ಹಲಸಿನ ಹಣ್ಣು
ಹಲಸಿನ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿರುವುದರಿಂದ ರಕ್ತದ ಒತ್ತಡವನ್ನು ಇಳಿಸುವಲ್ಲಿ ಇದು ಸಹಕಾರಿ. ಇದರಲ್ಲಿರುವ ಪಾಲಿ ನ್ಯೂಟ್ರಿಯೆಂಟ್‌ಗಳು ಕ್ಯಾನ್ಸರ್ ನಿರೋಧಕವಾಗಿ, ಅತಿ ಸಂವೇದನಾಶೀಲ ನಿರೋಧಕವಾಗಿ ಪ್ರಯೋಜನಕಾರಿ ಎನಿಸಿವೆ. ಹಲಸಿನ ಹಣ್ಣನ್ನು ವಿಟಾಮಿನ್ ಸಿ ಯ ಅತ್ಯುತ್ತಮ ಮೂಲ ಎಂದು ಗುರುತಿಸಲಾಗಿದೆ. ತನ್ನಲ್ಲಿನ ಆಂಟಿ ಆಕ್ಸಿಡಾಂಟ್ ಗುಣಲಕ್ಷಣಗಳಿಂದಾಗಿ ಹಲಸಿನಹಣ್ಣು ವಿಶೇಷವೆನಿಸಿದೆ.
ಹಣ್ಣಿನಲ್ಲಿರುವ ಐಸೋಫ್ಲೇವೂನ್ಸ್, ಆಂಟಿ ಆಕ್ಸಿಡಾಂಟ್ ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಈ ಎಲ್ಲ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಲಕ್ಷಣಗಳು ಹೊಂದಿವೆ. ಹಲಸಿನ ಹಣ್ಣಿನಲ್ಲಿ ಅಲ್ಸರ್ ನಿರೋಧಕ ಗುಣವೂ ಇದ್ದು, ಅಜೀರ್ಣದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ ಎನಿಸಿದೆ. ಇದರಲ್ಲಿರುವ ಮುಪ್ಪು ನಿರೋಧಕ ಗುಣದಿಂದಾಗಿ ಈ ಹಣ್ಣು ಜೀವಕೋಶಗಳ ಶಿಥಿಲೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಮನುಷ್ಯನ ಶರೀರಕ್ಕೆ ಅವಶ್ಯವಿರುವ ಪ್ರೋಟೀನ್ಸ್. ಕಾರ್ಬೋಹೈಡ್ರೇಟ್ಸ್ ಮತ್ತು ವಿಟಾಮಿನ್‌ಗಳು ಹಲಸಿನ ಹಣ್ಣಿನಲ್ಲಿ ಹೇರಳವಾಗಿದೆ. ಹಲಸಿನ ಹಣ್ಣಿನಲ್ಲಿ ಕೆಲವೇ ಕ್ಯಾಲೊರಿಗಳಿದ್ದು ಇದರಲ್ಲಿ ಕೊಬ್ಬಿನ ಅಂಶವು ಬಹಳ ಕಡಿಮೆ ಇರುವ ಕಾರಣ ದೇಹದ ತೂಕವನ್ನು ಇಳಿಸಬೇಕು ಎನ್ನುವವರಿಗೆ ಇದು ಒಳ್ಳೆಯ ಆಹಾರ ಆದರೆ ಮಧುಮೇಹದಿಂದ ಬಳಲುವ ರೋಗಿಗಳಿಗೆ ಇದು ಒಳ್ಳೆಯದಲ್ಲ. ನೀವು ಮಲಬದ್ಧತೆಯಿಂದ ಬಳಲುತ್ತಿರುವಿರಾದರೆ ನಿತ್ಯವೂ ಹಲಸಿನ ಹಣ್ಣನ್ನು ಸೇವಿಸಿ ಮಲಬದ್ಧತೆಯನ್ನು ಖಂಡಿತವಾಗಿಯೂ ನಿವಾರಿಸಿಕೊಳ್ಳಬಹುದು.
– ಅಜಿತ್. ಕೆ ಕೋಡಿಂಬಾಳ
ಪಥ್ಯಾಹಾರ ವಿಭಾಗ, ಆಳ್ವಾಸ್ ಕಾಲೇಜ್
ಹ.ಹಣ್ಣು ಸೂಪರ್