Yearly Archive: 2016

3

ಒಂಟಿ ಹಕ್ಕಿಯ ಪಯಣ

Share Button

  ಕಾರ್ಯನಿಮಿತ್ತ ಹೈದರಾಬಾದಿನ ಯೂನಿವರ್ಸಿಟಿಯೊಂದಕ್ಕೆ ಹೋಗಬೇಕಾಗಿತ್ತು. ಅಲ್ಲಿನ ವಸತಿ, ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲಿಂದಲೇ ನಿಗದಿಪಡಿಸದೆ ಹೊರಡುವಂತಿಲ್ಲ. ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಹಾಸ್ಟೆಲ್ ಇರದಿದ್ದಲ್ಲಿ ಹೇಗಪ್ಪಾ ಎಂಬ ಚಿಂತೆ. ಕೊನೆಗೆ ಗಂಡ, ಮಗಳು ಹೀಗೆ ಸಂಸಾರ ಸಮೇತ ಹೋಗಿ ಪಿಕ್ನಿಕ್ಕೂ ಮಾಡಿ ಬಂದೆವೆನ್ನಿ. ಸ್ತ್ರೀ  ಸ್ವಾತಂತ್ರ್ಯ, ಸಮಾನತೆ ಎಂದೆಲ್ಲ ಮಾತನಾಡುತ್ತಿರುವಾಗಲೇ...

2

ಭಗವತಿ ಮತ್ತು ಕಣ್ಣಿಗೈ .. ಒಂದು ಐತಿಹ್ಯ ..

Share Button

ನಮ್ಮ ಮನೆಯ ಪಕ್ಕದಲ್ಲಿಯೇ ಒಂದು ಭಗವತಿ ಕ್ಷೇತ್ರವಿದೆ ..ವರುಷದಲ್ಲಿ ಒಮ್ಮೆ ನಡೆವ ಊರ ಜಾತ್ರೆ .. ಮೇಲ್ನೋಟಕ್ಕೆ ಬಿಲ್ಲವರ ಕ್ಷೇತ್ರ/ಭೂತಸ್ತಾನ ಎಂದು ಕಂಡರೂ ಊರಿನ ಎಲ್ಲಾ ಹಿಂದೂಗಳು ಒಗ್ಗಟ್ಟಿನಿಂದ ಭಕ್ತಿಯಿಂದ ನಂಬಿ ನಡೆಸಿಕೊಂಡು ಹೋಗುತ್ತಿರುವ ಸಂಭ್ರಮವಿದು.ಈ ದೇವಿ ಭಗವತಿ ಹೆಚ್ಚಾಗಿ ಕೇರಳದ ಮಣ್ಣಿನಲ್ಲೇ ಪೂಜಿಸಲ್ಪಡುವುದು.ಇತರ ರಾಜ್ಯಗಳಲ್ಲಿ ಹೆಚ್ಚಾಗಿ...

3

ಶ್ರೀರಾಮನ ಪಟ್ಟಾಭಿಷೇಕವೂ…. ಚಳ್ಳಂಗಾಯಿಯ ಉಪ್ಪಿನಕಾಯಿಯೂ

Share Button

ನಮ್ಮ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ಹಲವಾರು ಕಥೆಗಳಲ್ಲಿ ‘ಮಂಗಗಳು ಚಳ್ಳಂಗಾಯಿ ಉಪ್ಪಿನಕಾಯಿ’ ತಿಂದ ಕಥೆಯೂ ಇತ್ತು.ಆ ಕಥೆಯ ಸಾರಾಂಶ ಹೀಗಿದೆ : ” ರಾವಣವಧೆಯ ನಂತರ, ಸೀತೆ ಮರಳಿ ಬಂದ ಮೇಲೆ, ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕವು ಬಲು ವಿಜೃಂಭಣೆಯಿಂದ ನೆರವೇರಿತು. ಶ್ರೀರಾಮನು ತನ್ನ ವನವಾಸದ ಕಷ್ಟದ ದಿನಗಳಲ್ಲಿ...

0

ಸಾಕು ಮೌನದ ಭಾಷೆ – ಆ. ನಾ. ಪೂರ್ಣಿಮಾ ಕವನ ಸಂಕಲನ

Share Button

ಕಳೆದ ಮೂರು ದಶಕಗಳಿಂದ ಕವಿತೆ ಬರೆಯುತ್ತಿರುವ ಗೆಳತಿ ಪೂರ್ಣಿಮಾ ಕವನ ಸಂಕಲನ ತರುವ ಮನಸ್ಸು ಮಾಡಿಯೇ ಇರಲಿಲ್ಲ. ಈಗ ದಿಢೀರನೆ ‘ಸಾಕು ಮೌನದ ಭಾಷೆ’ ಎಂದು ಘೋಷಿಸಿ ಸಂಕಲನದ ಮೂಲಕ ನಮಗೆ ಮುಖಾಮುಖಿಯಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ಆದರೆ ಇದರ ಹಿಂದಿರುವ ಪಯಣ ದೀರ್ಘವಾದುದಷ್ಟೇ ಅಲ್ಲ, ಸಂಯಮಶೀಲವಾದುದು...

0

ಓದು ಮಗು, ಓದು….

Share Button

ಅಕ್ಷರಕ್ಷರ ಪದ ವಾಕ್ಯಗಳಲವಿತ ಋಷಿಮುನಿ ಪ್ರಣೀತ ವೇದ ವೇದಾಂಗ ಕರ್ಮಾನುಷ್ಠಾನ.   ಇತಿಹಾಸ ಭೂಗೋಳ ಜ್ಞಾನ  ವಿಜ್ಞಾನ ಖಗೋಳಾದಿ ಗಣಿತ ಯಂತ್ರತಂತ್ರಾದಿ ವಿಷಯಾನುಭವ.   ಕತೆ, ಕಾವ್ಯ, ಕವನ ಸಾಹಿತ್ಯ ಸಂಗೀತ ನಾಟ್ಯ ಅಭಿನಯಾದಿ ನವರಸ ದರ್ಶನ ಜ್ಞಾನ ಪರಿಪೂರ್ಣ.   ಬಾ‍ಷೆ ನೂರಿರಲಿ ಕ್ಷೇತ್ರ ಸಾವಿರವಿರಲಿ...

3

ನಾ ಶಾಲೆಗೆ ಹೋಗಲ್ಲಾ..

Share Button

  ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ  ಕರುಳು  ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ....

5

ಕರಾವಳಿಯ ಮಳೆ ..ಶಾಲಾದಿನಗಳು

Share Button

  ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು...

2

ಗಿಡ ಹಚ್ಚುವ ಕನಸು ಚಿಗುರಿದಾಗ …

Share Button

ಬೇಸಿಗೆ ರಜೆಯ ನಿಮಿತ್ಯ ಊರಿಗೆ ಹೋದಾಗ ಮಲಪ್ರಭಾ ನದಿ ನೋಡಿದೆ. ಕಳೆದ ಮೂರು ದಶಕಗಳ ಹಿಂದೆ ಬೇಸಿಗೆ ಕಾಲದಲ್ಲೂ ನನ್ನೂರ ನದಿ ತಣ್ಣಗೆ ಹರಿಯುತ್ತಿತ್ತು. ಅದೊಂದು ಸಾರಿ ಬರಗಾಲ ಬಿದ್ದಾಗ ಆ ನದಿಯಲ್ಲಿಯೇ ಒಂದು ಸಣ್ಣ ಗುಂಡಿತೋಡಿ ವರತೆಯ ನೀರನ್ನು ಕುಡಿಯಲು ತಂದ ನೆನಪಿದೆ. ಆದರೀಗ ನದಿಯ...

7

ಮಾರ್ಕ್ಸ್ ಬಗ್ಗೆ ಒಂದಿಷ್ಟು ರಿಮಾರ್ಕ್ಸ್ …

Share Button

ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪೈಪೋಟಿಯಲ್ಲಿ ಎಂಬಂತೆ ಅಭಿನಂದಿಸುವ, ವಿವಿಧ ಕೊಡುಗೆಗಳನ್ನು ಕೊಟ್ಟು ಆದರಿಸುವ ಪದ್ಧತಿ ಈ ನಡುವೆ ಕಂಡುಬರುತ್ತಿದೆ. ಇದು ತಪ್ಪಲ್ಲ, ಅವರವರ ಸಂಭ್ರಮ ಅವರವರಿಗೆ. ಹೆಚ್ಚು ಅಂಕ ಗಳಿಸಿದವರಿಗೆಲ್ಲಾ ಶುಭಾಶಯಗಳು, ಅಭಿನಂದನೆಗಳು. ಆದರೆ ಅತಿಯಾದ ಈ ಸಡಗರದಲ್ಲಿ, ಉತ್ತಮ...

0

ಕ್ಷೇತ್ರಜ್ಞರಾಗೋಣ….

Share Button

ನಮ್ಮ ಮನಸ್ಸೆಂಬುದು ಮನೋಕ್ಷೇತ್ರ. ಇಲ್ಲಿ ಕನಸುಗಳ ಬೀಜ ಬಿತ್ತಿ ನನಸಿನ ಬೆಳೆ ತೆಗೆಯುವ ಹಂಬಲ ನಮಗೆಲ್ಲ. ತಪ್ಪೇನಿಲ್ಲ, ಕ್ರಿಯಾಶೀಲತೆಗೆ, ಸಾಧನೆಗೆ, ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಇದು ಅನಿವಾರ್ಯ. ಆದರೆ.., ನಮ್ಮ ಕ್ಷೇತ್ರ, ನಮ್ಮ ಪರಿಮಿತಿಗಳ ಅರಿವು ಮೀರಿ ಬಿತ್ತುವುದಕ್ಕೆಂದು ಕನಸಿನ ಬೀಜಗಳನ್ನೇ ಮೂಟೆಗಟ್ಟಲೆ ಪೇರಿಕೊಂಡಾಗ ನಮ್ಮ ಮನೋಮಂಡಲ...

Follow

Get every new post on this blog delivered to your Inbox.

Join other followers: