“ಅಕ್ಕ ಎಂದರೆ ಬರೀ ಅಕ್ಕ ಅಲ್ಲ ಅವಳು,
ಮೊಗೆ ಮೊಗೆದು ಪ್ರೀತಿ ಕೊಡುವವಳು,
ಬದುಕಿನ ರೀತಿ ಹೇಳಿ ಕೊಡುವವಳು”.
“ಅಕ್ಕ ಎಂದರೆ ಬರೀ ಪದವಲ್ಲ,
ಅವಳಿಲ್ಲದೆ ಬಾಳಲ್ಲಿ ಮುದವಿಲ್ಲ”.
“ಅಕ್ಕ ಎಂದರೆ ನನ್ನ ಪಾಲಿಗವಳು ಅದ್ಭುತ,
ಸಂತಸದ ಬಣ್ಣ ತುಂಬಿ ರಂಗಾಗಿಸಿದವಳು ನನ್ನ ಜಗತ್ತ”.
“ಕತ್ತಲಾವರಿಸಿದ ಹಾದಿಯ ಕಂದೀಲು ಅವಳು,
ಮನಸು ನಿರಾಳ ಅಲ್ಲಿ ಅವಳು ನಗಲು”.
“ಹಳೆ ನೀರು ಹರಿದು ಒಸರಿದಂತೆ ಹೊಸ ಒಸರು,
ಅವಳಾಗಮನದಿಂದ ಈ ಬದುಕೆಲ್ಲ ಹಸಿರು”.
“ಜವಾಬ್ದಾರಿಗಳ ಸಂತೆಯಲ್ಲಿ ಕಳೆದು ಹೋಗಿತ್ತು ಹೃದಯ,
ಅವಳು ಸಿಕ್ಕ ಕ್ಷಣದಿಂದ ಮನದಲ್ಲಿ ಸಂತಸದ ಅಲೆಗಳ ಉದಯ”.
“ನನ್ನೆಲ್ಲಾ ಕಲ್ಪನೆಗೆ ಬಣ್ಣ ಬಳಿಯುವವಳು,
ಅವಳ ಪಾಲಿಗೆ ಸದಾ ನಾನೇ ಮಗಳು”.
“ಬೇಕಿಲ್ಲ ನಮಗೀಗ ಈ ಡಂಬಾಚಾರದ ಲೋಕ,
ಪರಸ್ಪರ ನಾವೇ ಕಂಡುಕೊಂಡಿಹೆವು ವಾತ್ಸಲ್ಯದ ಬೆಳಕ”.
“ಬಾಲ್ಯದ ಅಸ್ಪಷ್ಟ ನೆನಪಿನ ಚಿತ್ರಣ,
ಇಂದು ಸ್ಪಷ್ಟವಾಗಿ ಘೋಚರಿಸಿ ತುಂಬಿಹುದು ಕಣ್ಣ”.
“ಅರಿತಿಲ್ಲ ಭೂತಕಾಲ,ತಿಳಿದಿಲ್ಲ ಭವಿಷ್ಯ, ಬದುಕಿ ಬಿಡುವ ತವಕ ಈ ವರ್ತಮಾನ,
ನೆನೆಯದಿರು ಮರೆತವರ, ಆಗದಿರಲಿ ಮನಸು ಭಾರ,
ಕಾಯುವೆನು ಆಪ್ತಳಾಗಿ ಸದಾ ನಾ ನಿನ್ನ”.
“ಸಿಕ್ಕಾಯಿತು ಬದುಕಿನೆಲ್ಲ ನೋವಿಗೂ ಅಂತ್ಯ,
ಅರಳುತಿರಲಿ ಮುಂದೆಂದೂ ಸದಾ ನಿನ್ನ ತುಟಿಯಂಚಲಿ ನಗು,
ಎಷ್ಟು ಕಾಲ ಸರಿದರೂ,
ನಿನ್ನ ವಾತ್ಸಲ್ಯದ ತೋಳಲಿ ನಾ ಆಗಿ ಬಿಡುವೆ ಮಗು”.

-ನಯನ ಬಜಕೂಡ್ಲು.
