ಬೆಳಕು-ಬಳ್ಳಿ

ಕ್ಷಣದ ರುಚಿಗಾಗಿ

Share Button

ಹುಡುಕುತ ಹುಡುಕುತ
ಇನ್ನೆಲ್ಲೋ ಸಾಗುವುದು
ಏನನ್ನೋ ಹುಡುಕುತ್ತಾ ಮನಸ್ಸು

ಇರುವುದು ಸಾಲದೆ
ಇಲ್ಲದಿರುವುದ ಅರಸುತ
ತುಂಬಿಕೊಳ್ಳುವುದು ನೂರು ಕನಸು

ಹುಡುಕುವುದು ಮುಗಿಯದು ಎಂದೂ
ತಂದಿಡಲಾಗದು ಎಲ್ಲವನ್ನೂ ಇಂದು
ಮನಸ್ಸು ಬರಿದಾಗಿದೆ ನೊಂದು ಬೆಂದು

ಇರುವುದು ಸಾಲದೇನಿಸುವುದು
ಇನ್ನೊಂದು ಮಗದೊಂದು ಬೇಕೆನಿಸುವುದು
ಮನಸ್ಸು ಸದಾ  ಹಪಹಪಿಸುವುದು

ಜೊತೆಗಿರುವುದು ಬೇಕೆನಿಸದು
ತಾಟಲ್ಲಿರುವುದು ಬಾಯಿಗೆ ರುಚಿಸದು
ಇದ್ದೂ ಇಲ್ಲದಂತಾಗುವುದು ಇರುವುದು

ಕ್ಷಣದ ರುಚಿಗಾಗಿ ಎಸ್ಟೊಂದು ತವಕ
ಎದೆಯೊಳಗೆ ಇನ್ನಿಲ್ಲದ ಪುಳಕ
ಕೊನೆಗೆ ಬದುಕಾಗುವುದು ನರಕ

ಮನದ ತುಂಬಾ ತುಂಬಿಕೊಂಡು ಕೊಳಕ
ಕಾಣದೆ ಹೋಗುವೆವು ಕಣ್ಣೆದುರ ಬೆಳಕ
ಅರಿಯದೆ ಹೋಗುವೆವು ಎಲ್ಲವೂ ಕ್ಷಣಿಕ

ನಾಗರಾಜ್ ಜಿ.ಎನ್. ಬಾಡ, ಕುಮಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *