Monthly Archive: August 2020
ಹೀಗೆ ಒಂದು ದಿನ ಮಳೆ ಎಡೆಬಿಡದೆ ಸುರಿಯುತ್ತಿತ್ತು.ಕುಳಿತಿದ್ದ ಬಸ್ ನಲ್ಲಿ ಕಾಲ ಸರಿಯದೆ, ಬಸ್ ಮಾತ್ರ ಮುಂದೆ ಹೋಗುತ್ತಿದ್ದರೂ ಒಳಕುಳಿತವರೆಲ್ಲ ಜಡತ್ವಕ್ಕೆ ಅತ್ತ್ಯುತ್ತಮ ಉದಾಹರಣೆಯಂತೆ ಕುಳಿತು,ಕಾಲ ದೇಶಗಳೆಲ್ಲ ನಿಂತೇ ಹೋದಂತೆ ಅನಿಸಿಬಿಟ್ಟಿತು. ನಿದ್ದೆಯೂ ಬಾರದೆ, ಜಡಿ ಮಳೆ ತಂದ ಬೇಸರದಿಂದಲೂ ತಲೆ ಚಿಟ್ಟು ಹಿಡಿಯುವಂತೆ ಆದಾಗ, ಆಧುನಿಕ ಮಾಯಾದೀಪವಾದ ಸ್ಮಾರ್ಟ್ ಫೋನ್...
ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ ನಡೆಯುತ್ತದೆ. ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವೆಂದೂ ಜನಜನಿತವಾಯಿತು. ರಾಮಾಯಣವೆಂಬ ಕಾವ್ಯವೇ...
“ಮಾಮನಿಗೆ ಶೇಕ್-ಹ್ಯಾಂಡ್ ಮಾಡು ಪುಟ್ಟಾ” ಅಂದ ಅಮ್ಮನ ಮಾತು ಕೇಳಿದ ಮಗು ಎಡಗೈ ಮುಂದೆ ಚಾಚಿತು. “ಆ ಕೈ ಬೇಡ, ಪೊಲ್ಲು ಕೈ ಕೊಡು (ಚಂದದ ಕೈ ಕೊಡು)” ಅಂತ ಹೇಳುತ್ತಾ ಎಡದ ಕೈಯನ್ನು ಹಿಂದೆ ಸರಿಸಿ ಮಗುವಿನ ಬಲ ಕೈಯನ್ನು ಮುಂದಕ್ಕೆ ಚಾಚುವಂತೆ ಕಲಿಸುತ್ತಿದ್ದರು ಆ...
ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಸಿಂಹರಾಜ ವಾಸವಾಗಿದ್ದ. ಆ ಸಿಂಹರಾಜ ಬಹಳ ಕ್ರೂರಿಯಾಗಿದ್ದ. ತನಗೆ ಹಸಿವಾದಾಗೆಲ್ಲ ಕೈಗೆ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಇದರಿಂದಾಗಿ ಆ ಕಾಡಿನ ಉಳಿದೆಲ್ಲ ಪ್ರಾಣಿಗಳು ಜೀವ ಭಯದಿಂದ ಬದುಕುತ್ತಿರುತ್ತವೆ. ಅದೊಂದು ದಿನ ಕಾಡಿನ ಪ್ರಾಣಿಗಳೆಲ್ಲ ಸೇರಿ ಸಿಂಹರಾಜನಿಂದಾಗಿ...
ಅಮ್ಮಾ, ನಿನ್ನ ಗರ್ಭದೊಳಗಿನ ಬೆಚ್ಚಗಿನ ಗೂಡಿನಲಿ ಕಣ್ಮುಚ್ಚಿ ಪಿಂಡವಾಗಿ ರೂಪುಗೊಳ್ಳುತ್ತಿದ್ದೇನೆ ಗಂಡೆಂದು ಭ್ರಮಿಸಿ ಕಲ್ಪನೆಯ ಹರಿಯಬಿಡಬೇಡ ನಿನ್ನಂತೆಯೇ ನಾನು ಹೆಣ್ಣು ಹಾಗೆಂದು ನನ್ನ ಹಿಚುಕಬೇಡ. ಅವರಿವರ ಮಾತು ಕೇಳಿ ಇಳಿಯಬೇಡ ನೀನು ನೋವಿನಾಳಕ್ಕೆ. ಕಟ್ಟಿಕೊಳ್ಳಬೇಡ ನಿನ್ನ ಸುತ್ತ ದುಃಖ ತುಂಬಿದ ಕೋಟೆ ನಾಲ್ಕು ಗೋಡೆಗಳ ಮಧ್ಯೆ ಮತ್ತೊಂದು...
ಚುಮುಚುಮು ಮುಂಜಾನೆ, ಏಳುವಾಗಲೇ ಜಿಟಿಜಿಟಿ ಹನಿಯುತ್ತಿದ್ದ ಮಳೆ, ಆದರೂ ಈ ಮುಂಜಾವಿನಲ್ಲಿ ಒಂದು ರಮಣೀಯ ಸೊಬಗು. ಎದ್ದು, ಹಲ್ಲು ಉಜ್ಜಿ, ಬಚ್ಚಲ ಒಲೆಗೆ ಉರಿ ಹಾಕಿ, ನಿತ್ಯದ ಯೋಗಾಸನ, ಪ್ರಾಣಾಯಾಮ ಮುಗಿಸಿ ಒಲೆ ಉರಿಸಿ (ಬೆಳಕಿನ ಗಂಜಿ ಊಟದ ತಯಾರಿ), ಅನ್ನಕ್ಕಿಟ್ಟು ಹಟ್ಟಿ ಕಡೆಗೆ ಹೊರಟೆ ದನದ...
ಸಂಗ್ರಹಾಲಯದ ಸವಿನೋಟ ಸುಂದರವಾದ ಸೂರ್ಯೋದಯ, ಯುದ್ಧ ಸ್ಮಾರಕಗಳನ್ನು ಕಣ್ತುಂಬಿಕೊಂಡಾಗ, ಸಮಯ 7:30..ಬೆಳಗ್ಗಿನ ಉಪಹಾರಕ್ಕೆ ನಮ್ಮೆಲ್ಲರ ಉದರ ಸಜ್ಜಾಗಿತ್ತು. ರುಚಿಕಟ್ಟಾದ ತಿಂಡಿಯನ್ನು ಸಮೃದ್ಧವಾಗಿ ಸವಿದು ಹೊರಟೆವು, ಡಾರ್ಜಿಲಿಂಗ್ ತಿರುಗಾಟಕ್ಕೆ. ಅದಾಗಲೆ ಗಂಟೆ ಒಂಭತ್ತು. ಮನಸ್ಸು ತುಂಬಾ ಕುತೂಹಲ, ಖುಷಿ! ನಮ್ಮ ವಾಹನಗಳು ಮೊದಲಿಗೆ ಅಲ್ಲಿಯ ಪ್ರಾಣಿ ಸಂಗ್ರಹಾಲಯ ಮತ್ತು...
ನವ್ಯಕಾವ್ಯ ಪ್ರವರ್ತಕ ಕವಿ ಎನಿಸಿದ್ದ ಗೋಪಾಲಕೃಷ್ಣ ಅಡಿಗ ಹಾಗೂ ನಮ್ಮ ತಂದೆ ಏಕವಚನದ ಸಲುಗೆಯ ಸ್ನೇಹಿತರು. ಭೇಟಿ ಆದಾಗಲೆಲ್ಲ ಅಡಿಗರು “ಏನಯ್ಯ ನರಸಿಂಹ, ಹೇಗಿದ್ದೀಯ?” ಎಂದು ಕುಶಲ ವಿಚಾರಿಸಿದರೆ ನಮ್ಮ ತಂದೆಯವರು “ಬಾರಯ್ಯ ಅಡಿಗ,ತುಂಬಾ ದಿನ ಆಯ್ತು ನೋಡಿ” ಎಂದು ಉತ್ತರಿಸುತ್ತಿದ್ದರು.ಇಬ್ಬರೂ ಭೇಟಿಯಾದಾಗ ಸಾಹಿತ್ಯದ ಬಗ್ಗೆ ಮತ್ತು...
ಅಪ್ಪ ಮಗನಿಗೆ ಹೇಳಿದ “ಆ ಹುಡುಗನ್ನ ನೋಡು ಡಿಸ್ಟಿಂಗ್ಶನ್ ಬಂದಾನ ನೀ ನೋಡು ಕಡಿಮೆ ಮಾರ್ಕ್ಸ ಪಡೆದೀಯಿ” ಅಂತೂ ನಾವು ಮಾರ್ಕ್ಸವಾದಿಗಳಾಗುತ್ತಿದ್ದೇವೆ. ಅವ್ವ ಮಗನಿಗೆ ಹೇಳಿದಳು “ಮಗನೇ ಹೇಗಾದರೂ ಮಾಡು ಎಂತಾದರೂ ಮಾಡು ನೀ ಹೆಚ್ಚು ಅಂಕ ಗಳಿಸು ಆ ಪಕ್ಕದ ಮನೆ ಶಾರದಕ್ಕನ ಸೊಕ್ಕಿಳಿಸು” ಅಂತೂ...
ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮ ಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮ ಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆ ಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆ ಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆ ಧನ ಪದವಿ ಸ್ಥಾನ...
ನಿಮ್ಮ ಅನಿಸಿಕೆಗಳು…