‘ಕಟ್ ಮಂಡಿಗೆ’
ಜೈನಕಾಶಿಯೆಂದು ಪ್ರಸಿದ್ಧವಾದ ಮೂಡುಬಿದಿರೆಯಿಂದ, ನನ್ನ ತಂಗಿ ತಂದ ಸ್ಪೆಷಲ್ ಸ್ವೀಟ್ ಇದು. ಇದರ ಹೆಸರು ‘ಕಟ್ ಮಂಡಿಗೆ’ಯಂತೆ. ಬಿಳಿ ಬಣ್ಣದ ಕರವಸ್ತ್ರವನ್ನು ಚೌಕಾಕಾರದಲ್ಲಿ ಮಡಚಿ ಇಟ್ಟಂತೆ ಕಾಣಿಸುತ್ತಿದ್ದ ಈ ಸಿಹಿ ತಿನಿಸು, ಬಹಳ ತೆಳುವಾದ ಪದರಗಳನ್ನು ಹೊಂದಿತ್ತು. ತುಪ್ಪದ ಪರಿಮಳ ಢಾಳಾಗಿದ್ದು, ಬೂರಾ ಸಕ್ಕರೆಯ ಲೇಪವಿತ್ತು.
ಹಾಗೆಯೇ ತಿಂದರೆ ಸಿಹಿ ಸ್ವಲ್ಪ ‘ಅತಿ’ ಎನ್ನಿಸುವಷ್ಟಿತ್ತು. ಸ್ವಲ್ಪ ಹಾಲು ಸೇರಿಸಿ ತಿಂದರೆ ಸಿಹಿ ಸರಿಯಾಗುತ್ತದೆ. ರುಚಿ ಸುಮಾರಾಗಿ ಚಿರೋಟಿ-ಹಾಲು-ಸಕ್ಕರೆಯಂತೆ.
ಮೂಡುಬಿದಿರೆಯ ಆಸುಪಾಸಿನಲ್ಲಿರುವ ಜೈನ ಸಮುದಾಯದವರಿಗೆ ಶುಭ ಸಂದರ್ಭಗಳಲ್ಲಿ ‘ಕಟ್ ಮಂಡಿಗೆ’ ಸಿಹಿ ಇದ್ದರೆ ಬಹಳ ಶ್ರೇಷ್ಠವಂತೆ. ಅಕ್ಕಿಯನ್ನು ನೀರಲ್ಲಿ ರುಬ್ಬಿ, ತೆಳ್ಳಗೆ ಮಾಡಿ, ಕಾದ ಹೆಂಚಿನಲ್ಲಿ ನಾಜೂಕಿನಿಂದ ಸವರಿದಾಗ , ವೇಫರ್ ನಂತಹ ತೆಳು ಪದರ ಸೃಷ್ಟಿಯಾಗುತ್ತದೆ. ಇದನ್ನು ತೆಗೆದು, ಅದರ ಮೇಲೆ ತುಪ್ಪ-ಪುಡಿ ಮಾಡಿದ ಸಕ್ಕರೆ ಸವರುತ್ತಾರೆ. ಇದರ ಮೇಲೆ ಇನ್ನೊಂದು ಪದರ…ಇನ್ನೊಮ್ಮೆ ತುಪ್ಪ-ಸಕ್ಕರೆ….ಮತ್ತೊಂದು ಪದರ….ಮತ್ತೊಮ್ಮೆ ತುಪ್ಪ-ಸಕ್ಕರೆ….ಹೀಗೆ ಪುನರಾವರ್ತನೆಗೊಂಡಾಗ ‘ಕಟ್ ಮಂಡಿಗೆ’ ಸಿದ್ಧವಾಗುತ್ತದೆ ( ಮಾಹಿತಿ : ಅಂತರ್ಜಾಲ)
– ಹೇಮಮಾಲಾ.ಬಿ
Wow! Nice information 🙂
https://www.facebook.com/Paper-Sweet-Katmandige-1053005471409298/
contact to order-9482847978
ಮೇಡಮ್ ಇದು ಆಂಧ್ರ ಸ್ಪೆಷಲ್ ಸ್ವೀಟ್, ಪುಟರೇಕು ಅಂತ ಇದರ ಹೆಸರು.
ಇಲ್ಲ ಇದು ನಮ್ಮ ಜೈನ ಕಾಶಿ ಮೂಡಬಿದ್ರೆಯ ಸಿಹಿತಿನಿಸು. ಜೈನರ ಶುಭ ಸಮಾರಂಭಗಳಲ್ಲಿ ಇದನ್ನು ತಯಾರಿಸುತ್ತಾರೆ.
https://www.facebook.com/Paper-Sweet-Katmandige-1053005471409298/
contact to order-9482847978
ಮೊನ್ನೆ ತಾನೇ ಮೂಡಬಿದಿರೆಯ ಪಡಿವಾಳ್ ಜೈನ್ ಹೊಟೇಲ್ನಲ್ಲಿ ಖರೀದಿಸಿ ಆಸ್ವಾದಿಸಿದೆವು. ನಿಜವಾಗಿಯೂ ವಿಶಿಷ್ಟ ತಿನಿಸು. ನಮ್ಮ ಮಲೆನಾಡಿನ ತೊಡೆದೀವನ್ನು ಹೋಲುತ್ತದಾದರೂ ಅದಕ್ಕಿಂತ ಶ್ರೀಮಂತ ಹಾಗೂ ಸ್ವಾದಿಷ್ಟ. ಒಂದು ಕರವಸ್ತ್ರದಂತಹ ಹಲವು ಮಡಿಕೆಗಳ ಸಿಹಿಗೆ 135 ರೂ ದರ. ಆದರೂ ಓ ಕೆ !