Monthly Archive: April 2016

8

ನೆಲ್ಲಿಕಾಯಿ ಚಟ್ಟು…ಹೊಟ್ಟೆನೋವು ರಟ್ಟು…

Share Button

‘ಅಮ್ಮಾ,ಸೂಟುಕೇಸಲ್ಲಿ ನೆಲ್ಲಿಚಟ್ಟು ಇಟ್ಟಿದ್ದೀಯಾ…ಮರ್ತುಬಿಡ್ಬೇಡ ಮತ್ತೆ..??’..ಮಗಳು ಉವಾಚ…ಅಮೇರಿಕಕ್ಕೆ ಕುಟುಂಬ ಸಮೇತ ಹೊರಡುವ ತಯಾರಿ ನಡೆಯುತ್ತಿತ್ತು..ಎಲ್ಲಾ ಸಾಮಾನುಗಳ ಜೊತೆಗೆ ನೆಲ್ಲಿಚಟ್ಟಿಗೆ ಮೊದಲ ಸ್ಥಾನ…ಹಾಗೆಯೇ ಅದಕ್ಕೆ ವಿದೇಶ ಪ್ರಯಾಣದ ಯೋಗ..!! ಮನೆಯೊಳಗೆ ಅದೊಂದಿದ್ದರೆ ಮನಸ್ಸಿಗೆ ನೆಮ್ಮದಿ.. ನೆಲ್ಲಿಕಾಯಿಯನ್ನು ತಿಳಿಯದವರು ಇಲ್ಲ ಅಂತಲೇ ಹೇಳಬಹುದು.ನಿಸರ್ಗದಲ್ಲಿ ಸಿಗುವ ಪರಿಪೂರ್ಣ ಔಷದೀಯ ಫಲ ಇದಾಗಿದೆ.ಅಮೃತಫಲವೆಂದು ಕರೆಸಿಕೊಳ್ಳುವ...

1

ಹನಿಗವಿತೆಗಳು

Share Button

ಅಗಲಿಕೆ ನೀನೇ ಹೆತ್ತುಕೊಟ್ಟ ಕೂಸು ಬಿಟ್ಟು ಹೋದದ್ದು ಸರಿಯೇ? ನಿನ್ನ ಅಗಲಿಕೆಯಿಂದ ಕನಸು ಅನಾಥವಾಗಿದೆ ಹರಿತ ಕ್ಷತ್ರಿಯನ ಕತ್ತಿ ನಿನ್ನ ನೆನಪುಗಳ ಬುತ್ತಿ ಎರಡಕ್ಕೂ ಹರಿತವಿದೆ ಒಂದಿಷ್ಟೂ ಅರಿವಿಲ್ಲ ಮತ್ತು ಕರುಣೆಯಿಲ್ಲ ಇದೇನಾ? ಕೆಂಪು ರೆಕ್ಕೆಗಳ ಪಾರಿವಾಳ ಹಾರಿಬಂತು ಬಂದೂಕಿನ ನಳಿಗೆಯೊಳಗೆ ಗುಂಡುಗಳು ಯುದ್ಧವೆಂದರೆ ಇದೇನಾ?   ...

1

ಉನ್ಮತ್ತ ಕನಸಿನಲ್ಲಿ ಮಾತ್ರ

Share Button

ನಡೆಯುತ್ತೇನೆ ಮುಳ್ಳುಗಳ ದಾರಿಯಲ್ಲಿ ನಿಲ್ಲುತ್ತೇನೆ ಕೆಂಡಗಳ ಕೊಂಡದಲ್ಲಿ ಮಲಗುತ್ತೇನೆ‌ ಅರೆಬೆಂದ ಚಿತೆಗಳ ಮೇಲೆ ಆಗೆಲ್ಲ ನೆನಪು ಮಾಡಿಕೊಳ್ಳುತ್ತೇನೆ‌ ಅವಳ ಮುಗುಳ್ನಗುವನ್ನು ತುಂಗಾ ನದಿಯ ತಟದಲ್ಲಿ ನಿಂತವಳ ಕೆನ್ನೆಯ ಮೇಲೆ ಬಿದ್ದ ಸೂರ್ಯನ ಬೆಳಕಲ್ಲಿ ಹೊಳೆಯುವ ಅವಳ ಝುಮುಕಿಯಲ್ಲಿ ಜೋಕಾಲಿಯಾಡುತ್ತೇನೆ ಕೈ ಸೋತು ಕೆಳಗೆ ಬಿದ್ದಾಗ ಅವಳ ಮಡಿಲಲ್ಲಿ...

1

ನಿನ್ನ ನೋಡಿದ ಕ್ಷಣದಿಂದಲೇ

Share Button

  ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ ಕಡಲಲ್ಲಿ, ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ. ನಿನ್ನದೇ ನೆನಪಿನಲ್ಲಿ  ಮನವು ತೇಲಾಡುತ್ತಿದೆ. ಕಣ್ಣುಗಳಲ್ಲಿ  ನಿನ್ನದೇ ಚಿತ್ರವ, ಸೆರೆಹಿಡೆಯುವ ಆಸೆಯೊಂದು ಅರಳಿದೆ. ನಿನ್ನಲ್ಲಿಯೇ ನಾ ಸೆರೆಯಾದೆ....

3

ಭಯದ ನೆರಳು….

Share Button

ಬೈಕ್ ಸ್ಟಾರ್ಟ್ ಮಾಡಬೇಕೆನ್ನುವಾಗ ಕಾಲ ಬುಡದಲ್ಲಿ ನಿಂಬೆಹುಳಿ ಮತ್ತು ಕೆಂಪು ಪ್ರಸಾದ ಕಂಡವನು ಅಸಡ್ಡೆ ತೋರಿ ತನ್ನ ಕಂಪೆನಿಯತ್ತ ಓಡಿಸಿದ. ಆಗಲೇ ಆಗಬಾರದ ಅನಾಹುತ ಆಗಿಹೋಗಿತ್ತು. ಭೀಕರ ಅಪಘಾತ. ಇವನ ಕಾಲಮೇಲೆ ಲಾರಿ ಚಲಿಸಿಹೋಗಿತ್ತು. ಹೆಲ್ಮೆಟ್ ಹಾಕಿದ್ದರೂ, ತಲೆ ಒಡೆದು ರಕ್ತ ಹರಿದಿತ್ತು. ಕೊನೆಯ ಕ್ಷಣಗಳು. ಕಣ್ಣಿಂದ...

1

ನೋವಿನಾಚೆಗೂ ನಲಿವು ಕಾಯುತ್ತಿದೆ…

Share Button

  ಸಾಮಾನ್ಯವಾಗಿ ಎಲ್ಲದ್ದಕ್ಕೂ ಸಮ, ಅಸಮ,ಭಿನ್ನ,ವಿಭಿನ್ನಗಳ ವಿರುದ್ಧಾರ್ಥಕಗಳ ಸಂಭವನೀಯತೆಗಳು ಇದ್ದೇ ಇರುತ್ತವೆ.ಹೀಗೆ ಎಲ್ಲಾ ಸಂಗತಿಗಳಿಗೆ ವಿರುದ್ಧಾರ್ಥಕ ಭಾವ ಇದ್ದೇ ಇರುವುದೆಂಬ ಅರಿವು ನಮ್ಮಲ್ಲಿ ಎಚ್ಚರವಾಗಿರುವಾಗಲೆಲ್ಲಾ ನಮಗೆ ಆ ಭಾವವನ್ನು ಹೆಚ್ಚು ಅನುಭವಿಸಲು ಮತ್ತು ಆ ಸಂಗತಿ ನಮಗೆ ಹೆಚ್ಚು ತಟ್ಟಲು ಕಾರಣವಾಗುತ್ತದೆ.ಗೊತ್ತೇ ಇದೆ, ಬಡತನಕ್ಕೆ ವಿರುದ್ಧಾರ್ಥಕವಾಗಿ ಶ್ರೀಮಂತಿಕೆ...

1

“ಯೇಗ್ದಾಗೆಲ್ಲಾ ಐತೆ ” – ಪುಸ್ತಕ ಪರಿಚಯ

Share Button

ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೆ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೆ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. 25...

0

ಮನವಿ…ಹೂಮನ…ಶೋಕ…ಬೆಸುಗೆ

Share Button

ಮನವಿ ನೆನಪಿನ ಬಾಣಗಳ ಹಿಂಪಡೆದುಕೋ ನಾನು ಇನ್ನಷ್ಟು ದಿನ ಜೀವಿಸಬೇಕು ಹೂಮನ ದೇವರಿಗಾಗಿಯೇ ಅರಳುವ ಹೂವಿನಂತೆ ನಿನ್ನನ್ನೇ ನೆನಪಿಸಿಕೊಳ್ಳುವೆ ಶೋಕ ಊರಿಗೆಲ್ಲ ತೋರಣ ಮನೆ ಮಂದಿಗೆಲ್ಲ ಸಂಭ್ರಮ ಬೋಳಾದ ಮಾವಿನ ಮರಕಷ್ಟೇ ಶೋಕ ಬೆಸುಗೆ ನಾವಿಬ್ಬರೂ ಅಂಗೈ ಬೆಸೆದುಕೊಂಡು ನಡೆದ ಮೇಲಲ್ಲವೇ ? ಆ ರಸ್ತೆಯ ಇಕ್ಕೆಲಗಳ...

0

ಉಚಿತ ವೈದ್ಯಕೀಯ ತಪಾಸಣಾ ಶಿಬಿರ -ಏಕಲವ್ಯನಗರ

Share Button

27 ಮಾರ್ಚ್ 2016 ರ, ಭಾನುವಾರ ಮೈಸೂರಿನ ಹೊರವಲಯದಲ್ಲಿರುವ ಏಕಲವ್ಯನಗರದಲ್ಲಿ ಏರ್ಪಡಿಸಲಾದ ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ, ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದೆ . ಇಂತಹ ಶಿಬಿರಗಳಲ್ಲಿ ನುರಿತ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ. ಆದರೆ ವೈದ್ಯರಲ್ಲದ ನನ್ನಂತವರಿಗೂ ಇಲ್ಲಿ ಕೆಲವು ಕೆಲಸಗಳಿರುತ್ತವೆ. ಉದಾಹರಣೆಗೆ, ಹೆಸರು ನೋಂದಾಯಿಸುವುದು, ಸಾಮಾನುಗಳನ್ನು ಜೋಡಿಸಿಡುವುದು,...

Follow

Get every new post on this blog delivered to your Inbox.

Join other followers: