Category: ಸೂಪರ್ ಪಾಕ

1

ಹಲಸಿನ ಹಣ್ಣು

Share Button

  ಹಲಸಿನ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿರುವುದರಿಂದ ರಕ್ತದ ಒತ್ತಡವನ್ನು ಇಳಿಸುವಲ್ಲಿ ಇದು ಸಹಕಾರಿ. ಇದರಲ್ಲಿರುವ ಪಾಲಿ ನ್ಯೂಟ್ರಿಯೆಂಟ್‌ಗಳು ಕ್ಯಾನ್ಸರ್ ನಿರೋಧಕವಾಗಿ, ಅತಿ ಸಂವೇದನಾಶೀಲ ನಿರೋಧಕವಾಗಿ ಪ್ರಯೋಜನಕಾರಿ ಎನಿಸಿವೆ. ಹಲಸಿನ ಹಣ್ಣನ್ನು ವಿಟಾಮಿನ್ ಸಿ ಯ ಅತ್ಯುತ್ತಮ ಮೂಲ ಎಂದು ಗುರುತಿಸಲಾಗಿದೆ. ತನ್ನಲ್ಲಿನ ಆಂಟಿ ಆಕ್ಸಿಡಾಂಟ್ ಗುಣಲಕ್ಷಣಗಳಿಂದಾಗಿ ಹಲಸಿನಹಣ್ಣು...

2

ಹಲಸಿನ ಸಿಹಿಹಲ್ವ, ಖಾರ ಸೋಂಟೆ

Share Button

  ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ  ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ...

3

ತಗತೆ ಸೊಪ್ಪಿನ ‘ಪತ್ರೊಡೆ’

Share Button

ಈ ಭೂಮಿ ತನ್ನೊಡಲಲ್ಲಿ ಅದೆಷ್ಟು ಬೀಜಗಳನ್ನು ಹುದುಗಿಸಿರುತ್ತದೆಯೋ ಎಂದು ಅಚ್ಚರಿಯಾಗುತ್ತದೆ. ಬೇಸಗೆಯಲ್ಲಿ ಭಣಗುಟ್ಟುವ ನೆಲ ಒಂದೆರಡು ಮಳೆ ಬಿದ್ದೊಡನೆ, ವಿಧವಿಧದ ಸಸ್ಯರಾಶಿ ಮೊಳೆತು ನೆಲ ನೋಡನೋಡುತ್ತಿದ್ದಂತೆಯೇ ಹಸಿರಾಗುತ್ತವೆ. ಇವುಗಳಲ್ಲಿ ಅಲ್ಪಾಯುಷಿಯಾದ, ಅಡುಗೆಗೆ ಬಳಸಬಹುದಾದ ಗಿಡ-ಮೂಲಿಕೆಗಳು ನೂರಾರು. ಹಸಿರಾಗಿ ಕಂಗೊಳಿಸುವ  ‘ ತಗತೆ ಸೊಪ್ಪು/ತಜಂಕ್ ‘ ಅಲ್ಲಲ್ಲಿ ಕಾಣಿಸಿತು...

2

ಹೆರಳೆಕಾಯಿ…ಹೆರಳೆಕಾಯಿ…

Share Button

ಮನೆ ಮುಂದಿನ ರಸ್ತೆಯಲ್ಲಿ ಇಂದು ‘ಹೆರಳೆಕಾಯಿ…ಹೆರಳೆಕಾಯಿ’ ಎಂದು ಕೂಗುತ್ತಾ ಒಬ್ಬರು ಬುಟ್ಟಿ ತುಂಬಾ ಹೆರಳೆಕಾಯಿ ತುಂಬಿಕೊಂಡು ಬರುತ್ತಿದ್ದರು. ನಾಲ್ಕಾರು ಹೆರಳೆಕಾಯಿಗಳನ್ನು ಕೊಂಡೆವು. ಹೆರಳೆಕಾಯಿ ನಿಂಬೆಯ (Citrus) ಜಾತಿಗೆ ಸೇರಿದ ತಳಿ. ವಿಶಿಷ್ಟ ಸುವಾಸನೆ ಮತ್ತು ರುಚಿ ಹೊಂದಿದೆ, ನಿಂಬೆಹಣ್ಣಿನಷ್ಟು ಹುಳಿ ಇಲ್ಲ ಹಾಗೂ ಅದರ ಸಿಪ್ಪೆ ಬಲು...

3

ಉದ್ದಿನ ಸಂಡಿಗೆ

Share Button

  ಬೇಸಗೆಯಲ್ಲಿ ಬಿಸಿಲಿನ ಸದುಪಯೋಗ ಪಡೆದು ಮಾಡಬಹುದಾದ ಕೆಲಸ ವಿವಿಧ ಹಪ್ಪಳ-ಸಂಡಿಗೆಗಳ ತಯಾರಿ. ಉದ್ದಿನಬೇಳೆ ಮತ್ತು ಹಸಿರು ಮೆಣಸಿನಕಾಯಿಗಳನ್ನು ಬಳಸಿ ಸಂಡಿಗೆಯನ್ನು ತಯಾರಿಸುವ ವಿಧಾನ ಹೀಗಿದೆ: ಒಂದು ಲೋಟದಷ್ಟು  (ಸುಮಾರು 100 ಗ್ರಾಮ್) ಉದ್ದಿನಬೇಳೆಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಉದ್ದಿನಬೇಳೆಯನ್ನು ಸೋಸಿ ಮಿಕ್ಸಿಯಲ್ಲಿ...

8

ನೆಲ್ಲಿಕಾಯಿ ಚಟ್ಟು…ಹೊಟ್ಟೆನೋವು ರಟ್ಟು…

Share Button

‘ಅಮ್ಮಾ,ಸೂಟುಕೇಸಲ್ಲಿ ನೆಲ್ಲಿಚಟ್ಟು ಇಟ್ಟಿದ್ದೀಯಾ…ಮರ್ತುಬಿಡ್ಬೇಡ ಮತ್ತೆ..??’..ಮಗಳು ಉವಾಚ…ಅಮೇರಿಕಕ್ಕೆ ಕುಟುಂಬ ಸಮೇತ ಹೊರಡುವ ತಯಾರಿ ನಡೆಯುತ್ತಿತ್ತು..ಎಲ್ಲಾ ಸಾಮಾನುಗಳ ಜೊತೆಗೆ ನೆಲ್ಲಿಚಟ್ಟಿಗೆ ಮೊದಲ ಸ್ಥಾನ…ಹಾಗೆಯೇ ಅದಕ್ಕೆ ವಿದೇಶ ಪ್ರಯಾಣದ ಯೋಗ..!! ಮನೆಯೊಳಗೆ ಅದೊಂದಿದ್ದರೆ ಮನಸ್ಸಿಗೆ ನೆಮ್ಮದಿ.. ನೆಲ್ಲಿಕಾಯಿಯನ್ನು ತಿಳಿಯದವರು ಇಲ್ಲ ಅಂತಲೇ ಹೇಳಬಹುದು.ನಿಸರ್ಗದಲ್ಲಿ ಸಿಗುವ ಪರಿಪೂರ್ಣ ಔಷದೀಯ ಫಲ ಇದಾಗಿದೆ.ಅಮೃತಫಲವೆಂದು ಕರೆಸಿಕೊಳ್ಳುವ...

6

‘ಕಟ್ ಮಂಡಿಗೆ’

Share Button

ಜೈನಕಾಶಿಯೆಂದು ಪ್ರಸಿದ್ಧವಾದ ಮೂಡುಬಿದಿರೆಯಿಂದ, ನನ್ನ ತಂಗಿ ತಂದ ಸ್ಪೆಷಲ್ ಸ್ವೀಟ್ ಇದು. ಇದರ ಹೆಸರು ‘ಕಟ್ ಮಂಡಿಗೆ’ಯಂತೆ. ಬಿಳಿ ಬಣ್ಣದ ಕರವಸ್ತ್ರವನ್ನು ಚೌಕಾಕಾರದಲ್ಲಿ ಮಡಚಿ ಇಟ್ಟಂತೆ ಕಾಣಿಸುತ್ತಿದ್ದ ಈ ಸಿಹಿ ತಿನಿಸು, ಬಹಳ ತೆಳುವಾದ ಪದರಗಳನ್ನು ಹೊಂದಿತ್ತು. ತುಪ್ಪದ ಪರಿಮಳ ಢಾಳಾಗಿದ್ದು, ಬೂರಾ ಸಕ್ಕರೆಯ ಲೇಪವಿತ್ತು. ಹಾಗೆಯೇ...

2

ಕೊಡಸಿಗೆ ಹೂವಿನ ತಂಬುಳಿ

Share Button

ಈಗ ತಾನೇ ಮಾರ್ಚ್ ಕಾಲಿರಿಸಿದೆ. ಆದರೂ ಈಗಲೇ ಸೆಕೆ, ಧಗೆ ಆರಂಭವಾಗಿದೆ. ಮೊನ್ನೆ ಭಾನುವಾರ, ಚನ್ನಪಟ್ಟಣದ ಸಮೀಪದಲ್ಲಿರುವ ‘ವಾಡೆ ಮಲ್ಲೇಶ್ವರ ಬೆಟ್ಟ’ಕ್ಕೆ ಚಾರಣ ಕೈಗೊಂಡಿದ್ದೆವು. ಕಲ್ಲು ಬಂಡೆಗಳಿಂದ ಕೂಡಿದ್ದ ಆ ಬೆಟ್ಟದಲ್ಲಿ ಗಿಡಮರಗಳು ಒಣಗಿ ಕಾಡು ಭಣಗುಡುತಿತ್ತು. ಹೀಗಿದ್ದರೂ, ಅಲ್ಲಲ್ಲಿ ಬಿಳಿಮಲ್ಲಿಗೆಯಂತೆ ಕಂಗೊಳಿಸುತ್ತಿದ್ದ ಸುವಾಸನಾಭರಿತವಾದ ‘ಕೊಡಸಿಗೆ’ ಹೂ...

1

ಅವರೇಕಾಳಿನ ಉಸ್ಲಿ ಮತ್ತು ಬಸ್ಸಾರು

Share Button

    ಅವರೆಕಾಯಿಯ ಸೀಸನ್ ಆರಂಭವಾಗಿ ಕೆಲವು ದಿನಗಳಾದವು… ನಮ್ಮ ಅಡುಗೆಮನೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತವಾದರೂ ಅವರೇಕಾಯಿಯನ್ನು ಅಷ್ಟಾಗಿ ಸ್ವಾಗತಿಸಿರಲಿಲ್ಲ. ಯಾಕೆಂದರೆ ಅದರ ವಿವಿಧ ಅಡುಗೆ/ತಿಂಡಿಗಳು ಬಹಳ ರುಚಿ ಇರುತ್ತವಾದರೂ ತಿಂದ ಮೇಲೆ “ಕಾಲಪುರುಷಂಗೆ ಗುಣಮಣಮಿಲ್ಲಂಗಡ…ಜಡಂಗಡ….ಒಡಲೊಳು ಗುಡುಗುಟ್ಟುಂಗಡ “ ಎಂಬ ಮುದ್ದಣ ಕವಿಯ  ಹಳೆಗನ್ನಡ ಕಾವ್ಯದ ಸಾಲನ್ನು...

6

ದೋಸೆಪ್ರಿಯ   ಕರಾವಳಿಗರು

Share Button

  ನಮ್ಮ ಅವಿಭಜಿತ  ದಕ್ಷಿಣಕನ್ನಡದ   ಬಹುತೇಕ  ಮನೆಗಳಲ್ಲಿ  ಬೆಳಗಿನ ತಿಂಡಿಗೆ  ದೋಸೆ.  ವಿವಿಧತೆಯಲ್ಲಿ  ಏಕತೆ  ಇರುವ ಹಾಗೆ  ವಿವಿಧ  ನಮೂನೆಯ   ತಿಂಡಿ ಇದ್ದರೂ  ಎಲ್ಲಕ್ಕು  ಮೂಲ ನಾಮ  ದೋಸೆ.   ಅದರಲ್ಲೂ  ಸೀಸನಲ್  ಬೇರೆ!    ಹಾಗೆಂದರೆ   ಸೌತೆಕಾಯಿ  ಬೆಳೆವ ಸೀಸನ್ ನಲ್ಲಿ...

Follow

Get every new post on this blog delivered to your Inbox.

Join other followers: