ಕೆ ಎಸ್ ನ ನೆನಪು 8 : ರಾಷ್ಟ್ರಕವಿ ಜಿ ಎಸ್ ಎಸ್ ಹಾಗೂ ಕೆ ಎಸ್ ನ

Share Button

ಕವಿ ಕೆ ಎಸ್ ನ

ನಮ್ಮ ತಂದೆಯವರು ಆಗಾಗ್ಗೆ ನೆನೆಯುತ್ತಿದ್ದ  ಕಾವ್ಯಮಿತ್ರರೆಂದರೆ ರಾಷ್ಟ್ರಕವಿ ಜಿ ಎಸ್ ಎಸ್ ಅವರು. ಜಿ ಎಸ್ ಎಸ್ ನಮ್ಮ ತಂದೆಗಿಂತ ಹನ್ನೊಂದು ವರುಷ ಕಿರಿಯರು ಮತ್ತು ತಮ್ಮದೇ ಸಮನ್ವಯ ಕಾವ್ಯಮಾರ್ಗವನ್ನು ರೂಪಿಸಿಕೊಂಡಿದ್ದವರು.

1972ರಲ್ಲಿ ಕೆ ಎಸ್ ನ ಅಭಿನಂದನ ಸಮಿತಿ ರಚಿಸಿ, ಚಂದನ ಎಂಬ ಅಭಿನಂದನ ಗ್ರಂಥವನ್ನು ತಮ್ಮ ಸಂಪಾದಕತ್ವದಲ್ಲಿ ಹೊರತಂದು, ಅದರ ಲೋಕಾರ್ಪಣೆಯ ಸಮಾರಂಭವನ್ನು ಸ್ಮರಣೀಯವಾಗಿ ಹಮ್ಮಿಕೊಂಡಿದ್ದ ಉತ್ತಮ ಸಂಘಟಕರು ಜಿ ಎಸ್ ಎಸ್. ಆ ಸಮಾರಂಭದಲ್ಲಿ ಮಾಸ್ತಿ, ಡಿವಿಜಿ ಅವರಂಥ ಹಿರಿ ತಲೆಮಾರಿನವರಷ್ಟೇ ಅಲ್ಲದೆ, ಯುವಕವಿಗಳು ಹಾಗೂ ವಿಮರ್ಶಕರು  ಸಕ್ರಿಯವಾಗಿ ಭಾಗವಹಿಸಿದ್ದರು. ಕೆ ಎಸ್ ನ ಕವನಗಳ ಮತ್ತು ಇತರ ಸಾಹಿತ್ಯದ ಬಗ್ಗೆ ವಿಮರ್ಶಾತ್ಮಕ ಒಳನೋಟ ಒದಗಿಸಿದ  ‘ಚಂದನ’ ಇಂದಿಗೂ ಒಂದು ಉತ್ತಮ ಪರಾಮರ್ಶನ ಗ್ರಂಥವೆನಿಸಿದೆ. ಈ ಕಾರಣಕ್ಕಾಗಿಯೇ ನಮ್ಮ ತಂದೆಯವರಿಗೆ  ಜಿ ಎಸ್ ಎಸ್   ಆಪ್ತರಾಗಿದ್ದರು.

ರಾಷ್ಟ್ರಕವಿ ಜಿ ಎಸ್ ಎಸ್

1985ರಿಂದ 1988ರವರೆಗೆ ನಾನು ನಮ್ಮ ಬ್ಯಾಂಕಿನ ಬನಶಂಕರಿ ಎರಡನೆಯ ಹಂತದ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಜಿ ಎಸ್ ಎಸ್ ಅವರು ಆ ಶಾಖೆಯ ಗ್ರಾಹಕರಾಗಿದ್ದರು. ನಮ್ಮ ತಂದೆಯವರಿಗೆ  ಪುಸ್ತಕ ಅಥವಾ   ಇನ್ನಾವುದೋ ಪತ್ರ  ಕೊಡಬೇಕಾದಾಗ  ಮನೆಯ ಹತ್ತಿರ ಬರಲು ಹೇಳುತ್ತಿದ್ದರು .

ನಮ್ಮ ತಂದೆಯವರ ಹುಟ್ಟುಹಬ್ಬವಾದ ಜನವರಿರಂದು ಪ್ರತಿವರ್ಷ ನಮ್ಮ ಮನೆಗೆ ಬಂದು ಶುಭ ಹಾರೈಸುವುದನ್ನು  ತಪ್ಪದೆ ಪಾಲಿಸಿಕೊಂಡು ಬಂದಿದ್ದರು ಜಿ ಎಸ್ ಎಸ್ .

ಜಿ ಎಸ್ ಎಸ್ ಅವರ ಸಮಗ್ರ ಕಾವ್ಯವನ್ನು ಬಿಡುಗಡೆ ಮಾಡಿದವರು ಕೆ ಎಸ್ ನ. ಆ ಸಂದರ್ಭದಲ್ಲಿ ಅವರು ಮಾತನಾಡುತ್ತ “ಸಮಗ್ರ ಕಾವ್ಯ ಶೀರ್ಷಿಕೆಯನ್ನು ನಾನು ಒಪ್ಪುವುದಿಲ್ಲ. ಕವಿ ಕಾಲವಾದ ಮೇಲೆ ಪ್ರಕಟವಾದರೆ ಅದು ಸಮಗ್ರ ಕಾವ್ಯ. ಶಿವರುದ್ರಪ್ಪ  ಇನ್ನೂ ಬರೀತಾರೆ. ಬೇಕಾದರೆ ಕೃತಿಯನ್ನು ಅವರ ಇದುವರೆಗಿನ ಕಾವ್ಯ ಎನ್ನಿ” ಎಂದು ಕವಿಗೆ ಶುಭ ಹಾರೈಸಿದ್ದರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29026

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ಬೆಂಗಳೂರು )

 

3 Responses

  1. ನಯನ ಬಜಕೂಡ್ಲು says:

    Nice sir

  2. ಶಂಕರಿ ಶರ್ಮ says:

    ಇಬ್ಬರು ಮಹಾಕವಿಗಳ ಹೃದಯ ವೈಶಾಲ್ಯತೆಯೂ ಅಷ್ಟೇ ದೊಡ್ಡದು.. ಚಂದದ ನೆನಪುಗಳನ್ನು ಹಂಚಿಕೊಳ್ಳುತ್ತಿರುವಿರಿ…ಧನ್ಯವಾದಗಳು ಸರ್.

  3. km vasundhara says:

    ಬಹಳ ಖುಶಿಯಾಗುತ್ತೆ ಓದಿಕೊಳ್ಳಲು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: