Daily Archive: June 2, 2016
ಕಳೆದ ಮೂರು ದಶಕಗಳಿಂದ ಕವಿತೆ ಬರೆಯುತ್ತಿರುವ ಗೆಳತಿ ಪೂರ್ಣಿಮಾ ಕವನ ಸಂಕಲನ ತರುವ ಮನಸ್ಸು ಮಾಡಿಯೇ ಇರಲಿಲ್ಲ. ಈಗ ದಿಢೀರನೆ ‘ಸಾಕು ಮೌನದ ಭಾಷೆ’ ಎಂದು ಘೋಷಿಸಿ ಸಂಕಲನದ ಮೂಲಕ ನಮಗೆ ಮುಖಾಮುಖಿಯಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ಆದರೆ ಇದರ ಹಿಂದಿರುವ ಪಯಣ ದೀರ್ಘವಾದುದಷ್ಟೇ ಅಲ್ಲ, ಸಂಯಮಶೀಲವಾದುದು...
ಅಕ್ಷರಕ್ಷರ ಪದ ವಾಕ್ಯಗಳಲವಿತ ಋಷಿಮುನಿ ಪ್ರಣೀತ ವೇದ ವೇದಾಂಗ ಕರ್ಮಾನುಷ್ಠಾನ. ಇತಿಹಾಸ ಭೂಗೋಳ ಜ್ಞಾನ ವಿಜ್ಞಾನ ಖಗೋಳಾದಿ ಗಣಿತ ಯಂತ್ರತಂತ್ರಾದಿ ವಿಷಯಾನುಭವ. ಕತೆ, ಕಾವ್ಯ, ಕವನ ಸಾಹಿತ್ಯ ಸಂಗೀತ ನಾಟ್ಯ ಅಭಿನಯಾದಿ ನವರಸ ದರ್ಶನ ಜ್ಞಾನ ಪರಿಪೂರ್ಣ. ಬಾಷೆ ನೂರಿರಲಿ ಕ್ಷೇತ್ರ ಸಾವಿರವಿರಲಿ...
ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ ಕರುಳು ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ....
ಕರಾವಳಿ ತೀರದ ಮಳೆಗೂ ಮಲೆನಾಡಿನ ಮಳೆಗೂ ವ್ಯತ್ಯಾಸ ಇದೆ ಅಂತ ಸುಮಾರು ವರ್ಷ ನನಗೆ ಗೊತ್ತಿರಲಿಲ್ಲ. ಕುವೆಂಪು ಅವರ ಕಾದಂಬರಿಗಳಲ್ಲಿ ಮಳೆಯ ವೈಭವವನ್ನು ಅನುಭವಿಸಿದ್ದೆ. ಆದರೆ ಹಚ್ಚ ಹಸಿರಿನಂತೆ ನೆನಪಿನಲ್ಲಿ ಉಳಿದಿರುವುದು ಮಾತ್ರ ಕರಾವಳಿಯ ನಮ್ಮೂರಿನ ಮಳೆ. ಜೂನ್ ಮೊದಲ ವಾರದಲ್ಲೇ ಸಾಮಾನ್ಯವಾಗಿ ಮೋಡ ಕವಿದು...
ನಿಮ್ಮ ಅನಿಸಿಕೆಗಳು…