Author: Published by Surahonne
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ರಾಜಲಕ್ಷ್ಮಿ ಆಶ್ರಮಕ್ಕೆ ಬಂದು 5 ತಿಂಗಳು ಕಳೆದಿತ್ತು. ರಾಹುಲ್ ಒಮ್ಮೆ ಬಂದು ಹೋಗಿದ್ದ. ಅವನೂ ತಾಯಿಯನ್ನು ಕರೆಯಲಿಲ್ಲ. ರಾಜಲಕ್ಷ್ಮಿಯೂ ಹೋಗುವ ಉತ್ಸಾಹ ತೋರಲಿಲ್ಲ.ಎರಡು ತಿಂಗಳ ನಂತರ ರಾಹುಲ್ ತಾಯಿಯನ್ನು ನೋಡಲು ಬಂದ. ಹೇಗಿದ್ದೀಯಮ್ಮ? ಎಲ್ಲಾ ಅನುಕೂಲವಾಗಿದೆಯಾ? ಎರಡು ತಿಂಗಳಾದರೆ ನಮ್ಮ ಹೊಸಮನೆ ಸಿದ್ಧವಾಗತ್ತೆ. ಆಗ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.“ನೀವು ಗೌರಮ್ಮ ತಾನೆ?”“ಹೌದಮ್ಮ. ನೀವು ಕಾಫಿ ಕುಡಿಯಿರಿ. ನಾನು ಅರ್ಧಗಂಟೆಯಲ್ಲಿ ಬರ್ತೀನಿ. ವಾಕಿಂಗ್ ಹೋಗೋಣ.”“ವಾಕಿಂಗ್‌ಗೆ ಹೋಗಕ್ಕೆ ಪರ‍್ಮಿಶನ್ ಕೊಡ್ತಾರಾ?”“ಕೊಡದೆ ಏನ್ಮಾಡ್ತಾರೆ? ನೀವೇನು ೧೮ ವರ್ಷದ ಹುಡುಗೀನಾ ಪರ‍್ಮಿಶನ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) “ಯಾಕೋ ಹೊತ್ತೇ ಹೋಗ್ತಿಲ್ಲ ಸುನಂದಮ್ಮ. ವಾಪಸ್ಸು ನಂಜನಗೂಡಿಗೆ ಹೋಗೋಣ ಅನ್ನಿಸ್ತಿದೆ.”“ಅಮ್ಮ ಬನ್ನಿ ಊಟ ಮಾಡಿ. ಆಮೇಲೆ ಮಾತಾಡೋಣ.”ಊಟದ ನಂತರ ಸುನಂದಾ ಮನೆಗೆ ಹೋಗಲಿಲ್ಲ. “ಊಟ ಮಾಡಿ ಸುನಂದಾ……..”“ಬೇಡ 1/2 ಗಂಟೆ ಇದ್ದು ನನ್ನ ಫ್ರೆಂಡ್ ಮನೆಗೆ ಹೋಗ್ತೀನಿ. ಅವಳ ಮೊಮ್ಮಗನ ನಾಮಕರಣ ಇವತ್ತು…..”“ಓ……...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ಮಗಳು ಹೋದ ಮೇಲೆ ಮೂರ್ತಿಗಳು ಕುಗ್ಗಿ ಹೋಗಿದ್ದರು. ಒಂದು ವರ್ಷದ ನಂತರ ಕ್ರಮೇಣ ಖಿನ್ನತೆಗೆ ಜಾರಿದ್ದರು. ಮೈಸೂರಿಗೆ ತೆರಳಲು ನಿರಾಕರಿಸಿದ್ದರು. ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಬಂದರೂ ಮಾತನಾಡುತ್ತಿರಲಿಲ್ಲ. ಮಗಳ ಕೊರಗಿನಲ್ಲೇ ಅವರು ಕಣ್ಮುಚ್ಚಿದ್ದರು.ರಾಹುಲ್-ಮೈತ್ರಿ ಧಾವಿಸಿದ್ದರು. ನಂಜನಗೂಡಿನಲ್ಲೇ ಕರ್ಮಗಳು ನಡೆದಿದ್ದವು. ವೈಕುಂಠ ಸಮಾರಾಧನೆ...
ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...
ಗದಗನ ಪ್ರಸಿದ್ದ ಶಾಯಿರಿ ಕವಿ ಮರುಳಸಿದ್ಧಪ್ಪ ದೊಡ್ಡಮನಿ ಅವರ ಹೊಸ ಪುಸ್ತಕ ”ಎದೆಯಾಗಿನ ಮಾತು” ಶಾಯರಿಗಳ ಪುಸ್ತಕ ನನ್ನ ಕೈಸೇರಿತು.ಪುಸ್ತಕವನ್ನು ಓದಿದೆ. ಕನ್ನಡ ನಾಡಿನ ಜನರ ಮನ-ಮನೆಗಳನ್ನು ಸೇರಿ ಗೆದ್ದಿದೆ. ಇದಕ್ಕಾಗಿ ಕವಿಮಿತ್ರ ಶಾಯರಿಗಳ ಸರದಾರ ಶ್ರೀ ಮರುಳಸಿದ್ಧಪ್ಪ ದೊಡ್ಡಮನಿಯವರಿಗೆ ಅಭಿನಂದನೆಗಳು. ಶಾಯರಿಗಳು ಓದಲು ಹೆಚ್ಚು ಸಮಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರಾತ್ರಿ ಊಟವಾದ ನಂತರ ರಮ್ಯಾ ಗಂಡನಿಗೆ ಸಾಯಂಕಾಲ ತಂದೆ-ತಾಯಿ ಜೊತೆ ನಡೆದ ಮಾತು-ಕಥೆ ತಿಳಿಸಿದಳು. “ನಾನು ಸೈಟು ಕೊಂಡುಕೊಂಡಾಗಲೇ ಹೇಳಿದ್ದೆ. ಈ ವಿಚಾರ ಅಮ್ಮ-ಅಪ್ಪಂಗೆ, ಅತ್ತೆ- ಮಾವಂಗೆ ತಿಳಿಸೋಣಾಂತ. ನೀನು ಒಪ್ಪಲಿಲ್ಲ. ನೀನು ಯಾಕೆ ಈ ವಿಚಾರ ಮುಚ್ಚಿಟ್ಟೆಂತ ನನಗೆ ಈಗಲೂ ಅರ್ಥವಾಗಿಲ್ಲ.’...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ‘ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು. ಅವರಿಬ್ಬರೂ ಅವರ ಪ್ರಪಂಚದಲ್ಲಿ ಮುಳುಗಿಹೋಗಿದ್ರು, ಮನೆಯ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ತಿರಲಿಲ್ಲ. ಆದಿನ ಒಂದು ನಡೆದ ಸಣ್ಣ ಘಟನೆ ನಾವು ಅವರಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.” “ಯಾವ ಘಟನೆ?” ವಸುಮತಿಗೆ ಆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ಯಾಕೋ ಹಾಗಂತೀಯ ನಾವು ಮದುವೆಯಾದಮೇಲೂ ಗೌರಿ-ಗಣೇಶನ ಹಬ್ಬಕ್ಕೆ ಬರ್‍ತಿರಲಿಲ್ವಾ? ಈಗ ಆ ಅಭ್ಯಾಸ ತಪ್ಪಿದೆ ಅಷ್ಟೆ ಮಕ್ಕಳು ದೊಡ್ಡವರಾದ್ರು, ಜವಾಬ್ದಾರಿಯೂ ಹೆಚ್ಚಿತು, ವಯಸ್ಸಾದ ಅತ್ತೆ-ಮಾವನ್ನ ಬಿಟ್ಟು ಬರೋದು ಕಷ್ಟ……” ಅಕ್ಕ ಆ ದಿನಗಳು ಚೆನ್ನಾಗಿದ್ದವು. ನಾನು ಏನು ಕೀಟಲೆ ಮಾಡಿದರೂ ನೀನು, ವಾರುಣಿ ನನ್ನನ್ನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಆದಿತ್ಯ ರಮ್ಯಾಗೆ ತಾನು ಮೂರ್ತಿರಾಯರನ್ನು ಭೇಟಿ ಮಾಡಿದ ವಿಚಾರ ಹೇಳಲಿಲ್ಲ.“ಅಮ್ಮ-ಅಪ್ಪ ತುಂಬಾ ಆರಾಮವಾಗಿರಬಹುದು. ನಾವ್ಯಾಕೆ ತೊಂದರೆಕೊಡುವುದು?” ಎಂದುಕೊಂಡ. ಸುಬ್ರಹ್ಮಣ್ಯ ಆದಿತ್ಯ ದಂಪತಿಗಳನ್ನು ತಂದೆ-ತಾಯಿ ವಿವಾಹ ವಜ್ರಮಹೋತ್ಸವಕ್ಕೆ ಕರೆಯಲು ಬಂದವನು, ಆದಿ ತಂದೆ-ತಾಯಿಯರನ್ನೂ ಭೇಟಿ ಮಾಡಿ ಆಹ್ವಾನಿಸಿದ. ”ನಮ್ಮ ಪರವಾಗಿ ಮಗ-ಸೊಸೆ ಬರ್ತಾರೆ. ನಮಗೆ...
ನಿಮ್ಮ ಅನಿಸಿಕೆಗಳು…