Monthly Archive: May 2024
ಏಪ್ರಿಲ್ ತಿಂಗಳ ಮೊದಲ ವಾರವದು. ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ ಕೊಂಚವೂ ವ್ಯತ್ಯಯವಾಗದಂತೆ ವ್ಯಸ್ತಳಾಗಿದ್ದೆ. ಹೇಳಿಕೊಳ್ಳಲಾಗದಂತಹ ಸುಸ್ತು ದೇಹವನ್ನು ಕಾಡುತ್ತಿತ್ತು. ಜೊತೆಯಲ್ಲಿ ಮೈ ಕೈ ನೋವು, ಸ್ನಾಯು ಸೆಳೆತ, ಜ್ವರ. ದಿನಕ್ಕೆರಡು ಪ್ಯಾರಸೆಟಾಮಲ್ ಮಾತ್ರೆ ನುಂಗುತ್ತಾ ದೈನಂದಿನ...
ಕಾಂಬೋಡಿಯಾ…ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ? ಐದು ಬಾರಿ ಹೆಸರು ಬದಲಿಸಿರುವ ನೀನು ನನ್ನ ತಾಯ್ನಾಡಾದ ಭಾರತಕ್ಕೆ ಹತ್ತಿರವಾದದ್ದಾರೂ ಹೇಗೆ? ಹಿಂದೂ ಧರ್ಮದಲ್ಲಿ ಸೃಷ್ಟಿ, ಸ್ಥಿತಿ, ಲಯದ ಕತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ...
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ ಕೆನೆ ಪದರ ಸೆಳೆದು ರುಚಿಸುತೇಲಿರುವ ನೊರೆಯ ಊದಿ ಹಿಂದೆ ಸರಿಸು ತುಸು ಬಿಸಿಯಿರುವ ಲೋಟದ ಕಂಠ ಹಿಡಿದುಸ್ವಲ್ಪ ಸ್ವಲ್ಪವೇ ಗುಟುಕು ಗುಟುಕಾಗಿ ಹೀರು ಕಂದುಬಣ್ಣದ ಬಿಸಿದ್ರವ...
(23-05-2024)ರಂದು ಬುದ್ಧ ಪೂಣ ಮೆಯ ಸಂದರ್ಭದಲ್ಲಿ ಲೇಖನ ಚಿಕ್ಕಂದಿನಿಂದ ನನಗೆ, ರಾಷ್ಟ್ರೀಯ ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಬಹಳ ಆಸಕ್ತಿ ಇತ್ತು. ಹೀಗಾಗಿ ಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ, ಮಾಸಿಕಗಳಲ್ಲಿ, ಅಂತಹವರ ಬಗ್ಗೆ ಬಂದ ಲೇಖನಗಳನ್ನು ಮತ್ತೆ ಮತ್ತೆ ಓದುತ್ತಿದ್ದೆ. ಅಲ್ಲದೇ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೇಳುತ್ತಿದ್ದೆ. ಆಗ...
ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ. ಎಲ್ಲರಿಗೂ ಕೂಡ ರಜೆ ನೀಡಿದ್ದಾರೆ. ಜಿಲ್ಲಾವಾರು ಫಲಿತಾಂಶಗಳನ್ನು ಗಮನಿಸಿದಾಗ ಈ ಬಾರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲರಿಗೂ...
ಕಾವ್ಯಗುಣ: “ಜೇಂಗೊಡದಂತೆ | ಝೇಂಕರಿಪ ತುಂಬಿಗಳಿಂಚರದಂತೆ | ಪೆಂಪನಾಳ್ದಿಂಗಡಲಂತೆ | ಪಣ್ತೆಸೆವ ಮಾಮರದಂತೆ | ಬೆಳ್ದಿಂಗಳ ಸೊಂಪಿನಂತೆ | ಸುಸಿಲಾಸೆಯ ನಲ್ಲಳ ನೋಟದಂತೆ | ರಸಜ್ಞರ ಆ ಚಿತ್ತಂಗೊಳಲಾರ್ಪುದು | ಈ ಕೃತಿ ಷಡಕ್ಷರಿದೇವಕೃತಂ” || ಎನ್ನುವ ಈ ಪದ್ಯ ಹೀಗೆ ರಸಜ್ಞನೊಬ್ಬ ಷಡಕ್ಷರಿಯ ಶಬರಶಂಕರ ವಿಲಾಸದ...
2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ...
ಏನೋ ಮಂಪರು, ಯಾರದೋ ಸದ್ದು ಸಪ್ಪಳ,ಕಣ್ಣು ಬಿಡಬೇಕೆಂದರೂ ಆಗದಷ್ಟು ರೆಪ್ಪೆಗಳು ಭಾರವಾಗಿ ಮುಚ್ಚಿವೆ. ಮೇಲೇಳಲು ಮನ ಬಯಸಿದರೂ ದೇಹ ಸಹಕರಿಸುತ್ತಿಲ್ಲ. ಯಾವುದೋ ಕಾಣದ ಲೋಕಕ್ಕೆ ತೇಲಿಕೊಂಡು ಹೋಗುತ್ತಿರುವ ಅನುಭವ. ವೈದ್ಯರು ”ಗಾಭರಿಯಾಗುವಂತಹದ್ದೇನಿಲ್ಲ, ಷಾಕಿನಿಂದ ಹೀಗಾಗಿದೆ. ಇಂಜೆಕ್ಷನ್ ಕೊಟ್ಟಿದ್ದೇನೆ, ಸ್ವಲ್ಪ ಹೊತ್ತಿಗೆಲ್ಲ ಸರಿಯಾಗುತ್ತಾರೆ. ಗಲಾಟೆ ಮಾಡಬೇಡಿ. ಅವರನ್ನು ಒಂಟಿಯಾಗಿರಲು...
ಡಿ.ವಿ.ಜಿ.ಯವರ ಕಗ್ಗರಿಂದ ಈ ಮೌನದ ಯಾತ್ರೆ ಪ್ರಾರಂಭಿಸುವುದು ಯೋಗ್ಯವೆನಿಸುತ್ತದೆ. ಎರಡು ಕೋಣೆಗಳ ನೀಂ ಮಾಡು ಮನದಾಲಯದಿಹೊರಕೋಣೆಯಲಿ ಲೋಗರಾಟವನಾಡುರುಸೊಬ್ಬನೆ ಮೌನದೊಳಮನೆಯು ಶಾಂತಿಯಲಿವರಯೋಗ ಸೂತ್ರವದು ಮಂಕುತಿಮ್ಮ ಅಂದರೆ ಮನಸ್ಸೆಂಬ ಆಲಯದಲ್ಲಿ ಎರಡು ಕೋಣೆಗಳನ್ನು ಕಟ್ಟಿಸಿಕೋ ಹೊರಗಿನ ಕೋಣೆಯಲ್ಲಿ ಎಲ್ಲ ಲೋಕ ವ್ಯವಹಾರಗಳನ್ನು ಮಾಡು, ಒಳಗಡೆಯ ಕೋಣೆಯು ಒಬ್ಬನೇ ಶಾಂತಿಯ ಮೌನದಲಿ...
ದಿನವೊಂದು ಸಾಲದು ನಿನ್ನ ಸ್ಮರಿಸಲುಯುಗವೊಂದು ಸಾಲದು ನಿನ್ನ ಬಣ್ಣಿಸಲು ನಿರೀಕ್ಷೆ ಸ್ವಾರ್ಥವಿಲ್ಲದ ಪ್ರೀತಿ ನಿನ್ನದುಪರೀಕ್ಷೆ ಫಲಿತಾಂಶವಿಲ್ಲದ ನೀತಿ ಪಾಠವದು ಹೇಳುವುದಕ್ಕಿಂತ ಹೆಚ್ಚು ಮಾಡಿ ತೋರಿಸಿದ್ದು ನೀನುಈ ಬಾಳಲ್ಲಿ ನಮಗೆ ನೀಡಿದ್ದು ಬರೀ ಸವಿ ಜೇನು ಜೀವನದಲ್ಲಿ ಕಡು ಕಷ್ಟದ ದಿನಗಳ ಕಳೆದರೂಹೆಜ್ಜೆ ಹೆಜ್ಜೆಗೂ ನಿಂದನೆ ನಿಷ್ಠುರಗಳ ಉಂಡರೂ...
ನಿಮ್ಮ ಅನಿಸಿಕೆಗಳು…