಕವಿ ಎನಿಸಿದ್ದ ಗೋಪಾಲಕೃಷ್ಣ ಅಡಿಗ ಹಾಗೂ ನಮ್ಮ ತಂದೆ ಏಕವಚನದ ಸಲುಗೆಯ ಸ್ನೇಹಿತರು. ಭೇಟಿ ಆದಾಗಲೆಲ್ಲ ಅಡಿಗರು “ಏನಯ್ಯ ನರಸಿಂಹ, ಹೇಗಿದ್ದೀಯ?” ಎಂದು ಕುಶಲ ವಿಚಾರಿಸಿದರೆ ನಮ್ಮ ತಂದೆಯವರು “ಬಾರಯ್ಯ ಅಡಿಗ,ತುಂಬಾ ದಿನ ಆಯ್ತು ನೋಡಿ” ಎಂದು ಉತ್ತರಿಸುತ್ತಿದ್ದರು.ಇಬ್ಬರೂ ಭೇಟಿಯಾದಾಗ ಸಾಹಿತ್ಯದ ಬಗ್ಗೆ ಮತ್ತು...
1982ರಲ್ಲಿ ಮೈಸೂರ ಮಲ್ಲಿಗೆಯ ಕವನಗಳು ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಗಲು ಆರಂಭವಾಗಿ ನಲವತ್ತು ವರುಷವಾಯಿತೆಂದು ನಮ್ಮ ತಂದೆಯವರು ನಾಡಿನ ಎಲ್ಲ ಪತ್ರಿಕೆಗಳಿಗೆ ಪತ್ರ ಒಂದನ್ನು ಬರೆಯುವುದರ ಮೂಲಕ ಈ ಸವಿಸಂಭ್ರಮವನ್ನು ಹಂಚಿಕೊಂಡು, ಎಲ್ಲ ಕಾವ್ಯಾಸಕ್ತರನ್ನು, ಪ್ರಕಟಣೆ ಮಾಡಿದ ಮಹಾರಾಜ ಕಾಲೇಜು ಕರ್ಣಾಟಕ ಸಂಘವನ್ನು ಹಾಗೂ ಕೃತಿಗೆ ಕಾರಣಕರ್ತರಾದ ಕೃಷ್ಣಶಾಸ್ತ್ರಿಗಳನ್ನು ಸ್ಮರಿಸಿದ್ದರು. ಪತ್ರಿಕೆಗಳಲ್ಲಿ ಪತ್ರ...
ನಮ್ಮ ತಂದೆಯವರು ವರಕವಿ ಬೇಂದ್ರೆಯವರೊಡನೆಯೂ ಗೌರವಮಿಶ್ರಿತ ಸ್ನೇಹಭಾವವನ್ನು ಹೊಂದಿದ್ದರು.ಬೇಂದ್ರೆಯವರು ಕೆ ಎಸ್ ನ ರ ಅಭಿನಂದನ ಗ್ರಂಥ ಚಂದನಕ್ಕೆ ಒಂದು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ಹಾರೈಸಿದ್ದರು. ನಮ್ಮಣ್ಣ ಹರಿಹರ 1971ರಿಂದ 1978ರವರೆಗೆ ಧಾರವಾಡದಲ್ಲಿ, ಕರ್ಣಾಟಕ ವಿಶ್ವವಿದ್ಯಾಲಯದ ಪ್ರಕಟಣ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ,ನಮ್ಮ ತಂದೆ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುವ ಪ್ರಸಂಗ ಬರುತ್ತಿತ್ತು.ಆಗೆಲ್ಲ ತಪ್ಪದೆ ಚನ್ನವೀರ ಕಣವಿಯವರ ಜತೆಯೋ ,ಎನ್ಕೆ...
ಪುತಿನ ಹಾಗೂ ಕೆ ಎಸ್ ನ ;ಭಿನ್ನಕಾವ್ಯಮಾರ್ಗದ ಆತ್ಮೀಯರು ಭಿನ್ನಕಾವ್ಯಮಾರ್ಗವನ್ನು ಅನುಸರಿಸುತ್ತಿದ್ದರೂ ನಮ್ಮ ತಂದೆ ಹಾಗೂ ಪುತಿನ ಆತ್ಮೀಯ ಸ್ನೇಹವನ್ನು ಹೊಂದಿದ್ದರು.ಇಬ್ಬರಲ್ಲೂ ಒಂದು ವಿಷಯದಲ್ಲಿ ಸಾಮ್ಯತೆ ಇತ್ತು.ಅದೆಂದರೆ ಇಬ್ಬರೂ ಅಕಡೆಮಿಕ್ ವಲಯದಿಂದಾಚೆ ರೂಪುಗೊಂಡ ಕವಿಗಳು.ಪುತಿನರವರು ಸೈನ್ಯದಲ್ಲಿ ಉದ್ಯೋಗದಲ್ಲಿದ್ದರೆ ,ನಮ್ಮತಂದೆ ಹೌಸಿಂಗ್ ಬೋರ್ಡ್ ನಲ್ಲಿ ಇದ್ದವರು. ಇಬ್ಬರೂ ಸಮಾರಂಭಗಳಲ್ಲಿ ಅಲ್ಲದೆ ಖಾಸಗಿಯಾಗಿ ಅಪರರೂಪಕ್ಕಾದರೂ ಭೇಟಿಯಾಗುತ್ತಿದ್ದರು.ನಾವು...
ವಿಸೀ ಹಾಗೂ ಕೆ ಎಸ್ ನ ಕೃಷ್ಣಾರ್ಜುನ ಬಾಂಧವ್ಯ. ಕಾವ್ಯಲೋಕದ ಸಂದರ್ಭದಲ್ಲಿ ಕೆ ಎಸ್ ನ ಹಾಗೂ ವಿಸೀ ಅವರದ್ದು ಕೃಷ್ಣಾರ್ಜುನ ಬಾಂಧವ್ಯ.ಅದರಿಂದ ಆಚೆಗೂ ಪೂಜ್ಯ ವಿಸೀಯವರು ನಮ್ಮ ತಂದೆಯವರಿಗೆ ಆಪತ್ಬಾಂಧವರೇ.ಹಣಕಾಸು ಸಹಾಯ ,ಸಾಂತ್ವನ,ಬೆಂಬಲ ಹೀಗೆ ಹಲವಾರು ರೂಪಗಳಲ್ಲಿ ವಿಸೀಯವರು ನೆರವಾಗುತ್ತಿದ್ದರು. ವಿಸೀಯವರು ಮೈಸೂರಿನಲ್ಲಿದ್ದಾಗ ಹಾಗೂ ಬೆಂಗಳೂರಿದ್ದಾಗ ಕೆ ಎಸ್...
‘ತೆರೆದ ಬಾಗಿಲು’ ಕವನ ಸಂಕಲನ;ನಿಘಂಟು ಬ್ರಹ್ಮ ಜಿ ವಿ ಅವರ ಪಾತ್ರ ನಮ್ಮ ತಂದೆಯವರು 1960ರಲ್ಲಿ ಪ್ರಕಟವಾದ ಮನೆಯಿಂದ ಮನೆಗೆ ನಂತರ 1977ರಲ್ಲಿ ಪ್ರಕಟವಾದ ‘ತೆರೆದ ಬಾಗಿಲು’ ವರೆಗೆ ಯಾವುದೇ ಕೃತಿಯನ್ನು ಹೊರತಂದಿರಲಿಲ್ಲ.ಅವರು ಈ ವಿರಾಮವನ್ನು ಜನಜೀವನವನ್ನೂ,ವಿದ್ಯಮಾನಗಳನ್ನೂ ಗಮನಿಸುವ/ಗ್ರಹಿಸುವ ಅವಧಿ ಎಂದು ಭಾವಿಸಿದ್ದರು.ಅದು ನವ್ಯಕಾವ್ಯದ ಏರುಕಾಲವೆಂದು ಪರಿಗಣಿತವಾಗಿತ್ತು ಎಂಬುದು ವಾಸ್ತವ.ನಮ್ಮ ತಂದೆಯವರಂತೆ...
*ಅರಳಿತು ಮೈಸೂರ ಮಲ್ಲಿಗೆ. ಇದು ಕೃಷ್ಣಶಾಸ್ತ್ರಿಗಳ ಕೃಪೆ* “ಅವತ್ತು ಕೃಷ್ಣಶಾಸ್ತ್ರಿಗಳ ಊಟದ ಏರ್ಪಾಡು ಬಹಳ ಜೋರಾಗಿತ್ತು.ಮಹಾರಾಜಾ ಕಾಲೇಜು ಅಂಗಳದಲ್ಲಿ ನೆಲದ ಮೇಲೆ ಬಾಳೆ ಎಲೆ,ಪ್ರತಿ ಎಲೆ ಮುಂದೂ ರಂಗೋಲೆ.ಚಿರೋಟಿ,ಗಸಗಸೆ ಪಾಯಸ ಮಾಡಿಸಿದ್ದರು.ಸ್ವತಃ ಕೃಷ್ಣಶಾಸ್ತ್ರಿಗಳೇ ಪ್ರತಿಯೊಬ್ಬರಿಗೂ ಚಿರೋಟಿ ಬಡಿಸ್ತಾ ಇದ್ರು…..” ಇದು ಸಾಮಾನ್ಯವಾಗಿ ನಮ್ಮ ಅಪ್ಪ ಅಪರೂಪಕ್ಕೆ ಬಂದ ನೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದ ಸವಿನೆನಪುಗಳು. ಅಡುಗೆಮನೆಯಲ್ಲಿರುತ್ತಿದ್ದ ಅಮ್ಮ...
ನಿಮ್ಮ ಅನಿಸಿಕೆಗಳು…