Author: Dr.Gayathri Devi Sajjan
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹಾವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...
ಮಹಿಷಾಸುರನನ್ನು ಸಂಹರಿಸಲು ರೌದ್ರಾವತಾರ ತಾಳಿದ್ದ ತಾಯಿ ಚಾಮುಂಡೇಶ್ವರಿಯು ಶಾಂತಿಯನ್ನು ಅರಸುತ್ತಾ ನಡೆದಳು ಚಂದ್ರದ್ರೋಣ ಪರ್ವತದ ಸಾಲುಗಳತ್ತ. ‘ಬಾ, ತಾಯಿ ನನ್ನ ಮಡಿಲಲ್ಲಿ ವಿಶ್ರಮಿಸು’ ಎಂದು ಪ್ರೀತಿಯಿಂದ ಉಲಿದವು ಗಿರಿಶಿಖರಗಳು. ಹಸಿರುಡುಗೆ ತೊಟ್ಟ ಬೆಟ್ಟ ಗುಡ್ಡಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಉಕ್ಕಿ ಹರಿಯುವ ಹಳ್ಳಕೊಳ್ಳಗಳು, ಕಾನನದಲ್ಲಿ ವಾಸಿಸುವ ಜೀವ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...
ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...
(ಸಬರಮತಿ ಆಶ್ರಮದಲ್ಲೊಂದು ಸುತ್ತು). “ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು”– ಸ್ವಾತಂತ್ರ್ಯ ಹೋರಾಟಗಾರರು ಬಾಪೂ ಜೊತೆ ಧ್ವನಿಗೂಡಿಸುತ್ತಾ ದೇವರಲ್ಲಿ ಮೊರೆಯಿಡುತ್ತಿದ್ದಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ಬೇಸತ್ತ ಭಾರತೀಯರು, ತಮ್ಮ ತಾಯ್ನಾಡನ್ನು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಮಹಾತ್ಮ ಗಾಂಧೀಜಿಯವರ ಮಾರ್ಗದರ್ಶನದಲ್ಲಿ – ಸತ್ಯ...
ಅಜ್ಜೀ ಅಜ್ಜೀ ಎಲ್ಲಿಗೆ ಹೋಗ್ತಾ ಇದ್ದೀಯಾ?ಬೆಳಗಾಗೆದ್ದು ನಾನು ಎಲ್ಲಿಗೆ ಹೋಗ್ತೀನಿ ಹೇಳು, ಯೋಗ ಕ್ಲಾಸಿಗೆ ಅಲ್ವೇನೋ ಪುಟ್ಟಾ, ನೀನೂ ಬರ್ತೀಯಾ? ಬರ್ತೀನಿ ಅಜ್ಜಿ, ಹೇಗೂ, ಇವತ್ತು ಗಣಪತಿ ಮೆರವಣಿಗೆ ಅಂತ ಶಾಲೆಗೆ ರಜಾ ಕೊಟ್ಟಿದ್ದಾರೆ. ನನಗೊಂದು ಯೋಗ ಮ್ಯಾಟ್ ಕೊಡ್ತೀಯಾ?ಆಯ್ತು ಪುಟ್ಟಾ, ಬಾ ಯೋಗಕೇಂದ್ರಕ್ಕೆ ಹೋಗೋಣ.ಅಜ್ಜೀ, ನಿಮ್ಮ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾನಿನ ಕೆಲವು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ. ಭೂತಾನೆಂಬ ಕಿನ್ನರ ಲೋಕಕ್ಕೆ ಪ್ರವೇಶಿಸಿದಾಕ್ಷಣ ಕಂಡು ಬರುವ ಸ್ವಚ್ಛತೆ, ಶುಭ್ರವಾದ ಪರಿಸರ, ಸುತ್ತಲೂ ಹಸಿರು ಹೊದ್ದು ಮಲಗಿರುವ ಗಿರಿ ಶಿಖರಗಳು, ನೀಲಮಣಿಯಂತೆ ಹೊಳೆಯುವ ಝರಿತೊರೆಗಳು ಮನಸ್ಸಿಗೆ ಮುದವನ್ನುಂಟು ಮಾಡುವುವು. ಎತ್ತ ಕಡೆ ತಿರುಗಿದರೂ ಕಂಡು ಬರುವ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾನ್ ಎಂದಾಕ್ಷಣ ನೆನಪಾಗುವುದು ಅಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಗ್ಗುರುತಾದ ಟೈಗರ್ ನೆಸ್ಟ್. ಭಾರತದ ತಾಜ್ ಮಹಲ್ನಂತೆ, ಪ್ಯಾರಿಸ್ನ ಐಫೆಲ್ ಟವರ್ನಂತೆ ಇದು ಭೂತಾನಿನ ಸಾಂಸ್ಕೃತಿಕ ಐಕಾನ್. ಭೂತಾನಿನ ಪ್ರಮುಖ ನಗರವಾದ ಪಾರೋದಿಂದ ಹತ್ತು ಕಿ.ಮೀ. ದೂರದಲ್ಲಿರುವ ಈ ಗುಹೆಗೆ ‘ಪಾರೋ ತಕ್ತ್ಸಾಂಗ್’ ಎಂಬ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಸಂಜೆ ನಾವೆಲ್ಲಾ ಭೂತಾನಿನ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಉತ್ಸಾಹದಿಂದ ಹೊರಟಿದ್ದೆವು. ‘ಸಿಂಪ್ಲಿ ಭೂತಾನ್’ ಎನ್ನುವ ಹೆಸರಿದ್ದ ಈ ಸಂಸ್ಥೆ ತಮ್ಮ ನಾಡಿನ ಸಂಸ್ಕೃತಿ, ಜನರ ಜೀವನ ಶೈಲಿ, ಅವರ ಆಹಾರ ಪದ್ಧತಿ, ಉಡುಗೆ ತೊಡುಗೆಯ ಪರಿಚಯವನ್ನು ಪ್ರವಾಸಿಗರಿಗೆ ಮಾಡುವುದರ ಜೊತೆಜೊತೆಗೇ ಮನರಂಜನಾ ಕಾರ್ಯಕ್ರಮ ಹಾಗೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ನಾವು ಭೂತಾನಿನ ರಾಜಧಾನಿ ತಿಂಪುವಿನಲ್ಲಿ ಸುತ್ತಾಡುವಾಗ, ಬೆಟ್ಟದ ನೆತ್ತಿಯ ಮೇಲೆ ಧ್ಯಾನಮಗ್ನನಾಗಿ ಕುಳಿತಿದ್ದ ಬೃಹತ್ತಾದ ಬುದ್ಧನ ಬಂಗಾರದ ಮೂರ್ತಿ ಕಾಣುತ್ತಿತ್ತು. ಇದು ಅತ್ಯಂತ ಪ್ರಮುಖವಾದ ಪ್ರವಾಸೀ ತಾಣ. ಇದನ್ನು ಬುದ್ಧ ಪಾಯಿಂಟ್ ಎನ್ನುವರು, ಭೂತಾನೀ ಭಾಷೆಯಲ್ಲಿ ಬುದ್ಧ ದೋರ್ದೆನ್ಮಾ (Buddha Dordenma) ಎಂಬ ನಾಮಧೇಯ....
ನಿಮ್ಮ ಅನಿಸಿಕೆಗಳು…